ಸಚಿವರಿಗೆ ಮನವಿ
ನವಲಗುಂದ,ಸೆ9 : ಹೆಸರು ಬೆಂಬಲ ಬೆಲೆ ಖರೀದಿಯಲ್ಲಿರುವ ಕೆಲ ಮಾರ್ಗಸೂಚಿಗಳನ್ನು ಬದಲಿಸಿಬೇಕು. ಬಿಟ್ಟುಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಹೆಸರುಕಾಳು ಒಣಗಿಸಲು ಆಗುತ್ತಿಲ್ಲ ಹಾಗಾಗಿ ಖರೀದಿವೇಳೆ ಹೆಸರುಕಾಳಿನ ತೇವಾಂಶ 12% ನಿಯಮ ಹಾಕಿದ್ದೀರಿ 18% ತೇವಾಂಶ ಇರುವ ಕಾಳನ್ನು ಖರೀದಿ ಮಾಡುವಂತೆ ಆಗ್ರಹಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮಹದಾಯಿ ರೈತ ಹೋರಾಟಗಾರರು ಹುಬ್ಬಳ್ಳಿಯಲ್ಲಿ ಮನವಿ ಸಲ್ಲಿಸಿದರು.
ಮಹದಾಯಿ ಕಳಸಾಬಂಡೂರಿ ನಾಲಾ ಜೋಡಣೆ ಕುರಿತು ವನ್ಯಜೀವಿ ಇಲಾಖೆಯ ಅನುಮತಿ ನಿರಾಕರಣೆ ನೋವು ತಂದಿದೆ. ಇದೇ ಅಕ್ಟೊಬರ 2 ರೊಳಗೆ ಅನುಮತಿ ಕೊಡಿಸಿ ಕಾಮಗಾರಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಶಂಕ್ರಪ್ಪ ಅಂಬಲಿ, ರಘುನಾಥ ನಡುವಿನಮನಿ ಜೆ ಕೆ ದೊಡಮನಿ ಇತರರು ಇದ್ದರು.