ಸನ್ಮಾನ, ಮನವಿ ಅರ್ಪಣೆ
ಮುನವಳ್ಳಿ,ಸೆ.9: ನವಿಲತೀರ್ಥ ಮಲಪ್ರಭಾ ನೀರಾವರಿ ಕಛೇರಿಯಲ್ಲಿ ಇಂಜಿನಿಯರಗಳ ಸನ್ಮಾನ ಕಾರ್ಯಕ್ರಮ ಜರುಗಿತು.
ಕಳಸಾ ಬಂಡೂರಿ ಹೋರಾಟ ಸಮಿತಿಯ ವಲಯ ಅಧ್ಯಕ್ಷ ನಿಂಗನಗೌಡ ಮಲಗೌಡ್ರ ಮಾತನಾಡಿ ಉಪ ಕಾಲುವೆಗಳು ಹಲುವಾರು ವರ್ಷಗಳಿಂದ ದುರಸ್ತಿ ಆಗದೆ ನೀರು ಪೋಲಾಗಿ ಹೋಗುತ್ತಿದ್ದು ಮುಂದಿನ ರೈತರ ಹೊಲಗಳಿಗೆ ನೀರು ದೊರೆಯುತ್ತಿಲ್ಲ ತುರ್ತಾಗಿ ಉಪ ಕಾಲುವೆಗಳನ್ನು ದುರಸ್ತಿ ಗೊಳಿಸಿ ರೈತರ ಜಮಿನುಗಳಿಗೆ ನೀರು ಒದಗಿಸುವ ಕೆಲಸ ವಾಗಬೇಕು ಎಂದರು.
ಪಟ್ಟಣದ ಪಿ.ಕೆ.ಪಿ.ಎಸ್ ಅಧ್ಯಕ್ಷ ಅಂಬರೀಷ ಯಲಿಗಾರ ಮಾತನಾಡಿ ಮಲಪ್ರಭಾ ಆಣೆಕಟ್ಟಿನ ಗೇಟುಗಳನ್ನು ಪರಿಶೀಲಿಸಿ ಸುರಕ್ಷಿತವಾಗಿ ಕಾರ್ಯನಿರ್ವಹಣೆ ಮಾಡುವಂತೆ ನಿಗಾ ವಹಿಸಬೇಕು ಹಲವಾರು ವರ್ಷಗಳಿಂದ ಸತತವಾಗಿ ಐದು ವರ್ಷ ಆಣೆಕಟ್ಟು ಭರ್ತಿಯಾಗಿ ರೈತರ ಸಂತಸಕ್ಕೆ ಕಾರಣವಾಗಿದೆ ಇಂಥ ನೀರು ಪೂಲಾಗದಂತೆ ತಡೆಯಲು ಸೂಕ್ತ ಕ್ರಮ ಕೈಕೊಳ್ಳಬೇಕೆಂದರು ಕಳಸಾ ಬಂಡೂರಿ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಶಿವಾನಂದ ಮೇಟಿ ಮಾತನಾಡಿ ಅಧಿಕಾರಿಗಳು ಮಲಪ್ರಭೆಗೆ ಪ್ರವಾಹ ಬಾರದಂತೆ ಜಾಣ್ಮೆಯಿಂದ ನಿಯಂತ್ರಿಸಿರುವುದು ಮೆಚ್ಚುಗೆಯ ಸಂಗತಿಯಾಗಿದೆ ಎಂದರು.
ಇಂಜಿನಿಯರಗಳಾದ ವಿ.ಎಸ್. ಮಧುಕರ, ಸಜ್ಜನಶೆಟ್ಟರ, ಮುದಿಗೌಡ್ರ ಹಾಗೂ ಗೇಟ ಕೀಪರ ಗದಿಗೆಪ್ಪ ಹಲಗಿ ಮಾತನಾಡಿ ತಜ್ಞರ ಸಮಿತಿ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಗೇಟುಗಳು ಸುರಕ್ಷಿತವಾಗಿವೆ ಎಂದು ವರದಿ ನೀಡಿದ್ದಾರೆ ಈ ಕುರಿತು ಯಾವುದೇ ಸಂದೇಹ ಬೇಡ ಎಂದರು, ಹಾಗೂ ಉಪಕಾಲುವೆಗಳಿಗೆ ಸೆ.13 ರಂದು ಖುದ್ದಾಗಿ ಪರಿಶೀಲಿಸಿ ಒಂದು ವಾರದಲ್ಲಿ ದುರಸ್ತಿ ಗೋಳಿಸಿ ನೀರು ಸರಾಗವಾಗಿ ರೈತರ ಜಮಿನುಗಳಿಗೆ ಮುಟ್ಟುವ ಹಾಗೆ ಮಾಡಿಕೊಡಲಾಗುವುದು ಎಂದರು.
ಇಸ್ಮಾಯಿಲ ಕೊಂದುನಾಯ್ಕ, ಪ್ರಕಾಶ ಕಾಮಣ್ಣವರ, ಮಹಾಂತೇಶ ಕುರಬಗಟ್ಟಿ, ನಾಗಪ್ಪ ಕಾಮಣ್ಣವರ, ಶ್ರೀಕಾಂತ ನೇಗಿನಾಳ, ಬಾಳಪ್ಪ ರಡ್ಡರಟ್ಟಿ, ಈರಣ್ಣ ಬಸಳಿಗುಂದಿ, ಹನಮಂತ ಹಡಪದ, ದ್ಯಾಮನಗೌಡ ಬಕಾಡೆ, ಮನೋಹರ ನಾಯ್ಕ, ರವಿ ಹುರಳಿ, ಬಾಬು ಕಲಾಲ, ಪ್ರಶಾಂತ ಉಜ್ಜಿನಕೊಪ್ಪ, ಇತರರು ಉಪಸ್ಥಿತರಿದ್ದರು.
