ಆವಲಗಂಗಮ್ಮ ದೇವಿಯ ಆನೆ ಅಂಬಾರಿ ಉತ್ಸವ
ಆನೇಕಲ್.ಸೆ. ೦೯ – ತಾಲ್ಲೂಕಿನ ಹಾರಗದ್ದೆ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯವಾದ ಆವಲಗಂಗಮ್ಮ ದೇವಿ ದೇವಾಲಯದ ಮೊದಲನೆ ವರ್ಷದ ವಾರ್ಷಿಕೋತ್ಸವ ಹಾಗೂ ಅಂಬಾರಿ ಉತ್ಸವ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು.
ಆವಲಗಂಗಮ್ಮ ದೇವಿ ದೇವಾಲಯದ ಮೊದಲನೆ ವರ್ಷದ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳನ್ನು ಗ್ರಾಮಸ್ಥರ ಹಾಗೂ ಕುಲಸ್ಥರ ಸಮ್ಮುಖದಲ್ಲಿ ಶಾಸ್ತ್ರೋಸ್ತವಾಗಿ ನೆರವೇರಿತು.
ಆವಲಗಂಗಮ್ಮದೇವಿಯ ಆನೆ ಅಂಬಾರಿ ಉತ್ಸವವು ರಾಸುಗಳ ಮತ್ತು ಹಲವು ಕಲಾತಂಡಗಳೊಂದಿಗೆ ಹಾರಗದ್ದೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಆವಲಗಂಗಮ್ಮ ದೇವಿಯ ಆನೆ ಅಂಬಾರಿಯು ಸಾಗಿದ ದೃಶ್ಯ ರೋಮಾಂಚನವಾಗಿತ್ತು. ಹಾಗೆಯೇ ವೀರಗಾಸೆ, ತಮಟೆವಾದ್ಯ. ಡೊಳ್ಳುಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ವೈಭವದ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಆವಲಗಂಗಮ್ಮ ದೇವಿ ಸೇವಾ ಟ್ರಸ್ಟ್‌ನ ಗೌರವ ಅದ್ಯಕ್ಷ ಕೇಶವಮೂರ್ತಿ, ಅಧ್ಯಕ್ಷರಾದ ಎನ್,ಶ್ರೀನಿವಾಸ್, ಉಪಾಧ್ಯಕ್ಷ ನರಸಿಂಹಮೂರ್ತಿ, ಜೆ. ಮಹದೇವ್, ಅಶ್ವಥ್ ನಾರಾಯಣ್. ವೆಂಕಟೇಶ್, ಮುಖಂಡರಾದ ಹಾರಗದ್ದೆ ನಟರಾಜ್. ಶಾಂತರಾಮ್. ನಂಜಪ್ಪ, ಹಾವೆ ವೆಂಕಟೇಶ್. ಅಕ್ಷಯ್. ಶಿವಣ್ಣ, ಹನುಮಣ್ಣ. ನರಸಿಂಹಮೂರ್ತಿ, ಕಾವೇರಿ. ನಾರಾಯಣ್, ರಾಜಣ್ಣ. ಮಂಜುನಾಥ್. ಅರುಣ್, ಚೇತನ್. ಅಭಿ. ಆನಂದ್, ಮಂಜು. ಹರ್ಷ, ದರ್ಶನ್. ಮನೋಜ್, ನಾಗರಾಜ್ ಮತ್ತು ಆವಲಗಂಗಮ್ಮ ದೇವಿ ಸೇವಾ ಟ್ರಸ್ಟ್ ನ ಪದಾದಿಕಾರಿಗಳು ಮತ್ತು ಹಾರಗದ್ದೆ ಗ್ರಾಮಸ್ಥರು ಬಾಗವಹಿಸಿದ್ದರು.