ಜನಪ್ರತಿನಿಧಿಗಳು ಎತ್ತಿನಹೊಳೆ ನೀರು ಹರಿಯುವ ಭರವಸೆ ನೀಡಲಿ
ಕೋಲಾರ, ಸೆ.೯- ಮಳೆಗಾಲದಲ್ಲಿ ಪಶ್ಚಿಮ ಘಟ್ಟಗಳಲ್ಲಿ ವ್ಯಥ್ಯವಾಗಿ ಸಮುದ್ರ ಸೇರುವ ನೀರನ್ನು ಬಯಲು ಸೀಮೆ ಜಿಲ್ಲೆಗಳಿಗೆ ೩೬ ಸಾವಿರ ಕೋಟಿ ವೆಚ್ಚದಲ್ಲಿ ಕುಡಿಯುವ ಎತ್ತಿನಹೊಳೆ ಯೋಜನೆ ನೀರು ಬಯಲು ಸೀಮೆಗಳಿಗೆ ಹರಿಯುವ ಭರವಸೆ ಇದೆ ಎಂಬುದನ್ನು ಎರಡು ಜಿಲ್ಲೆಯ ಜನಪ್ರತಿನಿಧಿಗಳು ಬಹಿರಂಗವಾಗಿ ಉತ್ತರ ನೀಡಬೇಕೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರ ಅವರು, ಯಾವುದೇ ನದಿ ನಾಲೆಗಳಿಲ್ಲದ ಕೋಲಾರ ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಿಗೆ ಪ್ರಕೃತಿಯಲ್ಲಿ ದೊರೆಯುವ ಶುದ್ದ ನೀರಿನ ಯೋಜನೆಯಾದ ಎತ್ತಿನಹೊಳೆ ಮೊದಲನೇ ಹಂತದ ಜೀವ ಜಲ ಲೋಕಾರ್ಪಣೆ ಮಾಡಿರುವುದು ಸ್ವಾಗತಾರ್ಹ ವಿಚಾರವಾಗಿದೆ.
ಆದರೆ ಜಾತಕ ಪಕ್ಷಿಗಳಂತೆ ದಶಕಗಳ ಹಿಂದೆ ಪಶ್ಚಿಮ ಘಟ್ಟಗಳಲ್ಲಿ ಹರಿಯುವ ನದಿ ಕೊಳ್ಳಗಳನ್ನು ತಿರುಗಿಸಿ ಬಯಲು ಸೀಮೆಯ ೭ ಜಿಲ್ಲೆಗಳಿಗೆ ನೀರು ನೀಡುತ್ತೇವೆಂದು ೩೬ ಸಾವಿರ ಕೋಟಿ ವೆಚ್ಚದಲ್ಲಿ ಹರಿಯುತ್ತಿರುವ ಎತ್ತಿನಹೊಳೆ ನೀರು ಕೋಲಾರ ಜಿಲ್ಲೆಗೆ ಹರಿಯುತ್ತದೆಯೇ ಎಂಬುದು ಜನಪ್ರತಿನಿದಿಗಳಿಗೆ ಸರ್ಕಾರಕ್ಕೆ ಸಾರ್ವಜನಿಕರ ಪ್ರಶ್ನೆಯಾಗಿದೆ?
ಜಿಲ್ಲೆಯ ಸ್ಥಳಿಯ ಜನಪ್ರತಿನಿದಿ ಸರ್ಕಾರದ ಕಂದಾಯ ಮಂತ್ರಿಯಾಗಿರುವ ಕೃಷ್ಣ ಬೈರೇಗೌಡರವರು ಕೋಲಾರ ಜಿಲ್ಲೆಗೆ ಎತ್ತಿನಹೊಳೆ ಹರಿಯುವುದು ಸಂಶಯ ಎಂದು ಹೇಳಿಕೆ ನೀಡಿರುವುದು ಸಮಂಜಸವೇ? ಮಾಹಿತಿಯಿಲ್ಲದೆ ಅವರು ಹೇಳಿಕೆ ನೀಡಿದ್ದಾರೆಯೇ ಎಂಬುದಕ್ಕೆ ಉತ್ತರ ಮುಂದೆ ಜನಪ್ರತಿನಿದಿಗಳು ನೀಡಬೇಕಾಗಿದೆ ಎಂದರು.
೨೦೨೭ ಕ್ಕೆ ಅಂತ್ಯಗೊಳ್ಳುವ ಎತ್ತಿನಹೊಳೆ ಯೋಜನೆ ಕೋಲಾರ ಜಿಲ್ಲೆಗೆ ಈಗಿಲಿನಿಂದಲೇ ಪೈಪ್ ಲೈನ್ ಅಳವಡಿಸಿ ಹರಿಸದೆ ಇದ್ದರೆ ನೀರಿನ ವಿಚಾರದಲ್ಲಿ ಬಯಲು ಸೀಮೆಗೆ ಚಂದಮಾಮ ತೋರಿಸಿ ಯಾಮಾರಿಸಲು ಮುಂದಾಗಿದೆ ನೀರು ಹರಿಯದೆ ಇದ್ದರೆ ಎರಡೂ ಜಿಲ್ಲೆಯ ಜನಪ್ರತಿನಿದಿಗಳು ರಾಜೀನಾಮೆ ನೀಡಿ ಉಗ್ರವಾದ ಹೋರಾಟಕ್ಕೆ ಸೈನಿಕರಂತೆ ಮುನ್ನುಗ್ಗಬೇಕು ಇಲ್ಲವಾದರೆ ಮತ ಕೊಟ್ಟಂತಹ ಜನರೇ ನಿಮ್ಮನ್ನು ಹಳ್ಳಿ ಹಳ್ಳಿಯಲ್ಲೂ ಛೀಮಾರಿ ಹಾಕುವ ಕಾಲ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ಎತ್ತಿನಹೊಳೆ ಹರಿಯುವ ಜಿಲ್ಲೆಯ ಕೆರೆಗಳಿಗೆ ಆಯಾ ತಾಲ್ಲೂಕಿನ ಶಾಸಕರು ವಾರಕ್ಕೆ ೨ ಕೆರೆಗೆ ಬೇಟಿ ನೀಡಿ ಕೆರೆ ರಾಜಕಾಲುವೆಗಳ ಒತ್ತುವರಿ ತೆರೆವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಮಾಡಿ ತಮ್ಮ ಜವಬ್ದಾರಿಯನ್ನು ನಿರ್ವಹಿಸಬೇಕೆಂದು ಸಲಹೆ ನೀಡಿದರು. ಈ ಸಂದರ್ಭಧಲ್ಲಿ ಮಂಗಸಂದ್ರ ತಿಮ್ಮಣ್ಣ, ಪುತ್ತೇರಿ ರಾಜು, ಮುಂತಾದವರಿದ್ದರು.