ಎಂ.ಜಿ.ಗಣೇಶನ ದರ್ಶನಕ್ಕೆ ಸಾವಿರಾರು ಜನತೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಸೆ.09: ಸಧ್ಯ ನಗರದಲ್ಲಿ ಪ್ರತಿಷ್ಟಾಪನೆ ಮಾಡಿರುವ ಗಣೇಶ ಮೂರ್ತಿಗಳಲ್ಲಿ ಅತ್ಯಾಕರ್ಷಕವಾಗಿರುವುದು  ಸರ್ವಸಿದ್ದಿ ವಿನಾಯಕ ಮಿತ್ರಮಂಡಳಿಯಿಂದ ಪ್ರತಿಷ್ಟಾಪನೆ ಮಾಡಿರುವ ಬಾಲರಾಮ ಗಣೇಶ.
ಗಣೇಶ ಹಬ್ಬದ ಎರಡನೇ ದಿನವಾದ ನಿನ್ನೆ ಭಾನುವಾರ ಸಂಜೆ ಸಾವಿರಾರು ಜನರು ಆಗಮಿಸಿ ದರ್ಶನ ಪಡೆದರು.
ಅದೇರೀತಿ  ನಗರದ ಶಾಸಕ ಭರತ್ ರೆಡ್ಡಿ ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಸಹ ಆಗಮಿಸಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಗಣೇಶನ ಹಬ್ಬದ ಅಂಗವಾಗಿ ಇಲ್ಲಿ 25 ಕಿಲೋ ಲಾಡು ಸಿದ್ದಪಡಿಸಿ ಇಟ್ಟಿದ್ದು. ಇದರ ಹರಾಜು ಪ್ರಕ್ರಿಯೆ ನಾಳೆ ನಡೆಯಲಿದೆಂದು ಸರ್ವಸಿದ್ದಿ ವಿನಾಯಕ ಮಿತ್ರಮಂಡಳಿಯ ಸದಸ್ಯರು ತಿಳಿಸಿದ್ದಾರೆ.  ನಾಡಿದ್ದು ಸೆ.11 ಗಣೇಶನ ವಿಸರ್ಜನೆ ನಡೆಯಲಿದೆ.