ಲಕ್ಷಕ್ಕೂ ಅಧಿಕ ಮೌಲ್ಯದ ಪಡಿತರ ಅಕ್ಕಿ, ವಶ, ಇಬ್ಬರು ಆರೋಪಿತರ ಬಂಧನ
ಬೀದರ್: ಸೆ.9:ಹಿರಿಯ ಅಧಿಕಾರಿಯವರ ಮಾರ್ಗದರ್ಶನದಂತೆ, ಬಗದಲ್ ಠಾಣಾ ವ್ಯಾಪ್ತಿಯ ಸಿರ್ಸಿ-ಬಾ ಗ್ರಾಮದ ರತ್ನಸಾಬ ದರ್ಗಾದ ಹತ್ತಿರ ಗುಡ್ಸ್ ಆಟೋದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಮಾಹಿತಿಯಂತೆ, ಬಗದಲ್ ಪೆÇಲೀಸ್ ಠಾಣೆಯ ಪಿ.ಎಸ್.ಐ ಶ, ಕಿರಣ ರವರು ತಮ್ಮ ಠಾಣೆಯ ಅಧಿಕಾರಿ/ಸಿಬ್ಬಂದಿಯವರಾದ ಎ.ಎಸ್.ಐ ಮಹಾದೇವಿ, ಸಿಬ್ಬಂದಿಗಳಾದ ರವಿಕಾಂತ, ಸಿದ್ದಪ್ಪಾ,, ಕಾಮಶೇಟ್ಟಿ ರವರೊಂದಿಗೆ, ಅರುಣಕುಮಾರ, ಆಹಾರ ನಿರೀಕ್ಷಕರು, ಬೀದರ ಗ್ರಾಮೀಣ ರವರ ಸಮಕ್ಷಮ ದಾಳಿ ಮಾಡಿ 545 ಕೆ.ಜಿ ಪಡಿತರ ಅಕ್ಕಿ ಒಂದು ಗುಡ್ಸ್ ಆಟೋ ವಶ ಪಡಿಸಿಕೊಂಡು ಇಬ್ಬರು ಆರೋಪಿತರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ
ಹೀಗೆ ಒಟ್ಟು ಅ:ಕಿ: 1,18,530=00 ರೂಪಾಯಿ ಬೆಲೆ ಬಾಳುವ ಅಡಿತರ ಅಕ್ಕಿ ಮತ್ತು ಒಂದು ಗುಡ್ಸ್ ಆಟೋ ವಶ ಪಡಿಸಿಕೊಂಡ ಅಧಿಕಾರಿ/ಸಿಬ್ಬಂದಿಯವರ ಕಾರ್ಯಕ್ಕೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಶ್ಲಾಘಿಸಿದ್ದಾರೆ.
ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಜಿಲ್ಲೆಯ ಪೆÇಲೀಸರ ಕಾರ್ಯಾಚರಣೆಯು ಮುಂದುವರೆಯುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.