ವಿಶ್ವಕರ್ಮ ಜಯಂತಿ, ಆರೋಗ್ಯ ತಪಾಸಣಾ ಶಿಬಿರ
ಬೀದರ್:ಸೆ.9: ವಿಶ್ವಕರ್ಮ ಜಯಂತಿ ನಿಮಿತ್ತ ನಗರದ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿಸ್ಪೇಷಾಲಿಟಿ ಸಹಕಾರ ಆಸ್ಪತ್ರೆಯು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿತ್ತು.
ನಗರದ ಮೌನೇಶ್ವರ ದೇವಸ್ಥಾನದಲ್ಲಿ ನಡೆದ ಶಿಬಿರದಲ್ಲಿ ಆರೋಗ್ಯ ತಪಾಸಣೆಯ ಜೊತೆಗೆ ರಕ್ತ ತಪಾಸಣೆಯೂ ನಡೆಯಿತು. ಬಡಾವಣೆಯ ನಿವಾಸಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.
ವಿಶ್ವಕರ್ಮ ಸಮಾಜದ ಜಿಲ್ಲಾ ಅಧ್ಯಕ್ಷ ಮಹೇಶ ಪಾಂಚಾಳ್, ಉಪಾಧ್ಯಕ್ಷ ಪಾಂಡುರಂಗ ವಿಶ್ವಕರ್ಮ, ಖಜಾಂಚಿ ನಾರಾಯಣ ವಿಶ್ವಕರ್ಮ, ಪ್ರಧಾನ ಕಾರ್ಯದರ್ಶಿ ಶಿವಾನಂದ ವಿಶ್ವಕರ್ಮ, ಪ್ರಮುಖರಾದ ಚಂದ್ರಕಲಾ ವಿಶ್ವಕರ್ಮ, ವೈಜನಾಥ, ಜಗನ್ನಾಥ್, ಮಹೇಶ್ವರಿ ಪಂಚಾಳ್, ರಾಜಕುಮಾರ ಹಳ್ಳದಕೇರಿ, ಸೂರ್ಯಕಾಂತ್ ವಿಶ್ವಕರ್ಮ, ಸರ್ವೇಶ್, ಶ್ರೀದೇವಿ, ಸುಲೋಚನಾ, ಉಮೇಶ, ಶಾಮರಾವ್, ಬಾಬುರಾವ್ ಚಾಂಬೋಳ್, ಬಾಬುರಾವ್ ಚಿಮಕೋಡ, ಸಿದ್ಧಾರೂಢ ವಿಶ್ವಕರ್ಮ, ಶ್ರೀಕಾಂತ್, ಸಂಗೀತಾ ಮುಂತಾದವರು ಉಪಸ್ಥಿತರಿದ್ದರು.
ಭಗವಾನ್ ವಿಶ್ವಕರ್ಮ ಜಯಂತಿ ನಿಮಿತ್ತ ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ್ ನಾಗಮಾರಪಳ್ಳಿ, ಉಪಾಧ್ಯಕ್ಷ ತರುಣ್ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಸಮಾಜದ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದರು.