ವಿಜೃಂಭಣೆಯಿಂದ ಜರುಗಿದ ಉಳೇಶ್ವರ ಜಾತ್ರಾ ಮಹೋತ್ಸವ
ತಾಳಿಕೋಟೆ:ಸೆ.9: ಸ್ಥಳೀಯ ಪುರಾತನ ಮಠವಾದ ಶ್ರೀ ಉಳೇಶ್ವರ ಮಠದ ಶ್ರೀ ಉಳೇಶ್ವರರ ಜಾತ್ರಾಮಹೋತ್ಸವವು ಪ್ರತಿ ವರ್ಷದಂತೆ ದಿ.8 ರವಿವಾರರಂದು ವಿಜೃಂಭಣೆಯಿಂದ ಜರುಗಿತು.
ಜಾತ್ರಾಮಹೋತ್ಸವ ಅಂಗವಾಗಿ ಶ್ರೀಗಳ ಗದ್ದುಗೆಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ಹಾಗೂ ಮಹಾ ಮಂಗಳಾರತಿ ಜರುಗಿತಲ್ಲದೇ ನಂತರ ಸಮಸ್ತ ಭಕ್ತಾಧಿಗಳು ಅನ್ನಪ್ರಸಾದ ಸೇವಿಸಿ ಭಕ್ತಿಭಾವ ಮೆರೆಯುವುದರೊಂದಿಗೆ ಶ್ರೀಗಳ ಕೃಪೆಗೆ ಪಾತ್ರರಾದರು.
ನಂತರ ಜರುಗಿದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸಂಗೀತ ಸಂಜೆ ಹಾಗೂ ನೃತ್ಯ ಕಾರ್ಯಕ್ರಮ ಜರುಗಿದವಲ್ಲದೇ ಅನೇಕ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಿ ಶ್ರೀಗಳ ಕೃಪೆಗೆ ಪಾತ್ರರಾದರು.
ಶ್ರೀ ವೀರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶಿಸಲಾಯಿತಲ್ಲದೇ ಸಂಗೀತ ಶಿಕ್ಷಕರಾದ ದೀಪಕಸಿಂಗ್ ಹಜೇರಿ, ಕಾಶಿನಾಥ ಕಾರಗನೂರ ಹಾಗೂ ಕುಮಾರಿ ಭಾಗ್ಯ ಇಲಕಲ್ಲ್ ಅವರು ತಮ್ಮ ಸಂಗೀತ ಕಲೆಯನ್ನು ಪ್ರದರ್ಶಿಸಿದರು.
ಆಶ್ರಯ ಕಾಲೋನಿಯ ಮಾರುತೇಶ್ವರ ಚಿಕ್ಕಮಕ್ಕಳ ಭಜನಾ ಮಂಡಳಿಯವರಿಂದ ಅಖಂಡ ರಾತ್ರಿ ಭಜನೆ ಜರುಗಿತು.
ಈ ಜಾತ್ರಾಮಹೋತ್ಸವದ ನೇತೃತ್ವವನ್ನು ವಿನೋದಕುಮಾರ ಚಿಕ್ಕಮಠ ಅವರು ವಹಿಸಿದ್ದರು.
ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ವ್ಯವಸ್ಥಾಪಕರಾದ ವೇ.ಮುರುಘೇಶ ವೀರಕ್ತಮಠ ಹಾಗೂ ಗೋವಿಂದಸಿಂಗ್ ಮೂಲಿಮನಿ, ವುಳ್ಳೇಸಯ್ಯ ಚಿಕ್ಕಮಠ, ಶಿವಯ್ಯ ಹಿರೇಮಠ, ಶಾಂತಯ್ಯ ಹಿರೇಮಠ, ಬಸವರಾಜ ಬಾಗೇವಾಡಿ, ಶ್ರೀಕಾಂತ ಪತ್ತಾರ, ಮಂಜುನಾಥ ಮೀರಜಕರ, ಈರಣ್ಣ ಹಿರೇಮಠ, ಹಿಮ್ಮತಸಿಂಗ್ ಹಜೇರಿ, ಸಂಗಯ್ಯ ದುರ್ಗದಮಠ, ಶ್ರೀನಿವಾಸ ಚವ್ಹಾಣ, ಮೌನೇಶ ಬಡಿಗೇರ, ಶಾಂತಯ್ಯ ವಿಭೂತಿ ಮೊದಲಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಗಣ್ಯಮಾನ್ಯರಿಗೆ ಹಾಗೂ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.