ರಾಷ್ಟ್ರಕೂಟರ ಇತಿಹಾಸ ಸಾರುವ ಮಂಗಲಗಿ ಸ್ಮಾರಕಗಳು
ಕಾಳಗಿ :ಸೆ.9: ಮಂಗಲಗಿ ಗ್ರಾಮದ ಸ್ಮಾರಕಗಳು ಐತಿಹಾಸಿಕ ರಾಷ್ಟ್ರ ಕೂಟರ ಇತಿಹಾಸ ಸಾರುತ್ತವೆ ಎಂದು ನಾಡಿನ ಹಿರಿಯ ಸಂಶೋಧಕ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು.
ಅವರು ಮಂಗಲಗಿ ಗ್ರಾಮದಲ್ಲಿ ಶಾಂತೇಶ್ವರ ಹಿರಿಯ ಪ್ರಾ.ಶಾಲೆಯ ಆವರಣದಲ್ಲಿ ಕಾಳಗಿ ತಾಲ್ಲೂಕು ಮತ್ತು ವಲಯ ಕಸಾಪ ಹಮ್ಮಿಕೊಂಡ ನಮ್ಮ ಸುತ್ತ ಮುತ್ತಲಿನ ಇತಿಹಾಸ ಅರಿಯೋಣ ಅಭಿಯಾನ. ನಮ್ಮೂರು ನಮಗೆ ಹೆಮ್ಮೆ ಮತ್ತು ಶಿಕ್ಷಕರಿಗೆ ಸತ್ಕಾರ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಮಲ್ಲಿಕಾರ್ಜುನ ದೇವಾಲಯ. ವೀರಭದ್ರೇಶ್ವರ್, ಹನುಮಾನ್ ದೇವಾಲಯಗಳು, ಆಗಸಿ ಬಾಗಿಲು, ವೀರಗಲ್ಲುಗಳು, ಪ್ಯಾಟಿ ಪ್ರದೇಶದ ಸ್ಮಾರಕಗಳು ಕನ್ನಡ ನಾಡಿನ ಇತಿಹಾಸ ತಿಳಿಸುತ್ತವೆ. ಸಾವಿರ ವರ್ಷಗಳ ಹಿಂದೆ ಧರ್ಮ, ಆಧ್ಯಾತ್ಮ, ಶಿಕ್ಷಣ, ಆಡಳಿತ, ಕಲೆ, ಸಾಹಿತ್ಯ, ಸಂಗೀತ ವಿಜೃಂಭಿಸಿದ ನೆಲವೀಡು. ಇಲ್ಲಿಯ ಪ್ಯಾಟಿ ಎಂಬ ಬಡಾವಣೆಯಲ್ಲಿ ವಾಣಿಜ್ಯ ಕೇಂದ್ರವಾಗಿ ನಾಡಿಗೆ ಹೆಸರಾಗಿತ್ತು. ಮಂಗಲಗಿ ಗ್ರಾಮವು ಶೈವ, ವೈಷ್ಣವ, ಜೈನ ಧರ್ಮಿಯರು ಸಾಮರಸ್ಯದಿಂದ ಬಾಳಿ ಬೆಳಗಿದ ಪುಣ್ಯ ಭೂಮಿಯಾಗಿದೆ. ಇಲ್ಲಿಯ ಒಂದೊಂದು ಕಲ್ಲು ಪ್ರಾಚೀನ ಕನ್ನಡಿಗರ ಸಾಧನೆಯನ್ನು ತಿಳಿಸುತ್ತವೆ ಎಂದರು.
ಸಾನಿಧ್ಯ ವಹಿಸಿದ್ದ ಪೂಜ್ಯ ಡಾ ಶಾಂತಸೋಮನಾಥ ಶಿವಾಚಾರ್ಯರು ಮಾತಾನಾಡಿ ಗ್ರಾಮಗಳಲ್ಲಿ ಕನ್ನಡ ಜಾಗೃತಿ ಮೂಡಿಸುವ ಮತ್ತು ಸಾಧಕರಿಗೆ ಪೆÇ್ರೀತ್ಸಾಹ ನೀಡುವ ಕಾರ್ಯ ಕ.ಸಾ.ಪ ಘಟವು ಮಾಡುತ್ತಿರುವುದು ಶ್ಲಾಘನಿಯ. ಕಾಳಗಿ ತಾಲೂಕು ಕಸಾಪ ಅಧ್ಯಕ್ಷ ಸಂತೋಷ ಕುಡಳ್ಳಿ ಮಾತನಾಡಿ ತಾಲೂಕಿನ ಪ್ರತಿ ಗ್ರಾಮದ ಇತಿಹಾಸ ತಿಳಿಸುವ ಸಾಹಿತ್ಯ ಮತ್ತು ಕನ್ನಡ ಅಭಿಯಾನ ನಿರಂತರ ನಡೆಯುತ್ತದೆ.
ಕಲಬುರಗಿ ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ರವೀಂದ್ರಕುಮಾರ್ ಭಂಟನಳ್ಳಿ ಮಾತಾನಾಡಿ ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ನೀಡಬೇಕು. ಹೆತ್ತವರನ್ನು ಗೌರವಿಸಬೇಕು ಎಂದರು. ಎ.ಬಿ.ವಿ.ಪಿ ಈಶಾನ್ಯ ಪ್ರಧಾನ ಕಾರ್ಯದರ್ಶಗಳಾದ ಮಂಜುನಾಥ. ಮಕ್ಕಳ ಉದ್ದೇಶಿಸಿ ಮಾತನಾಡಿದರು. ವಲಯ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಉಪ್ಪಾಣಿ ಪ್ರಾಸ್ತಾವಿಕವಾಗಿ ಮಾತಡನಾಡಿದರು. ಮುಖಂಡ ಸಂತೋಷ ಚವ್ಹಾಣ ಗ್ರಾ.ಪಂ. ಸದಸ್ಯರು ಮಾತನಾಡಿ ಪರಿಷತ್ತಿನ ಸದಸ್ಯರು ನಮ್ಮ ಗ್ರಾಮಕ್ಕೆ ಬಂದು ಕನ್ನಡದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಿದ್ದಾರೆ, ಶಿಕ್ಷಕ ಶೆಬ್ಬೀರ್ ಶಬ್ಬಿರಮಿಯಾ ಮಸಲ್ದಾರ ಶಿಕ್ಷಕರ ಜವಾಬ್ದಾರಿ ಕುರಿತು ಮಾತನಾಡಿದರು. ಹಾಗೂ ಕೊಡದೂರ ಗ್ರಾ. ಪಂ. ಅಧ್ಯಕ್ಷರಾದ ಮಲ್ಲಪ್ಪ ದಿಗ್ಗಾಂವ, ಗ್ರಾಮ ಮಟ್ಟದಲ್ಲಿ ನಿರಂತರವಾಗಿ ಐತಿಂಹಾಸಿಕ ಸ್ಥಳಗಳ ಕುರಿತು ಮತ್ತು ಸ್ಮಾರಕಗಳ ಮಾಹಿತಿ ನೀಡುತ್ತಿರುವುದರಿಂದ ಕಸಾಪಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇವೆ.ಇದೆ ಸಂದರ್ಭದಲ್ಲಿ ಉತ್ತಮಸೇವೆ ಸಲ್ಲಿಸುತ್ತಿರುವ ಶಿಕ್ಷಕರಾದ ಶಬ್ಬಿರಮಿಯಾ, ಜಗ್ನನಾಥ ವಿ.ಬಡಿಗೇರ, ಮಾಣಿಕರಡ್ಡಿ ವರವಟ್ಟಿ, ಬಸವಂತರಾಯ ಪೆದ್ದಿ, ರೇವಣಸಿದ್ದಯ್ಯ ಸೋಪೈಗೋಳ, ಗುಂಡಪ್ಪ ಹೊಸಳ್ಳಿ, ಮಹೆಬೂಬ ಕೆ.ಎಂ. ಸೂರ್ಯಕಿರಣ, ಶಾಂತಕುಮಾರ ಸಾಲಹಳ್ಳಿ, ಸಿದ್ದಣ್ಣಶೆಟ್ಟಿ ಕಂದಗೂಳ, ಸನ್ಮಾನಿಸಲಾಯಿತು.
ಇದೆ ಸಂದರ್ಭದಲ್ಲಿ “ನಮ್ಮೂರು ನಮ್ಮ ಹೆಮ್ಮೆ” ಪ್ರಬಂಧ ಮಂಡಿಸಿದ ವಿದ್ಯಾರ್ಥಿಗಳಾದ ಪ್ರಜ್ವಲ, ಬಸವರಾಜ, ಮಹೆಬೂಬ, ಯೋಗೇಶ, ಅರವಿಂದ ಬಸವರಾಜ, ಕು. ರುಹಿನಾ ಮತ್ತು ಕು. ಭವಾನಿ ಇವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಬಸಯ್ಯ ಸ್ವಾಮಿ ಮಳಗಿ, ಮೋನಪ್ಪ ಬಡಿಗೇರ್ , ಶ್ರಿಕಾಂತ ಕಲಬುರಗಿ, ರಮೇಶ ಜಾಧವ, ಚಂದ್ರಶೇಖರ ಮಾಸ್ಟರ್, ರಮೇಶ ಪಾಟೀಲ, ಸಾಯಿಬಣ್ಣ ಗೋಗಿ, ಜಗನ್ನಾಥ ಹಡಪದ, ಈರಪ್ಪ ಡೊಣ್ಣಿ, ಶಾಂತಕುಮಾರ ಪಾಟೀಲ, ಧನಶೆಟ್ಟಿ ಕಲಬುರಗಿ, ನಾಗಪ್ಪ ಭುವನಗಿರಿ, ಮಾಣಿಕರಾವ ಉಪಸ್ಥಿತರಿದ್ದರು. ಮಾಲತಿಯವರು ಸ್ವಾಗತಿಸಿದರು. ನಾಗಮ್ಮ ಸಹ ಶಿಕ್ಷಕಿಯವರು ನಿರೂಪಣೆ ಮಾಡಿದರು. ಸೂರ್ಯಕಿರಣ ಮುಖ್ಯ ಶಿಕ್ಷಕರು ವಂದಿಸಿದರು.