ಯಾರಿಗೆ ಒಲಿಯಲಿದೆ ನಗರಸಭೆ ಗದ್ದುಗೆ ! ಕಾಂಗ್ರೆಸ್- ಬಿಜೆಪಿಗೆ ಪಕ್ಷಾಂತರಿಗಳ ಭಯ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.09- ಇಂದು ನಡೆಯುವ ಚಾಮರಾಜನಗರದ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ಏರ್ಪಟ್ಟಿದ್ದು ಅಂತಿಮ ಘಟ್ಟ ತಲುಪಿದೆ.
ಉಭಯ ಪಾರ್ಟಿದಾರರಿಗೂ ಪಕ್ಷಾಂತರಿಗಳ ನಡುಕ ಉಂಟು ಮಾಡಿದೆ. ಸದಸ್ಯರುಗಳನ್ನು ಹಿಡಿದಿಟ್ಟುಕೊಳ್ಳುವುದೇ ಉಭಯ ಪಕ್ಷಗಳಿಗೂ ಬಹು ದೊಡ್ಡ ಸಾಹಸವಾಗಿದೆ.
ಚಾಮರಾಜನಗರದ ನಗರಸಭಾ ಸದಸ್ಯರ ಒಟ್ಟು ಬಲ 31 ಬಿಜೆಪಿ 15 ಸದಸ್ಯರ ಬಲವನ್ನು ಹೊಂದಿದೆ ಕಾಂಗ್ರೆಸ್ 8 ಸದಸ್ಯರ ಬಲ ಹೊಂದಿದ್ದರೆ, ಎಸ್‍ಡಿಪಿಐ 6, ಓರ್ವ ಪಕ್ಷೇತರ ಇದ್ದಾರೆ.
ಬಿಜೆಪಿಗೆ 15 ಸದಸ್ಯರನ್ನು ಮಾತ್ರ ಹೊಂದಿದ್ದು, ಈಗಾಗಲೇ ಪಕ್ಷೇತರ ಸದಸ್ಯ ಬಸವಣ್ಣ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡಿಗೊಂಡಿದ್ದು, ಇನ್ನುಳಿದ ಎಸ್‍ಡಿಪಿಐ ನವರು ಬಿಜೆಪಿಗೆ ಬೆಂಬಲ ನೀಡುವುದು ಅಸಾಧ್ಯದ ಮಾತು. ಇದರಿಂದ ಬಿಜೆಪಿಗೆ ಆಪರೇಷನ್ ಕಮಲದ ಮೂಲಕ ನಗರಸಭೆ ಗದ್ದುಗೆ ಹಿಡಿಯಲು ಪ್ರಯತ್ನಿಸಬಹುದು.
ಕಾಂಗ್ರೆಸ್ ಸದಸ್ಯರ ಹೈಜಾಕ್ : ಅದರಂತೆ ಕಾಂಗ್ರೆಸ್‍ನ 2 ರಿಂದ 3 ಸದಸ್ಯರನ್ನು ಬಿಜೆಪಿ ಅವರು ಹೈಜಾಕ್ ಮಾಡಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.
ಇನ್ನು ಕಾಂಗ್ರೆಸ್‍ಗೆ ತನ್ನ 8 ಸದಸ್ಯರ ಜೊತೆ ಈಗ ಪಕ್ಷೇತರ ಸದಸ್ಯ ಬಸವಣ್ಣ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರಿಂದ ಅದರ ಬಲ ಒಂಭತ್ತಕ್ಕೇರಿದೆ. ಇನ್ನೂ ಎಸ್‍ಡಿಪಿಐನವರ ಬೆಂಬಲ ಸಹ ಕಟ್ಟಿಟ್ಟ ಬುತ್ತಿ. ಇದರಿಂದ ಒಟ್ಟು ಕಾಂಗ್ರೆಸ್‍ಗೆ 15 ಸದಸ್ಯರ ಬಲ ದೊರೆಯುತ್ತದೆ.
ಇದಲ್ಲದೆ ಲೋಕಸಭಾ ಸದಸ್ಯ ಹಾಗೂ ವಿಧಾನಸಭಾ ಸದಸ್ಯ ಎರಡು ಮತಗಳನ್ನು ಸೇರಿಸಿದರೆ 17 ಮತಗಳು ಈ ಬಾರಿ ನಗರಸಭೆಯ ಚುಕ್ಕಾಣಿ ಬಹುತೇಕ ಕಾಂಗ್ರೆಸ್ ಪಕ್ಷಕ್ಕೆ ಖಚಿತವಾಗುತ್ತದೆ ಎಂಬುದು ಕಾಂಗ್ರೆಸ್‍ನವರ ಅಂಬೋಣ. ಹಾಗೆಯೇ ಕಾಂಗ್ರೆಸ್‍ನವರು ಸಹ 2-3 ಮಂದಿ ಬಿಜೆಪಿ ಸದಸ್ಯರನ್ನು ಸೆಳೆದಿದ್ದಾರೆ ಎಂಬ ಮಾತು ಸಹ ಕೇಳಿಬರುತ್ತಿದೆ.
ಬಲ್ಲ ಮೂಲಗಳ ಪ್ರಕಾರ ಕಾಂಗ್ರೆಸ್ ಪಕ್ಷದ ನಗರಸಭಾ ಅಧ್ಯಕ್ಷರಾಗಿ ರಾಜಪ್ಪ ಅವರನ್ನು ಆಯ್ಕೆ ಮಾಡಲಾಗುವುದು ಎಂಬ ವದಂತಿಯು ಇದೆ ಉಪಾಧ್ಯಕ್ಷ ಸ್ಥಾನಕ್ಕೆ ಎಸ್‍ಡಿಪಿಐನ ಅಬ್ರಾಮ್ ಹೆಸರು ಇದೆ.
ಒಟ್ಟಾರೆ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಯಾರಿಗೆ ಒಲಿಯುತ್ತದೆ ಚಾಮರಾಜೇಶ್ವರನ ಆಶೀರ್ವಾದ ಯಾರಿಗೆ ಇದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಚುನಾವಣಾ ಸಂದರ್ಭದಲ್ಲಿ ಪಕ್ಷದಿಂದ ಪಕ್ಷಕ್ಕೆ ಜೆ. ಬಲ ನೀಡುವುದು ತಮ್ಮ ಪಕ್ಷಗಳಿಗೆ ಕೈಕೊಡುವ ಇದಕ್ಕಾಗಿ ಲಕ್ಷ ಕೋಟಿಗಟ್ಟಲೆ ವ್ಯವಹಾರ ನಡೆಸುವ ಈಗ ಸರ್ವೇ ಸಾಮಾನ್ಯವಾಗಿದೆ. ಇಲ್ಲಿ ಆದ ಅಧಿಕಾರ ಉಳಿಸಿಕೊಳ್ಳಲು ತಮ್ಮ ಪಕ್ಷದ ಸದಸ್ಯ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಮತ್ತೊಂದು ಕಡೆ ಬಿಜೆಪಿಯಲ್ಲಿ ರಾಮಸಮುದ್ರದ ಸುರೇಶ್ ಅಧ್ಯಕ್ಷ ಸ್ಥಾನದ