ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸಚಿವ ಸೋಮಣ್ಣ ಚಾಲನೆ
ಗೋವಿಂದರಾಜನಗರ. ಸೆ.೯- ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣರವರು ಚಾಲನೆ ನೀಡಿದರು.
ರಾಜ್ಯ ಬಿಜೆಪಿ ಯುವ ನಾಯಕ ಡಾ.ಅರುಣ್ ಸೋಮಣ್ಣ, ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥಗೌಡರು, ಮಾಜಿ ಮಹಾನಗರ ಪಾಲಿಕೆ ಸದಸ್ಯ ಮೋಹನ್ ಕುಮಾರ್ ಅವರು ಉಪಸ್ಥಿತರಿದ್ದರು.
ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿ, ವಿಶ್ವದ ಅತಿಡೊಡ್ಡ ಸದಸ್ಯತ್ವ ಹೊಂದಿರುವ ಮತ್ತು ದೇಶ ಮೊದಲು ಎಂಬ ರಾಷ್ಟ್ರಭಕ್ತಿ ಸಾರಿದ ಪಕ್ಷ ಬಿಜೆಪಿ. ಬಿಜೆಪಿ ಪಕ್ಷದ ಕಾರ್ಯಕರ್ತ ಎಂದರೆ ಹೆಮ್ಮೆಪಡುವ ಸಂಗತಿಯಾಗಿದೆ ಎಂದರು.ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮೂರನೆ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚನೆಯಾಗಿದೆ.ಯುವ ಸಮುದಾದಯದವರು ಬಿಜೆಪಿ ಪಕ್ಷಕ್ಕೆ ನೋಂದಾಣೆ ಮಾಡಿಕೊಳ್ಳಿ, ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬಿಜೆಪಿ ಪಕ್ಷದ ಜೊತೆಯಲ್ಲಿ ಹೆಜ್ಜೆಇಡಿ. ದೇಶದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಆಡಳಿತದಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಮತ್ತು ಕಾಯಕ ಸಿದ್ಧಾಂತದಲ್ಲಿ ಕೇಂದ್ರ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಡವರ ಮತ್ತು ಮಧ್ಯಮ ವರ್ಗದವರು ಆರ್ಥಿಕವಾಗಿ ಸಬಲರಾಗಲು ಜನಧನ್, ಉಜ್ವಲ ಮತ್ತು ಪ್ರಧಾನಮಂತ್ರಿ ಅವಾಸ್ ಯೋಜನೆ, ಆಯುಷ್ಮಾನ್ ಭಾರತ್ ಮುದ್ರಯೋಜನೆ ಸಹಕಾರಿಯಾಗಿದೆ. ಕೃಷಿ, ರೈಲ್ವೆ, ವಿಜ್ಞಾನ, ತಂತ್ರಜ್ಞಾನ, ಜಲಶಕ್ತಿ ಯೋಜನೆ ಎಲ್ಲ ಕ್ಷೇತ್ರಗಳಲ್ಲಿ ಶರವೇಗದಲ್ಲಿ ಅಭಿವೃದ್ದಿ ಪಥದತ್ತ ಸಾಗುತ್ತಿದೆ ಎಂದರು.
ಇಂದು ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ ಭಾರತ ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ.ದೇಶದಲ್ಲಿ ಯುವ ಸಮುದಾಯದ ಸಂಖ್ಯೆ ಹೆಚ್ಚಿದೆ, ಯುವ ಸಮುದಾಯದ ಬುದ್ಧಿಶಕ್ತಿ, ಸಾಮ್ಯರ್ಥ್ಯ ದೇಶದ ಅಭಿವೃದ್ಧಿ ಬಳಕೆಯಾಗಬೇಕು ಅದ್ದರಿಂದ ಬಿಜೆಪಿ ಪಕ್ಷದ ಸದಸ್ಯರಾಗಿ ಅಭಿವೃದ್ದಿಯ ಜೊತೆಯಲ್ಲಿ ಸಾಗೋಣ ಎಂದು ಹೇಳಿದರು.ಮಂಡಲ ಮಹಿಳಾ ಅಧ್ಯಕ್ಷೆ ರತ್ನಮ್ಮ, ಬಿಜೆಪಿ ಮುಖಂಡರುಗಳಾದ ಸಿ.ಎಂ.ರಾಜಪ್ಪ, ಶ್ರೀಧರ್, ಹೆಚ್.ರಮೇಶ್ ಉಪಸ್ಥಿತರಿದ್ದರು.