ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ವತಿಯಿಂದ ಶಿಕ್ಷಕ ದಿನಾಚರಣೆ
ವಿಜಯಪುರ,ಸೆ.9:ವಿಜಯಪುರ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ವಿಜಯಪುರ ಜಿಲ್ಲಾ ನೂತನ ಛಾಯಾ ಗ್ರಾಹಕರ ಸಂಘದ ಸಹಯೋಗದಲ್ಲಿ ಓಂ ಡಿಜಿಟಲ್ ಸ್ಟೂಡಿಯೋ ಆಯೋಜಿಸಿದ ಗುರುವಂದನಾ ಕಾರ್ಯಕ್ರಮ ಜರಗಿತು.
ಗುರುವಿನ ಗುಲಾಮನಾಗುವತನಕ ದೊರೆಯದನ್ನ ಮುಕುತಿ ಈ ಮಾತು ಎಲ್ಲ ಕಾಲಕ್ಕೂ ಎಲ್ಲಕ್ಷೇತ್ರದಲ್ಲಿ ಅನ್ವಯವಾಗುತ್ತದೆ. ಅದಕ್ಕೆ ಅತ್ಯಂತ ಸೂಕ್ತ ಉದಾಹರಣೆ ಇಂದಿನ ಈ ಗುರುವಂದನಾ ಕಾರ್ಯಕ್ರಮವೇ ಸಾಕ್ಷಿ. ಶಿಕ್ಷಕರ ದಿನಾಚರಣೆ ಕೇವಲ ಶಾಲೆಗಳಲ್ಲಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸೀಮಿತದಾದುದ್ದಲ.್ಲ ಛಾಯಾಗ್ರಹಣದ ವಿದ್ಯೆ ಕಲಿಸುವ ಮೂಲಕ ಬೋರಗಿ ಪರಿವಾರದವರ ಮಾರ್ಗದರ್ಶನದಲ್ಲಿ ಫೆÇೀಟೋಗ್ರಫಿಯ ಎಲ್ಲ ಸೂಕ್ಷ್ಮತೆಗಳನ್ನು ಕಲಿಸಿ ಎμÉ್ಟೂೀ ನಿರುದ್ಯೋಗಿ ಯುವಕರಿಗೆ ಜೀವನ ರೂಪಿಸಿ ಸಮಾಜದಲ್ಲಿ ಬದುಕಲು ದಾರಿಮಾಡುಕೊಟ್ಟಿದ್ದಾರೆ. ಇಂತಹ ಗುರುಗಳಿಗೆ ಓಂ ಡಿಜಿಟಲ್ ಸ್ಟೂಡಿಯೋ ಮಾಲಿಕರು ಛಾಯಾಗ್ರಾಹಕರು ಆದ ಸಂತೋಷ ಹಂಜಗಿಯವರು ಆ ಗುರುವಿಗೆ ಗೌರವಿಸುವ ಮೂಲಕ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ಸಾರ್ಥಕಗೊಳಿಸಿದ್ದಾರೆ ಎಂದು ವಿಜಯಪುರ ಮಹಾನಗರ ಪಾಲಿಕೆಯ ಸದಸ್ಯ ಶಿವರುದ್ರ ಬಾಗಲಕೋಟ ಅವರು ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ವಿಜಯಪುರ ಜಿಲ್ಲಾ ನೂತನ ಛಾಯಾ ಗ್ರಾಹಕರ ಸಂಘದ ಸಹಯೋಗದಲ್ಲಿ ಓಂ ಡಿಜಿಟಲ್ ಸ್ಟೂಡಿಯೋ ಆಯೋಜಿಸಿದ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರಿಯರಿಗೆ ಸನ್ಮಾನಿಸಿ ಮಾತನಾಡಿದರು.
ಮಹಾನಗರ ಪಾಲಿಕೆಯ ಇನ್ನೋರ್ವ ಸದಸ್ಯ ರಾಹುಲ್ ಜಾಧವ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಭಾರತ ದೇಶ ಯಾವತ್ತೂ ಗುರು ಶಿಷ್ಯರ ಅವಿನಾಭಾವ ಸಂಬಂಧದ ಮೂಲಕ ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ. ಕ್ಷೇತ್ರ ಯಾವುದಾದರೇನು ಗುರು ಶಿಷ್ಯರ ಸಂಬಂಧ ಮಾತ್ರ ಪವಿತ್ರವಾದ್ದದ್ದು. ಈ ಕಾರ್ಯಕ್ರಮ ಅತ್ಯಂತ ಸೂಕ್ತ ಮತ್ತು ಶ್ಲಾಘನೀಯ ಎಂದರು.
ಇನ್ನೊಬ್ಬ ಮುಖ್ಯ ಅತಿಥಿ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಹಕರ ಸಂಘದ ಅಧ್ಯಕ್ಷÀ ರಮೇಶ ಚವ್ಹಾಣ ಮಾತನಾಡಿ, ಇಂದಿನ ಆಧುನಿಕ ಮತ್ತು ವೇಗದ ಜಗತ್ತಿನಲ್ಲಿ ವೈಜ್ಞಾನಿಕದ ಸಾಧನೆಗಳಿಂದ ಡಿಜಿಟಲ್ ಗುರುವಾಗಿದೆ. ಆದರೆ ಇದನ್ನು ಮೀರಿ ಸಾವಿರಾರು ವರ್ಷಗಳ ಹೀದೆ ನಮ್ಮ ದೇಶದಲ್ಲಿ ಗುರು ಪರಂಪರೆ ಇಡೀ ವಿಶ್ವಕ್ಕೆ ಮಾದರಿಯಾಗಿತ್ತು. ಜಗತ್ತಿನಲ್ಲಿ ಯಾರು ಮೋಸ ಮಾಡಿದರೂ ಗುರು ತನ್ನ ಶಿಷ್ಯರಿಗೆ ಮೋಸ ಮಾಡಲಾg.À ತನ್ನಲ್ಲಿರುವ ಎಲ್ಲ ವಿದ್ಯೆಯನ್ನು ಧಾರೆ ಎರೆದು ತನ್ನ ಶಿಷ್ಯರ ಜೀವನ ರೂಪಿಸಿದ ಉದಾಹರಣೆ ಇದೆ. ಅಂಥ ಶಿಕ್ಷಕ ವೃತ್ತಿಯಿಂದ ಅನೇಕ ಸಾಧಕರ ಸಾಧನೆ ಅಜರಾಮರವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿರಿಯ ಛಾಯಾಗ್ರಾಹಕ ಚಿದಂಬರ ಕುಲಕರ್ಣಿ ಗುರು ಪರಂಪರೆಯ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಗುರು ವಂದನಕ್ಕೆ ಭಾಜನರಾದ ವನಿತಾ ಅರುಣ ಬೋರಗಿ, ರಾಯಪ್ಪಾ ಬೋರಗಿ ಮತ್ತು ಜ್ಯೋತಿ ರಾಯಪ್ಪ. ಬೊರಗಿ ಅವರನ್ನು ಸಾವಿತ್ರಿ ಮಂಟೂರ, ಗೋಪಾಲ ಕಬಾಡೆ, ಮದನ ವಗ್ಯಾನವರ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಕಾರ್ಯದರ್ಶಿ ಸತೀಶ ಕಲಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಲ್ಪಾ ಶಹಾಪೂರ. ಕಾರ್ಯಕ್ರಮ ನಿರುಪಿಸಿದರು, ವೇದಿಕೆಯಲ್ಲಿ ಸಂತೋಷ ಮುತ್ತಪ್ಪ ಹಂಜಗಿ ಇದ್ದರು.
ಕಾರ್ಯಕ್ರಮದಲ್ಲಿ ರಾಜುಸಿಂಗ್ ರಜಪೂತ, ಗುರುಬಾಳಪ್ಪ ಗಲಗಲಿ, ಮಲ್ಲಿಕಾರ್ಜುನ ಪಾರ್ವತಿ, ಪವನಕುಮಾರ ಅಂಗಡಿ, ಸಂಜೀವ್ ಕುಂಬಾರ, ಮೋಹನಸಿಂಗ್ ರಜಪೂತ, ಗೌಡಪ್ಪಗೌಡ ಬಿರಾದಾರ, ಶಶಿ ಕುಂಬಾರ, ರವಿ ಕಟಗೇರಿ, ಅನಂತ ಭೋಸಲೆ, ಬಾಳು ಕಲಾಲ, ಚಂದ್ರಶೇಖರ ವಡ್ಡರ, ಕಿಶೋರ ಖಂಡಾಗಳೆ, ಆದಿಲ್ ಜಮಖಂಡಿ, ಮಹಾದೇವಿ ಸರ್ಜಾಪುರ, ದೀಪಾ ಸಂತೋಷ ಹಂಜಗಿ, ಸುನೀಲ ಬಿರಾದಾರ, ಸುನೀಲ ರಾಠೋಡ, ಸದಾಶಿವ ಘೋರ್ಫಡೆ, ಸುಭಾಸ ಪವಾರ, ಚಂದ್ರು ಕಬಾಡೆ, ಅಭಿ ವಾಲಿ, ಶಶಿ ಕಾಸೆ, ರೋಹಿತ ಬಳಿಗೇರ, ಪ್ರಕಾಶ ಹಳಿಜೋಳ, ಶ್ರೀಶೈಲ ಬಡಚಿ, ಗಿರೀಶ ಸಂಗಲದ, ಪರಶುರಾಮ ಕಬಾಡೆ, ಸಚಿನ್ ಸಾಳುಂಕೆ, ದಾನು ಬಾಳಿ, ಸಂಜು ಕಾಜಗಾರ, ಸುಗುರೇಶ ಗುಲ್ಫಿ, ಕಿರಣ ನೀನೆ, ರಾಜು ಧನ್ಯಾಳ ಸೇರಿದಂತೆ ಜಿಲ್ಲೆಯ ಛಾಯಾಗ್ರಾಹಕರು ಉಪಸ್ಥಿತರಿದ್ದರು.