ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯಗ್ರಾಮ ಮಟ್ಟದಿಂದ ಹೋರಾಟಕ್ಕೆ ಚರ್ಚೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.09: ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರ ನೇಮಕ, ಶಿಕ್ಷಕರ ರಾಜ್ಯ ಪ್ರಶಸ್ತಿ, 371 ಜೆ ಸೌಲಭ್ಯದ ಅನುಷ್ಟಾನದಲ್ಲಿನ ನೂನ್ಯತೆ, ಪಠ್ಯದಲ್ಲಿ 371 ಜೆ ಕುರಿತು  ಸೇರಿಸುವ ಬಗ್ಗೆ ಗ್ರಾಮೀಣ ಮಟ್ಟದಿಂದ  ಹೋರಾಟ ಮಾಡುವ ಬಗ್ಗೆ
ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಚರ್ಚೆ ನಡೆಸಿದೆ.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ನಿನ್ನೆ ಸಂಜೆ ನಗರದ ಲಯನ್ಸ್ ಕ್ಲಬ್ ಆವರಣದಲ್ಲಿ  ಸೆ. 17 ರಂದು ಆಚರಿಸುವ ಕಲ್ಯಾಣ ಕರ್ನಾಟಕದ ಉತ್ಸವ
 ದಿನಾಚರಣೆ ಸಂಬಂಧ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಸಿರಿಗೇರಿ ಪನ್ನರಾಜ್ ಅಧ್ಯಕ್ಷತೆಯಲ್ಲಿ  ಸಾಮಾಜಿಕ ಕಾರ್ಯಕರ್ತರು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರ ಸಭೆ ನಡೆಯಿತು.
ಸಭೆಯಲ್ಲಿ   ಪನ್ನರಾಜ್ ಮಾತನಾಡಿ, ಹೈದರಾಬಾದ್ ಕರ್ನಾಟಕದಿಂದ ಕಲ್ಯಾಣ ಕರ್ನಾಟಕ ಎಂದು ಹೇಗೆ ನಾಮಕರಣಗೊಂಡಿತು, ಮತ್ತು ಸಂವಿಧಾನ ತಿದ್ದುಪಡಿ ಮೂಲಕ ವಿಶೇಷ ಸ್ಥಾನಮಾನ ಕಲ್ಪಿಸುವ 371 (ಜೆ) ಕಲಂ ಅಡಿಯಲ್ಲಿ ನಮ್ಮ ಏಳು ಜಿಲ್ಲೆಗಳಿಗೆ ಆಗುವ ಅನುಕೂಲಗಳು ಏನು , ಅದು ನಾವು ಹೇಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು, ಈ ಬಗ್ಗೆ ಸಾರ್ವಜನಿಕರಲ್ಲಿ ಹಾಗೂ ವಿಶೇಷವಾಗಿ ವಿದ್ಯಾರ್ಥಿ ಸಮುದಾಯಕ್ಕೆ ಜಾಗೃತಿಯನ್ನು ನಮ್ಮ ಸಂಘ ಸಂಸ್ಥೆಗಳ ಪ್ರಮುಖ ಮುಖಂಡರುಗಳು ಅರಿವು ಮೂಡಿಸುವ ಕೆಲಸ ಮಾಡಬೇಕೆಂದು.
ಸೆ.17 ಮಂಗಳವಾರದಂದು ಜಿಲ್ಲಾಡಳಿತದಿಂದ ಮುನಿಸಿಪಾಲ್ ಹೈ ಸ್ಕೂಲ್ ಮೈದಾನದಲ್ಲಿ  ನಡೆಯಲಿರುವ ಧ್ವಜಾರೋಹಣ ಕಾರ್ಯಕ್ರಮಕ್ಕೆ ರಾಜ್ಯದ ಪೌರಾಡಳಿತ  ಸಚಿವ ರಹೀಮ್ ಖಾನ್ ಅವರು ಧ್ವಜಾರೋಹಣ ಮಾಡುವವರು. ಈ ಸಮಾರಂಭಕ್ಕೆ ಜಿಲ್ಲೆಯ ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿ ಮುಂದಿನ ದಿನಗಳಲ್ಲಿ ಗ್ರಾಮಮಟ್ಟದಿಂದ ಜಾಗೃತಿ ಮೂಡಿಸುವ ಕಾರ್ಯ ಮಾಡೋಣ  ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ, ಕನ್ನಡ ಪರ ಹಾಗೂ ಸಾಮಾಜಿಕ ಕಾರ್ಯಕರ್ತರುಗಳಾದ, ನಿಷ್ಟಿ ರುದ್ರಪ್ಪ, ಸಿಂಗಾಪುರ್ ನಾಗರಾಜ್, ಮೋಕ  ಮಲ್ಲಯ್ಯ, ದಾಸಾಪುರ ಅರುಣ್ ಕುಮಾರ್, ಶರಣಗೌಡ ಪಾಟೀಲ್, ಷಣ್ಮುಖಪ್ಪ, ಸಂಗನಕಲ್ ವಿಜಯಕುಮಾರ್, ಈಶ್ವರ ಗುಡಿ ಚಂದ್ರಣ್ಣ, ಎನ್ಟಿಆರ್ ಬಸವರಾಜ್ ಸುನಿಲ್ ಕುಮಾರ್, ಶಾಸ್ತ್ರಿ ನಗರ ಉಮೇಶ್, ಜೆ.ವಿ.ಮಂಜುನಾಥ,  ನಾರಾಯಣಸ್ವಾಮಿ, ಬಿ ಸುರೇಶ್ ನಾಯಕ್, ಜಂತಕಲ್ ವಿನಯ್,
ಜೆ ಮಲ್ಲಮ್ಮ,ಇಂದಿರಾ,ಪುಷ್ಪಲತಾ,
ಅನುರಾಧ, ಸಂಗನಕಲ್ ಚಾಂದ್  ಬಾಷಾ ತಿಪ್ಪೇಸ್ವಾಮಿ ತಬರೇಜ್  ನೂರ್ ಮಹಮ್ಮದ್ ಮುಂತಾದವರು.  ಮುಂದಿನ ದಿನಗಳಲ್ಲಿಕಲ್ಯಾಣ ಕರ್ನಾಟಕದ ಸೌಲಭ್ಯಗಳನ್ನು ಪಡೆಯಲು  ಹೋರಾಟ ಮಾಡಬೇಕಾದ ಅನಿವಾರ್ಯತೆ ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.