ಆನೇಕಲ್ ನಲ್ಲಿ ಅದ್ಧೂರಿ ಗಣೇಶೋತ್ಸವ
ಆನೇಕಲ್. ಸೆ. ೯ – ಹುಲಿಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಬಿಂಗೀಪುರ ಗ್ರಾಮದಲ್ಲಿ ಶ್ರೀ ಏಳು ಮಂದಮ್ಮ ದೇವಿ ಸೇವಾ ಸಮಿತಿ ಹಾಗೂ ಎಸ್.ಬಿಂಗೀಪುರದ ಯುವ ನಾಯಕರಾದ ಎನ್.ಜಗದೀಶ್ ರವರ ನೇತೃತ್ವದಲ್ಲಿ ಅದ್ದೂರಿಯಾಗಿ ಗಣೇಶೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಗಣೇಶೋತ್ಸವ ಅಂಗವಾಗಿ ಗಣಪತಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು ಹಾಗೆಯೇ ಅನ್ನದಾಸೋಹ, ರಸಮಂಜರಿ ಕಾರ್ಯಕ್ರಮ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಶಾಸಕ ಎಂ.ಕೃಷ್ಣಪ್ಪರವರು ಎಸ್.ಬಿಂಗೀಪುರಕ್ಕೆ ಆಗಮಿಸಿ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರ. ಇದೇ ಸಂಧರ್ಭದಲ್ಲಿ ಶಾಸಕ ಎಂ.ಕೃಷ್ಣಪ್ಪರವರಿಗೆ ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಎಸ್.ಬಿಂಗೀಪುರದ ಟಿಟಿ. ಮಂಜಣ್ಣ. ಶೇಖರ್. ಮೂರ್ತಿ, ವಾಜಿದ್ ಪಾಷ, ಮಂಜುನಾಥ್, ಸುನೀಲ್, ಗಣೇಶ, ಶ್ರೀನಿವಾಸ್, ವಿಕಾಸ್, ಕುಮಾರ್, ಮದುಗೌಡ. ವಿಕ್ರಮ, ವಿಜಯ, ಭರತ್, ಅಭಿಷೇಕ್. ಸುರೇಶ್, ನಿಸಾರ್ ಅಹಮದ್, ಮುನಿಯಪ್ಪ ರಮೇಶ್, ಮೂರ್ತಿ. ಪೋಡ್ ರಮೇಶ್. ಮದುಗೌಡ. ಗಣೇಶ. ಗಜೇಂದ್ರ. ನಾರಾಯಣಪ್ಪ. ಕೆಂಪಾಪುರ ನವೀನ್ ಮತ್ತು ಗ್ರಾಮಸ್ಥರು ಬಾಗವಹಿಸಿದ್ದರು.