ದೇಶಕ್ಕೆ ಬಿಜೆಪಿ ಕೊಡುಗೆ ಅಪಾರ
ಚನ್ನಮ್ಮನ ಕಿತ್ತೂರು,ಸೆ9: ದೇಶವನ್ನು ಆರ್ಥಿಕವಾಗಿ ಸದೃಢ ಮಾಡಿದ್ದು ಬಿಜೆಪಿ ಪಕ್ಷ. ಅದರ ಕೊಡುಗೆ ದೇಶಕ್ಕೆ ಅಪಾರವಾಗಿದೆ ಎಂದು ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಸ್ಥಳೀಯ ಬಿಜೆಪಿ ಕಛೇರಿಯಲ್ಲಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಹುಟ್ಟುಹಬ್ಬದ ನಿಮಿತ್ಯ ಆಗಮಿಸಿ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು.
ನಾವು ಅಭಿವೃದ್ಧಿ ಮಾಡಿ ಮತ ಕೇಳುತ್ತೇವೆ. ಈಗಿನ ಕಾಂಗ್ರೇಸ್ಸಿನವರ ಹಾಗೇ ಐದು ಗ್ಯಾರಂಟಿ ನೀಡುತ್ತೇವೆಂದು ಸುಳ್ಳು ಹೇಳಿ ಮತ ಕೇಳುವುದಿಲ್ಲ ಎಂದ ಅವರು ಮೂಗಿಗೆ ತುಪ್ಪ ಸವರಿದಂತೆ ಈ ಯೋಜನೆ ಗ್ಯಾರಂಟಿಗಳು. ಇದನ್ನೇಲ್ಲಾ ನೋಡಿ ರಾಜ್ಯದ ಮತದಾರರು ಬೇಸತ್ತಿದ್ದಾರೆ ಮತದಾರರು ಮತ ನೀಡಿ ಮುಂಬರುವ ದಿನಗಳಲ್ಲಿ ಬಿಜೆಪಿಯ ಕೈಯಲ್ಲಿ ಅಧಿಕಾರದ ಚುಕ್ಕಾಣಿ ನೀಡುತ್ತಾರೆಂಬ ಭರವಸೆ ನನಗಿದೆ ಎಂದರು.
ಪ್ರಧಾನಿ ಮೋದಿಜೀಯವರು ಪ್ರಮಾಣ ವಚನ ತೆಗೆದುಕೊಂಡ ತಕ್ಷಣ ದೇಶದ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆ, ರೈತರ ಶ್ರಯೋಭಿವೃದ್ಧಿ, ಯುವಕರಿಗೆ ಉದ್ಯೋಗ ಸೃಷ್ಟಿಗೆ ಮುಂದಾದರು. ನಮ್ಮ ದೇಶವನ್ನು ಜಗತ್ತೇ ಕಣ್ತೇರೆದು ನೋಡುವಂತೆ ಮಾಡಿದರು ಎಂದರು.
ಪ್ರಾಸ್ತಾವಿಕವಾಗಿ ಬಿಜೆಪಿ ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಡೆ ಮಾತನಾಡಿದರು. ನಿರೂಪಣೆ, ಸ್ವಾಗತ ಶಿವಾನಂದ ಹನಮಸಾಗರ.
ಈ ವೇಳೆ ಉಳವಪ್ಪ ಉಳ್ಳಾಗಡ್ಡಿ, ರವಿ ಇನಾಮದಾರ, ಶ್ರೀಕರ ಕುಲಕರ್ಣಿ, ಬಿಜೆಪಿ ಮಾನಜಿ-ಹಾಲಿ ಜಿಪಂ, ತಾಪಂ, ಪಪಂ ಸದಸ್ಯರು, ಮುಖಂಡರು, ಕಾರ್ಯಕರ್ತರು, ಗೆಳೆಯರ ಬಳಗ ಸೇರಿದಂತೆ ಸಾರ್ವಜನಿಕರಿದ್ದರು.