ಉತ್ತಮ ನಾಗರಿಕ ನಿರ್ಮಾಣದಲ್ಲಿ ಎನ್‌ಎಸ್‌ಎಸ್ ಪಾತ್ರ ಹಿರಿದು:ಮುರಾಳ
ತಾಳಿಕೋಟೆ:ಸೆ.೯: ವಿದ್ಯಾರ್ಥಿಯ ದೆಸೆಯಲ್ಲಿ ರಾಷ್ಟಿçÃಯ ಸೇವಾ ಯೋಜನೆ ವಾರ್ಷಿಕ ಶಿಬಿರದಲ್ಲಿ ಭಾಗವಹಿಸಿದರೆ ಸೇವಾ ಮನೋಭಾವವನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಉತ್ತಮ ನಾಗರಿಕನಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಸಹ ಕಾರ್ಯದರ್ಶಿಗಳು ಹಾಗೂ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷರಾದ ಕಾಶಿನಾಥ ಎಸ್ ಮುರಾಳ ಹೇಳಿದರು.
ಪಟ್ಟಣದ ಆಶ್ರಯ ಕಾಲೋನಿಯಲ್ಲಿ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಿಂದ ಹಮ್ಮಿಕೊಂಡಿದ್ದ ರಾಷ್ಟಿçÃಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಉತ್ತಮ ಜೀವನ ನಿರ್ವಹಿಸುವಲ್ಲಿಯೂ ರಾಷ್ಟಿçÃಯ ಸೇವಾ ಯೋಜನೆ ಪಾತ್ರ ವಹಿಸುತ್ತವೆ ಈ ಶಿಬಿರಗಳು ಸಹಬಾಳ್ವೆಯ ಕಲೆಯನ್ನು ಕಲಿಸಿಕೊಡುತ್ತದೆ. ಈ ಶಿಬಿರದಲ್ಲಿ ಕಲಿತ ಅಂಶಗಳು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕೆಂದು ಹೇಳಿದರು.
ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಎಂ.ಎಸ್ ಸರಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ನಿರಂತರ ಅಧ್ಯಯನ ಶೀಲತೆಯನ್ನು ಮೈಗೂಡಿಸಿಕೊಂಡು ಸಾಧನೆ ಮಾಡುವ ಮೂಲಕ ಗುರು ಹಿರಿಯರ ಆಸೆಯಂತೆ ಹೆಮ್ಮೆ ಪಡುವಂಥ ವ್ಯಕ್ತಿಗಳಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತಾಗಬೇಕು ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ದಾಸರಾಗದೆ ಅಧ್ಯಯನದ ಕಡೆಗೆ ಹೆಚ್ಚು ಗಮನಹರಿಸಿ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕೆಂದರು.
ಎಂಜಿವಿಸಿ ಶಿಕ್ಷಣ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಬಸವರಾಜ ಬೋಳಿಶೆಟ್ಟಿ ಅವರು ಮಾತನಾಡಿ ಪಠ್ಯದ ವಿಷಯದ ಜೊತೆಗೆ ಸೇವಾ ಮನೋಭಾವ ಬರುವ ಉದ್ದೇಶದಿಂದ ರಾಷ್ಟಿçÃಯ ಸೇವಾ ಯೋಜನೆಯ ಶಿಬಿರ ಹಮ್ಮಿಕೊಳ್ಳಲಾಗುತ್ತದೆ ಈ ಶಿಬಿರದ ಮೂಲ ಉದ್ದೇಶ ನಿಸ್ವಾರ್ಥ ಸೇವೆ. ನಾನಲ್ಲ ಆದರೆ ನೀವು ನನಗಾಗಿ ಅಲ್ಲ ಎಲ್ಲರಿಗಾಗಿ ಎನ್ನುವದ್ದಾಗಿದೆ ದೇಶದಲ್ಲಿರುವ ಮೂಢನಂಬಿಕೆ ತೊಲಗಿಸಿ ವೈಚಾರಿಕ ಅಂಶಗಳನ್ನು ಮೈಗೂಡಿಸಿಕೊಳ್ಳಲು ಎನ್‌ಎಸ್‌ಎಸ್ ಪ್ರೇರೇಪಿಸುತ್ತವೆ ಆ ದೆಸೆಯತ್ತ ಹೊಸ ಆಲೋಚನೆಗಳು ಈ ಶಿಬಿರದ ಮೂಲಕವಾಗಿ ವ್ಯಕ್ತವಾಗುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಮೇಶ ಬಂಟನೂರ ಮಾತನಾಡಿ ಎನ್ ಎಸ್ ಎಸ್ ಶಿಬಿರಗಳು ಸಂಬAಧಗಳ ನೆಲೆಗಟ್ಟಾಗಿದೆ. ನಾಗರಿಕತೆಯ ಅರಿವು ಅರಿತು ಬದುಕುವ ಗುಣ ಕಲಿಸಿಕೊಡುತ್ತದೆ ಹಾಗೂ ವಿದ್ಯಾರ್ಥಿಗಳಲ್ಲಿ ಪಲಾಪೇಕ್ಷೆ ಇಲ್ಲದೇ ಸೇವೆ ಮಾಡುವ ಇಚ್ಚಾ ಶಕ್ತಿ ಈ ಶಿಬಿರದಲ್ಲಿ ಅಡಗಿದೆ ಇಂತಹ ಲಾಭಗಳು ಸ್ವಯಂಸೇವಕರು ಪಡೆದುಕೊಂಡು ಸದೃಢ ಸಮಾಜ ಕಟ್ಟುವಲ್ಲಿ ಶ್ರಮಿಸಿ ಎಂದು ಹೇಳಿದರು.
ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಉಪನ್ಯಾಸಕ ಎ.ಎ ಗಂಗನಗೌಡರ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು, ಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿ ನಿಂಗಣ್ಣ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿ ರಕ್ಷಿತಾ ಸಜ್ಜನ ನಿರೂಪಿಸಿದರು. ಪ್ರಶಿಕ್ಷಣಾರ್ಥಿ ಮಲ್ಲಮ್ಮ ಕರಿಗೌಡರ ವಂದಿಸಿದರು.