ಸಮಾಜದ ಉನ್ನತಿಗೆ ಶ್ರಮಿಸಲು ಕರೆ
ಲಕ್ಷ್ಮೇಶ್ವರ,ಸೆ.9: ರಾಜ್ಯದಲ್ಲಿ ಸುಮಾರು 84 ಲಕ್ಷ ಜನಸಂಖ್ಯೆ ಹೊಂದಿರುವ ವೀರಶೈವ ಪಂಚಮಸಾಲಿ ಸಮಾಜ ಶತಶತಮಾನಗಳಿಂದಲೂ ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿದೆ ಈ ಸಮಾಜಕ್ಕೆ ನಿಜವಾಗಿಯೂ ನ್ಯಾಯ ಸಿಗಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ನಮ್ಮ ಹಕ್ಕುಗಳಿಗಾಗಿ ಹೋರಾಡುವ ಅವಶ್ಯಕತೆ ಇದೆ ಎಂದು ಕರ್ನಾಟಕ ರಾಜ್ಯ ವೀರಶೈವ ಪಂಚಮಸಾಲಿ ಸಂಘದ ಅಧ್ಯಕ್ಷರಾದ ಸೋಮನಗೌಡ ಮಾಲಿ ಪಾಟೀಲ್ ಹೇಳಿದರು.
ಅವರು ಪಟ್ಟಣದ ಚಂಬಣ್ಣ ಬಾಳಿಕಾಯಿಯವರ ಮಿಲ್ ಆವರಣದಲ್ಲಿ ಲಕ್ಷ್ಮೇಶ್ವರ ತಾಲೂಕ ವೀರಶೈವ ಪಂಚಮಸಾಲಿ ಸಮಾಜ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿ ಸಮಾಜ ಸಂಘಟನೆಗಾಗಿ ಇದ್ದ ನೌಕರಿಯನ್ನು ಬಿಟ್ಟು ಸಂಘಟನೆಗೆ ಧುಮುಕಿದ್ದೇನೆ ಈ ಸಮಾಜದಲ್ಲಿ ಎಲ್ಲರೂ ಶ್ರೀಮಂತರಿಲ್ಲ ಸಮಾಜದಲ್ಲಿ ಬಹಳಷ್ಟು ಜನ ಬಡತನದಿಂದ ಬದುಕು ಸಾಗಿಸುತ್ತಿದ್ದು ಕೃಷಿಯೇ ಮೂಲಾಧಾರವಾಗಿದೆ ಸಮಾಜದಲ್ಲಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಸಬಲರಾಗಬೇಕಾದರೆ ಎಲ್ಲರೂ ಶಿಕ್ಷಣ ಪಡೆಯುವ ಮೂಲಕ ಸಮಾಜದ ಉನ್ನತಿಗಾಗಿ ಶ್ರಮಿಸಬೇಕು ಎಂದರು.
ಈ ಸಮಾಜ ಒಗ್ಗಟ್ಟಿದೆ ಎಂಬುದನ್ನು ಅರಮನೆಯ ಮೈದಾನದಲ್ಲಿ 10 ಲಕ್ಷ ಜನರನ್ನು ಸೇರಿಸಿ ಸಮಾವೇಶ ಮಾಡಿದ್ದು ಸಾಕ್ಷಿಯಾಗಿದೆ ಪ್ರತಿಯೊಬ್ಬರೂ ಸಮಾಜ ನನಗೇನು ಮಾಡಿದೆ ಎನ್ನುವುದಕ್ಕಿಂತಲೂ ಸಮಾಜಕ್ಕಾಗಿ ನನ್ನ ಕೊಡುಗೆ ಏನು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಸಮಾಜದಲ್ಲಿನ ಅತ್ಯಂತ ಬಡವರ ಮತ್ತು ಅನಾಥ ಮಕ್ಕಳ ಏಳಿಗೆಗಾಗಿ ಸಮಾಜ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಿದೆ ಎಂದರು ತಾಲೂಕಿನಲ್ಲಿ ಪಂಚಮಸಾಲಿ ಸಂಘಟನೆ ಅತ್ಯುತ್ತಮವಾಗಿದೆ ಎಂದು ಪ್ರಶಂಶಿಸಿದರು.
ಇದಕ್ಕೂ ಮುಂಚೆ ವೀರರಾಣಿ ಕಿತ್ತೂರ ಚೆನ್ನಮ್ಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಅಧ್ಯಕ್ಷತೆಯನ್ನು ಲಕ್ಷ್ಮೇಶ್ವರ ತಾಲೂಕ ವೀರೇಶೈವ ಪಂಚಮಸಾಲಿ ಸಂಘದ ಅಧ್ಯಕ್ಷ ಮಂಜುನಾಥ ಮಾಗಡಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪಾಟೀಲ್ ಮಾತನಾಡಿದರು ವೇದಿಕೆಯಲ್ಲಿ ದೇವಣ್ಣ ಬಳಿಗಾರ ಚಂಬಣ್ಣ ಬಾಳಿಕಾಯಿ ಕೊಟ್ರೇಶ್ ಕಿಚಡಿ ಎನ್ ಐ ಬೆಲ್ಲದ ನೀಲಪ್ಪ ಕರಜಕ್ಕನ್ನವರ ರುದ್ರಗೌಡ ಪೆÇಲೀಸ್ ಗೌಡ್ರ ಪ್ರವೀಣ್ ಬಾಳಿಕಾಯಿ ಮಹದೇವಪ್ಪ ಅಣ್ಣಿಗೇರಿ ಸಿದ್ದನಗೌಡ ಬಳ್ಳೊಳ್ಳಿ ಎಂ ಆರ್ ಪಾಟೀಲ ಫಕೀರೇಶ ಕವಲೂರ ವೀರೇಂದ್ರ ಕಟಿಗಿ ಶೈಲಾ ಆದಿ ಮಾಲಾದೇವಿ ದುಂದರಗಿ ಶಾರಕ್ಕಾ ಮಹಾಂತಶೆಟ್ಟರ ಸೇರಿದಂತೆ ಅನೇಕರಿದ್ದರು.
ವಿಶ್ರಾಂತ ಶಿಕ್ಷಕ ಎಸ್‍ಎಫ್ ಆದಿ ಪ್ರಾಸ್ತಾವಿಕ ಮಾತನಾಡಿದರೆ ನಾಗರಾಜ್ ಕಳಸಾಪುರ ಸ್ವಾಗತಿಸಿ ಚಂದ್ರು ಮಾಗಡಿ ನಿರ್ವಹಿಸಿದರು.