ಕೇಂದ್ರ ಸರ್ಕಾರದ ಸಾಧನೆ ಮನೆಮನೆಗೆ ತಿಳಿಸಿ: ಈಶ್ವರಸಿಂಗ್ ಠಾಕೂರ್
ಬೀದರ್: ಸೆ.9:ಭಾರತೀಯ ಜನತಾ ಪಾರ್ಟಿ ಬೀದರ್ ಗ್ರಾಮಾಂತರ ಮಂಡಲದ ವತಿಯಿಂದ ಇಂದು ಗಾದಗಿ ಗ್ರಾಮದಲ್ಲಿ ಸದಸ್ಯತ ಅಭಿಯಾನದ ಚಾಲನೆಯನ್ನು ನೀಡಲಾಯಿತು.
ಈ ವೇಳೆ ಮಾತನಾಡಿದ ಭಾರತೀಯ ಜನತಾ ಪಕ್ಷದ ವಿಭಾಗೀಯ ಸಹಪ್ರಭಾರಿ ಹಾಗೂ ಬೀದರ ವಿಧಾನಸಭಾ ಕ್ಷೇತ್ರದ ನಾಯಕ ಈಶ್ವರಸಿಂಗ್ ಠಾಕೂರ್ ಮಾತನಾಡಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಹೇಳಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮಾಡಿರುವ ಸಾಧನೆಗಳನ್ನು ಹೇಳಿ ಪ್ರತಿಯೊಬ್ಬರಿಗೂ ಕೂಡ 8800002024 ಸಂಖ್ಯೆಯನ್ನು ಡಯಲ್ ಮಾಡುವ ಮುಖಾಂತರ ಸದಸ್ಯರನ್ನಾಗಿ ಮಾಡಿ ಭಾರತೀಯ ಜನತಾ ಪಾರ್ಟಿಯನ್ನು ಮನೆಮನೆ ಪಾರ್ಟಿ ಮಾಡಬೇಕೆಂದು ಕರೆಯನ್ನು ನೀಡಿದರು. ಹಾಗೂ ಕ್ಷೇತ್ರದ ಜನರ ಸುಖ ದುಃಖದಲ್ಲಿ ಭಾಗಿಯಾಗಿ ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿಗಾಗಿ ನಾನು ಪ್ರಮಾಣಿಕವಾಗಿ ಪ್ರಯತ್ನ ಮಾಡುವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ
ಜನತಾ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿರಪ್ಪ ಅವರಾದೆ ರವರು ಸದಸ್ಯತ್ವ ಅಭಿಯಾನದ ವಿವರವನ್ನು ಕಾರ್ಯಕರ್ತರಿಗೆ ತಿಳಿಸಿಕೊಟ್ಟರು. ಹಾಗೂ ಮಂಡಲದ ಅಧ್ಯಕ್ಷರಾದ ದೀಪಕ್ ಗಾದಗೆ ಪ್ರಾಸ್ತಾವಿಕ ಮಾತನಾಡಿದರು. ಬೀದರ್ ಗ್ರಾಮಾಂತರ ಮಂಡಲ ಉಸ್ತುವಾರಿಗಳಾದ ಶ್ರೀಮತಿ ಲುಂಬಿಣಿ ಗೌತಮ್ ಅವರು ಪಕ್ಷದ ಗಟ್ಟಿತನಕ್ಕೆ ಕರೆ ನೀಡಿದರು. ಗಾಂಧಿ ಗಂಜ್ ಬ್ಯಾಂಕಿನ ಅಧ್ಯಕ್ಷರು ಹಾಗೂ ಪಕ್ಷದ ಮುಖಂಡರಾದ ವಿಜಯಕುಮಾರ್ ಪಾಟೀಲ್ ಗಾದಗಿ ಪಕ್ಷದ ಮುಖಂಡರಾದ ಕುಶಾಲ್ ಪಾಟೀಲ್ ಗಾಗಿ ಹಾಗೂ ನಿಕಟ ಪೂರ್ವ ಮಂಡಲ ಅಧ್ಯಕ್ಷರಾದ ರಾಜೇಂದ್ರ ಪೂಜಾರಿ, ಪ್ರಶಿಕ್ಷಣ ಪ್ರಕೋಷ್ಟತ ರಾಜ್ಯ ಸಂಚಾಲಕ ರಾಜಶೇಖರ ನಾಗಮೂರ್ತಿ, ಜಿಲ್ಲಾ ಕಾರ್ಯದರ್ಶಿ ರಾಜಕುಮಾರ ಪಾಟೀಲ್ ನೆಮ್ತಾಬಾದ್, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಿಂಡಿ, ನಾಗೇಂದ್ರ ಪಾಟೀಲ್ ಪಾರ್ಟಿಯ ಮಂಡಲ ಪದಾಧಿಕಾರಿಗಳು, ಪ್ರಧಾನ ಕಾರ್ಯದರ್ಶಿಗಳು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಪಾರ್ಟಿಯ ಪದಾಧಿಕಾರಿಗಳು ಗಾದಗಿ ಗ್ರಾಮದ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.