ಹಳೆಯ ವಿದ್ಯಾರ್ಥಿಗಳು ಕಾಲೇಜಿನ ಅಭಿವೃದ್ಧಿಗೆ ಶ್ರಮಿಸೋಣ: ನಂದಕಿಶೋರ ವರ್ಮಾ
ಬೀದರ್:ಸೆ.9: 1970 ರ ಬ್ಯಾಚ್ ನ ವಿದ್ಯಾರ್ಥಿಯಾದ ನಾನು ಕರ್ನಾಟಕ ಕಾಲೇಜಿನಿಂದ ಶಿಸ್ತು, ಸಂಯಮ, ಸಂಸ್ಕಾರ ಮತ್ತು ದೇಶಭಕ್ತಿ ಕಲಿತಿದ್ದೇನೆ. ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸೋಣ ಎಂದು ಸಂಘದ ಗೌರವಾಧ್ಯಕ್ಷ ನಂದಕಿಶೋರ ವರ್ಮಾ ತಿಳಿಸಿದರು.
ಕರ್ನಾಟಕ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ 8ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಕಾಲೇಜಿನ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸೋಣ. ಬಡ ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚಿ ಸ್ಪೂರ್ತಿ ನೀಡುವ ಅವಶ್ಯಕತೆ ಇದೆ ಎಂದರು.
ಕರ್ನಾಟಕ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸೂರ್ಯಕಾಂತ ಶೆಟಕಾರ ಮಾತನಾಡಿ ಸಂಘದ ಲೆಕ್ಕಪತ್ರಗಳನ್ನು ಮಂಡಿಸಿದರು. ಹಳೆಯ ವಿದ್ಯಾರ್ಥಿ ನಿವೃತ್ತ ಪ್ರಾಂಶುಪಾಲರಾದ ಪೆÇ್ರ. ಜಗನ್ನಾಥ ಹೆಬ್ಬಾಳೆ ಅನುಮೋದಿಸಿದರು. ಸಭೀಕರು ಕರತಾಡನ ಮೂಲಕ ಒಪ್ಪಿಗೆ ಸೂಚಿಸಿದರು.
ವೇದಿಕೆ ಮೇಲೆ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ವೀರಭದ್ರಪ್ಪ ಬುಯ್ಯಾ, ಸಿದ್ಧರಾಜ ಪಾಟೀಲ, ಉಪ ಪ್ರಾಚಾರ್ಯ ಅನೀಲಕುಮಾರ ಚಿಕ್ಕಮಣೂರ, ಪ್ರಮುಖರಾದ ಪದ್ಮಜಾ ಪೆÇದ್ದಾರ್, ಶಿವಶಂಕರ ಉಪ್ಪಿನ್, ಡಾ. ರಾಣಿಬಾಯಿ ಪಾಟೀಲ, ಪದ್ಮಿನಿ ಕಾಜಿ ಉಪಸ್ಥಿತರಿದ್ದರು.
ಹಳೆಯ ವಿದ್ಯಾರ್ಥಿಗಳಾದ ತೆಲಂಗಾಣ ಎಚ್.ಡಿ.ಎಫ್.ಸಿ. ವ್ಯವಸ್ಥಾಪಕ ಅರುಣಕುಮಾರ, ಪೆÇ್ರ. ಸಂಗಶೆಟ್ಟಿ ಶೆಟಕಾರ, ಪದ್ಮಜಾ ಪೆÇದ್ದಾರ ಹಳೆಯ ನೆನಪುಗಳ ಮೇಲೆ ಬೆಳಕು ಚೆಲ್ಲಿದರು. ಹಳೆಯ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳಾದ ಸೋಲೊ ನೃತ್ಯ ಹಾಗೂ ಹಾಡುಗಳು, ಮೆಹೆಂದಿ ಬಿಡಿಸುವುದು, ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಿವೃತ್ತ ಪ್ರಾಧ್ಯಾಪಕರನ್ನು ಸನ್ಮಾನಿಸಲಾಯಿತು.
ಆನಿ ಕ್ರಿಸ್ಟಿನಾ ನಿರೂಪಿಸಿದರು. ಸೂರ್ಯಕಾಂತ ಶೆಟಕಾರ ಸ್ವಾಗತಿಸಿದರು. ಡಾ. ಸುನಿತಾ ಕೂಡ್ಲಿಕರ್ ವಂದಿಸಿದರು.