ಜೀವನದಲ್ಲಿ ನೆಮ್ಮದಿಯಿಂದ ಬದುಕಬೇಕಾಗಿದೆ:ಜಾಲಿಬೆಂಚಿ
ತಾಳಿಕೋಟೆ:ಸೆ.೯: ಹಳ್ಳಿಗಳಲ್ಲಿ ಇರತಕ್ಕಂತಹ ನಡೆ-ನುಡಿಗಳು ಹಾಗೂ ಅಲ್ಲಿರತಕ್ಕಂತಹ ಚಿಂತನೆಗಳನ್ನು ಮರೆತಿದ್ದೇವೆ ಆದರೂ ಜಗತ್ತನ್ನು ತೂಗುವ ಶಕ್ತಿ ಮಹಿಳೆಯರ ಕೈಂiÀಲ್ಲಿದೆ ಎಂಬುದನ್ನು ಎಲ್ಲರು ಅರ್ಥೈಸಿಕೊಂಡು ನಡೆಯಬೇಕಾಗಿದೆ ಎಂದು ಬೆಂಗಳೂರು ಕರ್ನಾಟಕ ಜನಪದ ಅಕಾಡೆಮಿಯ ನಿಕಟಪೂರ್ವ ಸದಸ್ಯರಾದ ಅಮರಯ್ಯ ಜಾಲಿಬೆಂಚಿ ಅವರು ನುಡಿದರು.
ರವಿವಾರರಂದು ಸ್ಥಳೀಯ ಶ್ರೀ ಖಾಸ್ಗತೇಶ್ವರ ತರುಣ ಮಂಡಳಿ ವಿದ್ಯಾನಗರದಲ್ಲಿ ೭ನೇ ವರ್ಷದ ಗಜಾನನ ಉತ್ಸವ ಅಂಗವಾಗಿ ಏರ್ಪಡಿಸಲಾದ “ಹಳ್ಳಿಯ ಸೊಗಡು” ಎಂಬ ಕಾರ್ಯಕ್ರಮದ ಅನಾವರಣ ಸಮಾರಂಭದಲ್ಲಿ ಮುಖ್ಯಥಿತಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಮನೆ ದೇಶ ಸಂರಕ್ಷಣೆಯಲ್ಲಿರಬೇಕಾದರೆ ಮಹಿಳೇಯರ ಕೊರಳಲ್ಲಿಯ ತಾಳಿ ಹಾಗೂ ಹಣೆಯ ಮೇಲೆ ಕುಂಕುಮದ ಕಲೆ ಬೇಕೆಂದರು. ಕೆಂಪಾದ ಕುಂಕುಮ ನೋಡಿದರೆ ಆತ್ಮೀಯ ತಾಯಿಯ ಭಾವನೆ ಹುಟ್ಟುತ್ತದೆ ಅಲ್ಲದೆ ಕ್ರೂರ ಮನುಷ್ಯ ಕೂಡ ಅದನ್ನು ನೋಡಿ ತಲೆಬಾಗಿಸುತ್ತಾನೆಂದರು. ಇಂದಿನ ದಿನಮಾನದಲ್ಲಿ ವಿದೇಶ ಸಂಸ್ಕೃತಿಗೆ ಒಳಪಟ್ಟು ಹಣೆಯಮೇಲೆ ಟಿಕಳಿ ಹಚ್ಚುವ ಕಾರ್ಯ ನಡೆದಿದೆ ಇದರಿಂದ ನಮ್ಮ ದೇಶದ ಸಂಸ್ಕೃತಿ ಎಲ್ಲಿಗೆ ಹೊರಟಿದೆ ಎನ್ನುವುದನ್ನು ಅರಿತುಕೊಂಡು ನಡೆಯಬೇಕಾಗಿದೆ ಎಂದರು. ಹಳ್ಳಿಯ ಬದುಕನ್ನು ತೊರಿಸುವ ಕಾರ್ಯ ಮಾಡಿದ ವಿದ್ಯಾನಗರ ಬಡಾವಣೆಯ ಯುವಕರ ಕಾರ್ಯ ಮಹತ್ವದ್ದಾಗಿದೆ ಹಿಂದಿನ-ಇAದಿನ ಇತಿಹಾಸ ಹೇಗಿತ್ತೆಂದು ಮಕ್ಕಳ ನದಿರಿಗೆ ತಂದು ಹಂಚಿತಿನ್ನುವ ಬದಕನ್ನು ಕಲಿಸುವ ಕಾರ್ಯ ಮಾಡಬೇಕೆಂದರು. ಇಂದಿನ ಸಮಾಜದಲ್ಲಿ ಸುಳ್ಳಿಗೆ ಬೋರ್ಡು ಇದೆ, ಸತ್ಯಕ್ಕೆ ಬದುಕಿಲ್ಲದಂತಾಗಿz.ೆ ಇಂದಿನ ಸ್ಥತಿ-ಗತಿ ಎಂದು ವಿಷಾದಿಸಿದ ಜಾಲಿಬೆಂಚಿ ಅವರು ಕೆಡಕಿನಿಂದ ಒಳಿತಾಗಲು ಸತ್ಸಂಗಗಳು ಆಧ್ಯಾತ್ಮ ಅಗತ್ಯವಾಗಿದೆ ಎಂದರು.ಇAದಿನ ಹಳ್ಳಿಯ ಸೊಗಡು ಕಾರ್ಯಕ್ರಮ ಕುರಿತು ಸಂಘಟಿಕರು ಎಲ್ಲರಿಗೆ ಮನವರಿಕೆ ಮಾಡಲು ಹೊಸ ಪರಂಪರೆಗೆ ಗುರಿತಿಸಲು ಗಾಲಿಗಳು, ಬಿಸುಕಲ್ಲುಗಳು, ಕುಟ್ಟುವ ಪದಗಳು, ಲಾವಣಿ ಪದಗಳು ಇಂತಹದನ್ನು ಅರಿತು ಕೋಳ್ಳಲು ಅನುವು ಮಾಡಿ ಕೊಟ್ಟಿದ್ದಾರೆ ಲಾವಣಿ ಪದಗಳು ,ಗೀಗಿ ಪದಗಳು ಹಾಗೂ ಹಂತಿ ಪದಗಳ ಮೂಲಕ ಹಿಂದಿನ ಕಾಲದಲ್ಲಿ ಸ್ವಾತಂತ್ರö್ಯ ದೊರಕಿಸಿ ಕೊಳ್ಳುವಲ್ಲಿ ಯಶಸ್ವಿಗೊಂಡಿದ್ದಾರೆ. ಸತ್ಯವಾದ ಬದುಕು ಹಳ್ಳಿಯದ್ದಾಗಿದೆ ಇದು ಸುಳ್ಳಿನ ಕತೆಯಲ್ಲವೆಂದರು.
ಇನ್ನೋರ್ವ ದಿವ್ಯ ಸಾನಿಧ್ಯವಹಿಸಿ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಶ್ರೀ ಖಾಸ್ಗತೇಶ್ವರ ಮಠದ ಬಾಲಶೀವಯೋಗಿ ಶ್ರೀ ಸಿದ್ದಲಿಂಗ ದೇವರು ಮಾತನಾಡಿ ಸರಳತೆ ಮತ್ತು ಸಂಸ್ಕೃತಿಯಿAದ ಕೂಡಿದ ದೇಶ ಭಾರತ ದೇಶ ನಮ್ಮದಾಗಿದೆ ಹಳ್ಳಿಯಲ್ಲಿರತಕ್ಕಂತಹ ನಡೆತಕ್ಕಂತಹ ಬಿಸುವ ಹಾಗೂ ಕುಟ್ಟುವ ಕಾರ್ಯಗಳು ಇಂದಿನ ದಿನಮಾನಗಳಲ್ಲಿ ಕಣ್ಮರೆಯಾದಂತಾಗಿವೆ ಇಂತಹ ಕಾರ್ಯ ಮಾಡುವುದನ್ನು ಬಿಟ್ಟರೆ ಮರೆತುಹೋಗುತ್ತವೆ ಎಂಬ ಉದ್ದೇಶದಿಂದ ವಿದ್ಯಾನಗರ ಬಡಾವಣೆಯ ಶ್ರೀ ಖಾಸ್ಗತೇಶ್ವರ ತರುಣ ಮಂಡಳಿಯವರು ಇಂದು ಹಳ್ಳಿಯ ಸೊಗಡು ಎಂಬ ಕಾರ್ಯಕ್ರಮವನ್ನು ಏರ್ಪಡಿಸಿ ಹಳ್ಳಿಗಳಲ್ಲಿಯ ಆರೋಗ್ಯಕರವಾದ ಕೆಲಸ ಕಾರ್ಯಗಳ ಕುರಿತು ಉದಾರಿಸಿದ ಶ್ರೀಗಳು ಇಂದಿನ ಇಲ್ಲಿಯ ಕಾರ್ಯಕ್ರಮ ಮಾದರಿಯ ಕಾರ್ಯಕ್ರಮವು ಅನ್ಯರಿಗೆ ಸುಧಾರಣೆಯತ್ತ ಕೊಂಡೊಯ್ಯುವAತಹ ಕಾರ್ಯವು ಇದರಲ್ಲಿ ಅಡಗಿದೆ ಎಂದು ಸಂಘಟಿಕರು ಮಾಡಿದಂತಹ ಹಾಗೂ ಪ್ರದರ್ಶನಕ್ಕೆ ಇಟ್ಟಂತಹ ಹಳ್ಳಿಯಲ್ಲಿ ಮನೆಗಳಲ್ಲಿ ಉಪಯೋಗಿಸುವಂತಹ ಸಲಕರಣೆಗಳ ಕುರಿತು ಬಿಡಿ-ಬಿಡಿಯಾಗಿ ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು ಕೇಲವು ಚಿಕ್ಕ ಕತೆಗಳನ್ನು ಹೇಳಿ ಉಪಸ್ಥಿತ ಜನಸ್ಥೋಮಕ್ಕೆ ಒಳ್ಳೆಯ ಮಾರ್ಗದತ್ತ ಕೊಂಡೊಯ್ಯುವ ಕಾರ್ಯ ಶ್ರೀಗಳು ಮಾಡಿದರಲ್ಲದೆ ಇಂತಹ ಕಾರ್ಯಕ್ರಮವನ್ನು ಮೇಲಿಂದ ಮೇಲೆ ಏರ್ಪಡಿಸಿ ಮಕ್ಕಳಿಗೂ ಕೂಡ ಜ್ಞಾನೋದಯ ಮಾಡಬೇಕೆಂದರು.
ಇನ್ನೋರ್ವ ಅಥಿತಿ ಬಾಲಭಾರತಿ ವಿದ್ಯಾಮಂದಿರದ ಶಿಕ್ಷಕ ಪ್ರಕಾಶ ಕಟ್ಟಿಮನಿ ಅವರು ಮಾತನಾಡಿ ಹಳ್ಳಿಯ ಸೊಗಡು ಎಂಬ ಕಾರ್ಯಕ್ರಮ ತರುಣ ಮಂಡಳಿಯವರು ಏರ್ಪಡಿಸಿದ್ದು ಸಂತಸ ತಂದಿದೆ ಇಂತಹ ಕಾರ್ಯಕ್ರಮ ಮೇಲಿಂದ ಮೇಲೆ ನಡೆದರೆ ಸನ್ಮಾರ್ಗದತ್ತ ಸಾಗಬಹುದಾಗಿದೆ ಎಂದರು.
ವೇದಿಕೆಯ ಮೇಲೆ ರೈತರಾದ ಜಿ.ಜಿ ಯರನಾಳ ಹಾಗೂ ಸಾಹೇಬಗೌಡ ಯಾಳಗಿ ಅವರು ಉಪಸ್ಥಿತರಿದ್ದರು. ಇದೇ ಸಮಯದಲ್ಲಿ ಅಥಿತಿಯಳಿಗೆ ಹಾಗೂ ಶ್ರೀಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ನಂತರ ಸುಮಂಗಲೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮ ಸಂಘಟಿಸಿದ ವಿದ್ಯಾನಗರ ಬಡಾವಣೆಯ ಯುವಕ ಮಂಡಳಿಯವರಾದ ಸಂತೋಷ ಗಾವಡೆ, ಬಾಬೂ ಅಗಸರ, ಸಮರ್ಥ ಸಜ್ಜನ, ಈರಣ್ಣ ಬಡಿಗೇರ, ಸುನೀಲ ನಾಲತವಾಡ, ಅಕ್ಷಯ ನಾಲತವಾಡ ಮೊದಲಾದವರು ಉಪಸ್ಥಿತರಿದರು.