ಸುಧಾಕ್ರಾಸ್ ರೈಲ್ ಗೇಟ್ ಕೆಲ ದಿನದಲ್ಲಿ ಶಾಶ್ವತ ಬಂದ್
* ಅಂಡರ್ ಪಾಸ್ ರಚನೆ
* 6 ತಿಂಗಳಲ್ಲಿ ಕಾಮಗಾರಿ
* ಭಾರಿ ವಾಹನಗಳಿಗಿಲ್ಲ ಅವಕಾಶ
* ಫ್ಲೈ ಓವರ್ ಸಹ ಬರಲಿದೆ
* ಕಂಟೋನ್ಮೆಂಟ್ ರೈಲ್ವೇ ಗೇಟ್ ಸಹ
* ಸಾರ್ವಜನಿಕ ವಾಹನ ಓಡಾಟಕ್ಕೆ ನಿಷೇಧ
ಎನ್. ವೀರಭದ್ರಗೌಡ
ಬಳ್ಳಾರಿ, ಸೆ.09: ನಗರದಲ್ಲಿನ ಸಂಚಾರಿ ವ್ಯವಸ್ಥೆ ಸುಧಾರಣೆಗಾಗಿ. ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿದ್ದ ನಗರದಲ್ಲಿನ ಒಂದೊಂದೇ ರೈಲ್ಚೇ ಗೇಟುಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಅವನಗನು ಬಂದ್ ಮಾಡುವ ಕೆಲಸ ನಡೆಯುತ್ತಿದ್ದು.  ಸ್ವಾತಂತ್ರ ಪೂರ್ವದಿಂದಲೂ ಇದ್ದ ಎಸ್.ಎನ್. ಪೇಟೆ, ಕೌಲ್ ಬಜಾರ್ ನ ಮೊದಲ ಗೇಟ್ ನಂತೆ ಈಗ ಸುದ್ರಾಕ್ರಾಸ್ ರೈಲ್ವೇ ಗೇಟನ್ನು ಸಹ ಕೆಲ ದಿನದಲ್ಲಿ ಶಾಶ್ವತವಾಗಿ ಬಂದ್ ಮಾಡಲಿದೆ.
ಕಾರ್ಖಾನೆಗಳ ಸರಕು ಸಾಗಾಣೆ, ಅದಿರು ಸಾಗಾಣೆ ಜೊತೆಗೆ ಪ್ರಾಯಾಣಿಕರ ರೈಲುಗಳ ಹೆಚ್ಚಳದಿಂದ ರೈಲ್ವೇಗೇಟುಗಳನ್ನು ಪದೇ ಪದೇ ಅಂದರೆ ದಿನಕ್ಕೆ 80 ಕ್ಕೂ ಹೆಚ್ಚು ಬಾರಿ ನಗರದಲ್ಲಿನ ರೈಲ್ವೇ ಗೇಟುಗಳನ್ನು ಮುಚ್ಚಿ ತೆರೆಯುವ ಕೆಲಸ ನಡೆಯುತ್ತಿತ್ತು. ಈ ವೇಳೆ ವಾಹನಗಳ ಟ್ರಾಫಿಕ್ ಜಾಮ್ ಸಮಸ್ಯೆ ಜೊತೆಗೆ, ಜನರ ಸಮಯ ಹಾಳಾಗುತ್ತಿತ್ತು.
ಇದಕ್ಕಾಗಿ ಮೊದಲಿಗೆ ಎಸ್.ಎನ್.ಪೇಟೆ ಗೇಟ್ ಬಂದ್ ಮಾಡಿ ಅಂಡರ್ ಪಾಸ್, ನಂತರ ಮೇಲು ಸೇತುವೆ ಮಾಡಿತು.  ಬಳಿಕ‌ ಕೌಲ್ ಬಜಾರ್ ನ ಮೊದಲ ಗೇಟ್ ಬಂದ್ ಮಾಡಿ ಪಕ್ಕದಲ್ಲಿ ಓವರ್ ಬ್ರಿಡ್ಜ್ ಕಟ್ಟಲಾಗಿದೆ. ಎರಡನೇ ಗೇಟ್ ಬಳಿ ಓವರ್ ಬ್ರಿಡ್ಜ್ ಮಾಡುವ ಪ್ರಯತ್ನ ನಡೆದಿದೆ.
ಇನ್ನು ಸುಧಾಕ್ರಾಸ್ ಬಳಿಯ 3 ನೇ ರೈಲ್ವೇ ಗೇಟ್ ನ್ನು ಈಗ  ಕೆಲ ದಿನದಲ್ಲಿ ಶಾಶ್ವತ ಬಂದ್ ಮಾಡಿ, ಇಲ್ಲಿ ಎಸ್.ಎನ್.ಪೇಟೆ ರೀತಿಯಲ್ಲಿ ಮೊದಲಿಗೆ ಅಂಡರ್ ಪಾಸ್ ಮಾಡಲಿದೆ. ಈ‌ಕಾರ್ಯ 4 ರಿಂದ 6 ತಿಂಗಳಲ್ಲಿ
ಮಾಡಲಿದೆಯಂತೆ. ಇಲ್ಲಿ ಕಾರು, ಆಟೋ, ಬೈಕ್ ಸೇರಿದಂತೆ ಮಿನಿ ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ಇರಲಿದೆ. ಅಲ್ಲದೆ ಜನರ ಓಡಾಟಕ್ಕೆ ಸರ್ವೀಸ್ ರಸ್ತೆ ಇರಲಿದೆ.
ಕೆಳಗಡೆ ಅಂಡರ್ ಪಾಸ್ ಇದ್ದರೆ ಮೇಲುಗಡೆ ಟಿ.ಬಿ.ಸ್ಯಾನಿಟೋರಿಯಂ ಸರ್ಕಲ್‌ ನಿಂದ ಸುಧಾಕ್ರಾಸ್ ವರೆಗೆ ಪ್ಲೈ ಓವರ್ ಬರಲಿದೆ. ಇದರ ನಿರ್ಮಾಣ ಕಾಮಗಾರಿ ಈಗಾಗಲೇ ಸುಧಾಕ್ರಾಸ್ ನಿಂದ ರೈಲ್ ಗೇಟ್ ವರೆಗೆ ಆರಂಭಗೊಂಡಿದೆ.  ಈ ಕಾಮಗಾರಿ ಸಂಪೂರ್ಣ ಮುಗಿಯಲು  ಒಂದುವರೆಯಿಂದ ಎರೆಡು ವರ್ಷ ಬೇಕಂತೆ.
ಸಧ್ಯ ಸುಧಾಕ್ರಾಸ್ ರೈಲ್ವೇ ಗೇಟ್ ಬಂದ್ ಮಾಡಲಿದೆ. ಹೊಸಪೇಟೆ ಕಡೆಯಿಂದ ಬರುವ ಮತ್ತು ಹೋಗುವ ವಾಹನಗಳೆಲ್ಲ ಎರಡನೇ ರೈಲ್ವೇ ಗೇಟ್ ಇಲ್ಲ ಮೊದಲ ಗೇಟಿನ ಬಳಿಯ ಓವರ್ ಬ್ರಿಡ್ಜ್ ಮೂಲಕ ಸಂಚರಿಸಬೇಕಂತೆ. ಇನ್ನು ಕಂಟೋನ್ಮೆಂಟ್ ಮೆಂಟ್ ರೈಲ್ವೇ ಗೇಟ್ ನಲ್ಲಿ ಆಂಬ್ಯಲೆನ್ಸ್, ಶಾಲಾ ವಾಹನ ಬಿಟ್ಟರೆ ಇತರೇ ವಾಹನಗಳ ಓಡಾಟಕ್ಕೆ ನಿಷೇಧವಂತೆ.  ಆದರೆ ವಿಮ್ಸ್ ಆಸ್ಪತ್ರೆ ಸಿಬ್ಬಂದಿಗೆ ಮಾತ್ರ ತಮ್ಮ ಐಡಿ ತೋರಿಸಿ ಓಡಾಡಲು ಅವಕಾಶ ನೀಡಲಿದೆಯಂತೆ.
ಸಹಕಾರ ಬೇಕು:
ಟ್ರಾಫಿಕ್ ಸಮಸ್ಯೆ ನಿವಾರಣೆಗೆ ನಗರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳ ನಡೆಯುತ್ತಿವೆ. ಇದರಲ್ಲಿ ಸುಧಾಕ್ರಾಸ್ ಅಂಡರ್ ಪಾಸ್ ಸಹ. ಅದಕ್ಕಾಗಿ ಈ ರಸ್ತೆ ಸಂಪರ್ಕ ಬಂದ್ ಮಾಡಲಿದೆ. ಪರ್ಯಾಯ ವ್ಯವಸ್ಥೆಯಲ್ಲಿಯೇ ಜನ ಸಂಚಾರ ಮಾಡಿ ಸಹಕರಿಸಬೇಕು.
ಅಯ್ಯನಗೌಡ
ಪೊಲೀಸ್ ಇನ್ಸ್ಪೆಕ್ಟರ್,
ಸಂಚಾರಿ ಠಾಣೆ, ಬಳ್ಳಾರಿ.