ಬಿಜೆಪಿ ಸದಸ್ಯತ್ವ ಅಭಿಯಾನ
ಬೈಲಹೊಂಗಲ, ಸೆ9: ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷಕ್ಕೆ 10 ಕೋಟಿಗೂ ಅಧಿಕ ಸದಸ್ಯತ್ವ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಲಕ್ಷ್ಮಣ್ ತಪಸಿ ಹೇಳಿದರು.
ಪತ್ರಿಬಸವ ನಗರ ಮೂರನೇ ಅಡ್ಡರಸ್ತೆಯಲ್ಲಿನ ಕರೆಮ್ಮಾ ದೇವಸ್ಥಾನದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಷ್ಟ್ರದಾದ್ಯಂತ 10 ಕೋಟಿಗೂ ಅಧಿಕ ಸದಸ್ಯತ್ವವನ್ನು ಮಾಡುವ ಉದ್ದೇಶ ಬಿದ್ದು ಹಿಂದುಳಿದ ವರ್ಗಗಳಿಗೆ ವಿಶೇಷವಾದ ಯೋಜನೆಗಳನ್ನ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ದಾ ಹಾಗೂ ರಾಜ್ಯಾಧ್ಯಕ್ಷ, ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ 6 ಲಕ್ಷ ಸದಸ್ಯತ್ವ ಮಾಡುವುದರ ಜೊತೆಗೆ ಪ್ರತಿ ಬೂತ್ ಮಟ್ಟದಲ್ಲಿ ಸುಮಾರು 300 ಸದಸ್ಯತ್ವ ಮಾಡುವ ಗುರಿ ಹೊಂದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರುಗಳಾದ ಜಗದೀಶ್ ಮೆಟಗುಡ್ಡ, ಡಾ. ವಿಶ್ವನಾಥ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ,
ಉದ್ಯಮಿ ವಿಜಯ ಮೆಟಗುಡ್ಡ, ಪುರಸಭೆ ಸದಸ್ಯೆ ಶ್ರೀದೇವಿ ದೇವಲಾಪುರ, ಓಬಿಸಿ ವಿಭಾಗ ಪ್ರಭಾರಿ ರಾಜಕುಮಾರ ಸಗಾಯಿ,
ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಉಮೇಶ ಪುರಿ, ಸದಸ್ಯತ್ವ ಅಭಿಯಾನದ ಜಿಲ್ಲಾ ಪ್ರಭಾರಿ ರೇಖಾ ಚಿನ್ನಾಕಟ್ಟಿ, ಜಿಲ್ಲಾ ಸಂಚಾಲಕ ಸಂತೋಷ ಹಡಪದ, ಮಂಡಲ ಉಪಾಧ್ಯಕ್ಷ, ಸುಭಾಷ ತುರಮರಿ, ಆನಂದ ಮೂಗಿ, ಶಾಂತ ಮಡ್ಡಿಕಾರ, ಲಕ್ಕಪ್ಪ ಕಾರ್ಗಿ, ಬಿ ಎಸ್ ಬೂದಿಹಾಳ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.