ಪಾಸ್‍ಪೆÇೀರ್ಟ್ ಕೇಂದ್ರವನ್ನು ಮದ್ದೂರಿನಲ್ಲೇ ಮುಂದುವರೆಸಿ: ಕೆ.ಎಂ.ಉದಯ್
ಸಂಜೆವಾಣಿ ವಾರ್ತೆ
ಮದ್ದೂರು:ಸೆ.09-ಕ್ಷೇತ್ರದ ಅಭಿವೃದ್ಧಿ ಕಾರ್ಯ ವೈಖರಿಗಳನ್ನು ಮೆಚ್ಚಿ ಇತರೆ ಪಕ್ಷದ ಸದಸ್ಯರು ಹಾಗೂ ಪಕ್ಷೇತರ ಸದಸ್ಯರು ಬೆಂಬಲ ಸೂಚಿಸಿದರೆ ಪುರಸಭೆ ಅಧಿಕಾರದ ಗದ್ದುಗೆಗೆ ಮುಂದಾಗುವುದಾಗಿ ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ 7.5 ಕೋಟಿ ರೂ. ವೆಚ್ಚದ ಮೈಸೂರು-ಬೆಂಗಳೂರು ಹೆದ್ದಾರಿ ಮರುಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ಹಲವು ವರ್ಷಗಳಿಂದಲೂ ಮದ್ದೂರು ಪುರಸಭೆಯ ಅಧಿಕಾರ ಜೆ.ಡಿ.ಎಸ್ ಪಕ್ಷದ ಹಿಡಿತದಲ್ಲಿದ್ದು ಮುಂದಿನ ವಾರ ನಿಗಧಿಯಾಗಿರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ವೇಳೆ ಕಾಂಗ್ರೇಸ್ ಪಕ್ಷದ ನಾಲ್ಕು ಮಂದಿ ಸದಸ್ಯರ ಪೈಕಿ ಹಾಲಿ ಮೂರು ಮಂದಿ ಇದ್ದು ಅಭಿವೃದ್ಧಿ ದೃಷ್ಟಿಯಿಂದ ಪಕ್ಷೇತರರು ಸೇರಿದಂತೆ ಇತರೆ ಸದಸ್ಯರು ಕೈಜೋಡಿಸಿದ್ದಲ್ಲಿ ಸದರಿ ಚುನಾವಣೆಗೆ ಒತ್ತು ನೀಡುವುದಾಗಿ ಹೇಳಿದರು.
ರಾಜ್ಯದಲ್ಲಿ ಕಾಂಗ್ರೇಸ್ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದು ಮದ್ದೂರು ಕ್ಷೇತ್ರದಲ್ಲಿ ಇಪ್ಪತ್ತು ವರ್ಷಗಳ ಬಳಿಕ ಶಾಸಕ ಸ್ಥಾನವು ಕಾಂಗ್ರೇಸ್ ಪಕ್ಷಕ್ಕೆ ಒಲಿದಿದ್ದು ಕ್ಷೇತ್ರದ ಅಭಿವೃದ್ಧಿಗೆ ಒಂದು ವರ್ಷದ ಅವಧಿಯೊಳಗೆ ಸಾಕಷ್ಟು ಕೆಲಸ ಕಾರ್ಯಗಳನ್ನು ತಾವು ಕೈಗೊಂಡಿರುವುದಾಗಿ ಹೇಳಿದರು.
ಮದ್ದೂರು ಪಟ್ಟಣದ ಸಮಗ್ರ ಅಭಿವೃದ್ಧಿ ಮತ್ತು ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳ ಪುನಶ್ಚೇತನಕ್ಕೆ ಪುರಸಭೆ ಅಧಿಕಾರ ಅವಶ್ಯವೆಂದು ಕಾಂಗ್ರೇಸ್ ಪಕ್ಷದ ಚುನಾಯಿತ ಪುರಸಭಾ ಮತ್ತು ನಾಮ ನಿರ್ದೇಶಕ ಸದಸ್ಯರ ಅಭಿಪ್ರಾಯವಾಗಿದ್ದು ಸಾಕಷ್ಟು ಸದಸ್ಯ ಬಲ ಇಲ್ಲದ ಕಾರಣ ತಾವು ಈವರೆವಿಗೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲವೆಂದರು.
ಆತುರದ ನಿರ್ಧಾರ:
ಮದ್ದೂರು ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಸ್‍ಪೆÇೀರ್ಟ್ ಸೇವಾ ಕೇಂದ್ರವನ್ನು ಜಿಲ್ಲಾ ಕೇಂದ್ರ ಮಂಡ್ಯಕ್ಕೆ ಸ್ಥಳಾಂತರಿಸಲು ಮುಂದಾಗಿರುವ ಸಂಸದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮದ್ದೂರು ತಾಲೂಕಿನ ಮತದಾರರು ನೀಡಿದ ಅತಿ ಹೆಚ್ಚು ಮತಗಳಿಗೆ ನೀಡುತ್ತಿರುವ ಬಳುವಳಿ ಎಂದು ಟೀಕಿಸಿದರು.
ಮದ್ದೂರು ಪಾಸ್‍ಪೆÇೀರ್ಟ್ ಕೇಂದ್ರವನ್ನು ಮದ್ದೂರಿನಲ್ಲೇ ಮುಂದುವರೆಸಿ ಜಿಲ್ಲಾ ಕೇಂದ್ರ ಮಂಡ್ಯದಲ್ಲಿ ಉಪ ಕೇಂದ್ರವೊಂ ದನ್ನು ತೆರೆಯಲು ಕೇಂದ್ರ ಸರಕಾರದ ಮಟ್ಟದಲ್ಲಿ ಯತ್ನಿಸುವಂತೆ ಸಲಹೆ ನೀಡಿದರು.
ತಾಲೂಕು ಕೇಂದ್ರದಲ್ಲಿ ಪಾಸ್‍ಪೆÇೀರ್ಟ್ ಸೇವಾ ಕೇಂದ್ರ ತೆರೆಯಲು ತುಂಬಾ ಕಷ್ಟದ ಕೆಲಸವಾಗಿದ್ದು ಅಂದಿನ ಆಡಳಿತಾವಧಿಯಲ್ಲಿ ತೆರೆದಿರುವ ಸೇವಾ ಕೇಂದ್ರದಿಂದ ಸಾವಿರಾರು ಮಂದಿಗೆ ಹೆಚ್ಚಿನ ಅನುಕೂಲ ವಾಗಿದ್ದು ಕುಮಾರಸ್ವಾಮಿ ಅವರು ಕ್ಷೇತ್ರದ ಜನತೆಗೆ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿ ಕ್ಷೇತ್ರದ ಮತದಾರರ ಋಣ ತೀರಿಸಬೇಕೆಂದರು.
ಈ ವೇಳೆ ಕದಲೂರು ಗ್ರಾ.ಪಂ. ಅಧ್ಯಕ್ಷ ತಿಮ್ಮೇಗೌಡ,ಗ್ರಾ.ಪಂ. ಮಾಜಿ ಅಧ್ಯಕ್ಷ ಎನ್.ಎಂ.ಪ್ರಕಾಶ್, ಮುಖಂಡರಾದ ಕೆ.ಬಿ.ದೊಡ್ಡಿ ರಾಜಣ್ಣ,ಮಹದೇವು, ದೊರೆಸ್ವಾಮಿ, ಶಿವು, ಮಹೇಶ್, ಯತೀಶ್, ಸತೀಶ್, ಶರತ್, ನವೀನ್ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.