ಹಿಂದೂ ಮಹಾ ಗಣಪತಿ ಮಹಾ ಮಂಡಳಿಗೆ 11ನೇ ವಾರ್ಷಿಕ ಸಂಭ್ರಮ
ತಾಳಿಕೋಟೆ:ಸೆ.9: ಪಟ್ಟಣದ ತಿಲಕ ರಸ್ತೆ ಬಡಾವಣೆಯಲ್ಲಿ ಸನಾತನ ಧರ್ಮದ ಸಂದೇಶ ಸಾರುವ ನಡೆಯ ಮೇಲೆ ಹಿಂದೂ ಧರ್ಮದ ಸಂದೇಶ ಸಾರುತ್ತಾ ಪಟ್ಟಣದ ಜನರಿಂದ ಮೆಚ್ಚುಗೆಗೆ ಪಾತ್ರವಾಗುತ್ತಾ ಸಾಗಿರುವ ಹಿಂದೂ ಮಹಾ ಗಣಪತಿ ಮಹಾ ಮಂಡಳಿಗೆ 11ನೇ ವರ್ಷದ ವಾರ್ಷಿಕ ಸಂಬ್ರಮ ಹಿನ್ನೇಲೆ ವಿವಿಧ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಪ್ರತಿ ವರ್ಷವು ಹಿಂದೂ ಮಹಾ ಗಣಪತಿ ಮಹಾ ಮಂಡಳಿಯು ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕೆಸರಟ್ಟಿಯ ಶ್ರೀ ಸೋಮಲಿಂಗ ಮಹಾಸ್ವಾಮಿಗಳು, ಮತ್ತು ವೇ.ಸಂತೋಷ ಬಟ್ ಜೋಶಿ ಅವರ ಮುಂದಾಳತ್ವದಲ್ಲಿ ಸನಾತನ ಧರ್ಮ ಉಳುವಿನಡೆಗೆ ಹಿಂದೂ ಧರ್ಮ ಪ್ರಸಾರಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಾಗಿದಂತೆ ಈ ಸಲವೂ ಕೂಡಾ ಅನೇಕ ಸನಾತನ ಧರ್ಮದ ನಡಿಗೆಯ ಮೇಲೆ ವಿವಿಧ ಸಮಾಜಮುಖ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಶನಿವಾರರಂದು ಗಣೇಶ ಮೂರ್ತಿಯ ಪ್ರತಿಷ್ಠಾಪನೆಗೂ ಮುನ್ನ ಶ್ರೀ ಅಂಬಾಭವಾನಿ ಮಂದಿರದಿಂದ ಗಣೇಶ ಉತ್ಸವದ ಭವ್ಯ ಮೆರವಣಿಗೆಗೆ ಕೆಸರಟ್ಟಿ ಶಂಕರಲಿಂಗ ಮಠದ ಶ್ರೀ ಸೋಮಲಿಂಗ ಮಹಾಸ್ವಾಮಿಗಳು ಹಾಗೂ ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಹಾಗೂ ಎಸ್.ಎಸ್.ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ, ಮತ್ತು ಎಂ.ಎಸ್.ಸರಶೆಟ್ಟಿ ಒಳಗೊಂಡಂತೆ ಪುರಸಭಾ ಸದಸ್ಯರುಗಳು ಅಲ್ಲದೇ ವಿವಿಧ ಪ್ರಮುಖರು ಚಾಲನೆ ನೀಡಿದರು.
ವಿವಿಧ ಡೊಳ್ಳು, ವಾದ್ಯಗಳೊಂದಿಗೆ ಸನಾತನ ಹಿಂದೂ ಧರ್ಮದ ಪದ್ದತಿಯಂತೆ ಗಣಪತಿಯನ್ನು ನೇನೆಯುತ್ತಾ ಕತ್ರಿ ಭಜಾರ ಮಾರ್ಗವಾಗಿ, ಶಿವಾಜಿ ಮಹಾರಾಜರ ವೃತ್ತ, ಮಹಾರಾಣಾ ಪ್ರತಾಪಸಿಂಹ್ ವೃತ್ತದ ಮೂಲಕ ತಿಲಕ ರಸ್ತೆಯಲ್ಲಿ ನಿರ್ಮಿಸಲಾದ ಗಣೇಶ ಪ್ರತಿಷ್ಠಾಪನಾ ಮಂಟಪದಲ್ಲಿ ಸಕಲ ವಿಧಿ ವಿದಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು.
ತಾಳಿಕೋಟೆ ಪಟ್ಟಣದಲ್ಲಿ ಗಣೇಶ ಚತುರ್ತಿ ನಿಮಿತ್ಯವಾಗಿ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಗುವ ಗಣೇಶೋತ್ಸವ ಹಬ್ಬದ ಸಂಭ್ರಮಕ್ಕೆ ಚಾಲನೆ ನೀಡಲಾಗಿದ್ದು ಒಟ್ಟು 28 ಬಡಾವಣೆಗಳಲ್ಲಿ ಗಣೇಶ ಮೂರ್ತಿಗಳನ್ನು ವಿವಿಧ ತರುಣ ಸಂಘಗಳ ನೇತೃತ್ವದಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಪಟ್ಟಣದ ಒಟ್ಟು 28 ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳಲ್ಲಿ 5ನೇ ದಿನಕ್ಕೆ 17 ಗಣೇಶ ಮೂರ್ತಿಗಳು ವಿಸರ್ಜನೆಗೊಳ್ಳಲಿದ್ದು 10 ಗಣೇಶ ಮೂರ್ತಿಗಳು 7ನೇ ದಿನಕ್ಕೆ ವಿಸರ್ಜನೆಗೊಳ್ಳಲಿವೆ.
9ನೇ ದಿನಕ್ಕೆ ತಿಲಕ ರಸ್ತೆಯಲ್ಲಿ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯವರ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಯು ವಿಸರ್ಜನೆಗೊಳ್ಳಲಿದೆ.
ಪ್ರತಿವರ್ಷವು ಪಟ್ಟಣದಲ್ಲಿ ಅತ್ಯಂತ ಭಕ್ತಿಭಾವದೊಂದಿಗೆ ಆಚರಿಸಲಾಗುವ ಗಣೇಶ ಉತ್ಸವದಲ್ಲಿ ಈ ಭಾರಿಯೂ ಕೂಡಾ ಭಕ್ತಿಯ ಸಡಗರ ಹೆಚ್ಚಿದ್ದು ವಿವಿಧ ಗಣೇಶ ಮೂರ್ತಿಯ ಪ್ರತಿಷ್ಠಾಪನಾ ತರುಣ ಸಂಘದವರು ವಿವಿಧ ಸಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರೊಂದಿಗೆ ಜನಮೆಚ್ಚುಗೆಗೆ ಪಾತ್ರರಾಗುತ್ತಾ ಸಾಗಿದ್ದಾರೆ.
ತಾಳಿಕೋಟೆ ತಾಲೂಕಿನಲ್ಲಿ ವಿವಿಧ ಗ್ರಾಮಗಳನ್ನೋಳಗೊಂಡು ನಗರವು ಸೇರಿದಂತೆ ಒಟ್ಟು 170 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ ಎಲ್ಲ ಗಣೇಶ ಮೂರ್ತಿಗಳ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಗಣೇಶೋತ್ಸವ ತರುಣ ಸಂಘದ ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಿದ್ದು ಅದರಂತೆ ಪೊಲೀಸ್ ಇಲಾಖೆಯಿಂದಲೂ ಕೂಡಾ ಹೋಮಗಾಡ್ರ್ಸ ಅಲ್ಲದೇ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಪಿಎಸ್‍ಐ ರಾಮನಗೌಡ ಸಂಕನಾಳ, ಅಪರಾಧ ವಿಭಾಗ ಪಿಎಸ್‍ಐ ಆರ್.ಎಸ್.ಭಂಗಿ ಅವರು ತಿಳಿಸಿದ್ದಾರೆ.