ಹೊಳೆ ಹರಿದು ರೈತರ ಬದುಕು ಹಸನಾಗಿ ನಾಡು ಸಮೃದ್ಧವಾಗಲಿದೆ
ಕೊಲ್ಹಾರ:ಸೆ.೯: ಪ್ರಸಕ್ತ ವರ್ಷ ಶೃಂಗಾರದ ಮಳೆ, ಬಂಗಾರದ ಬೆಳೆ, ಸಂಪತ್ತಿನ ಹೊಳೆ ಹರಿದು ರೈತರ ಬದುಕು ಹಸನಾಗಿ ನಾಡು ಸಮೃದ್ಧವಾಗಲಿದೆ ಎಂದು ಗಜೇಂದ್ರಗಡ ತಳ್ಳಿಹಾಳ ಕೂಡಿಮಠದ ದಿವ್ಯ ಕಾಲಜ್ಞಾನ ಬ್ರಹ್ಮ ಸದ್ಗುರು ವಿಶ್ವಕಾಲ ಶರಣ ಬಸವಶಿವಯೋಗಿ ಮಹಾಸ್ವಾಮಿಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕುರಿತು ಕಾಲಜ್ಞಾನ ಭವಿಷ್ಯ ನುಡಿದರು.
ಕಳ್ಳಿಹಳ್ಳ ತುಂಬಿ ಹರಿಯುವಾಗ, ಉಳ್ಳವರು ಶಿವಪೂಜೆ ಮಾಡುವಾಗ, ಸಂಸಾರ ಸಂಗಿ ನಿಸ್ಸಂಗಿ ಪರಿತ್ಯಾಗಿ ಆತನೇ ಭಾರತ ದೇಶದ ಪ್ರಧಾನಿಯಾಗಿ ಇನ್ನೂ ೧೫ ವರ್ಷಗಳಕಾಲ ಅಧಿಕಾರ ನಡೆಸಲಿದ್ದಾರೆ, ೨೦೪೭ ರ ಹೊತ್ತಿಗೆ ಪ್ರಪಂಚದ ೧೭೫ ರಾಷ್ಟ್ರಗಳು ಹಿಂದೂ ಧರ್ಮದತ್ತ ವಾಲುತ್ತವೆ, ೨೦೨೫ ಮಾರ್ಚ್ ತಿಂಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮದ್ಯಸ್ಥಿಕೆಯಲ್ಲಿ ರಷ್ಯ ಯುಕ್ರೇನ್ ಮಧ್ಯದ ಯುದ್ಧ ಕೊನೆಗೊಳ್ಳಲಿದೆ ಎಂದು ಅವರು ನುಡಿದರು.
ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಮಾತನಾಡಿ ಭಾರತೀಯ ಪರಂಪರೆಯ ಆಧ್ಯಾತ್ಮಿಕ ತಿರುಳನ್ನು ಸರ್ವರು ಅರಿತುಕೊಳ್ಳಬೇಕಿದೆ, ವಿಶ್ವದ ಭೂಪಟದಲ್ಲಿ ಭಾರತೀಯ ಪರಂಪರೆ ಹಾಗೂ ಸಂಸ್ಕೃತಿಗೆ ವಿಶಿಷ್ಟವಾದ ಸ್ಥಾನವಿದೆ, ಆಧ್ಯಾತ್ಮದ ಅಡಿಯಲ್ಲಿ ಬರುವ ಭಜನೆಯು ದೇವರ ಆರಾಧನೆಯ ಪ್ರಥಮ ಮೆಟ್ಟಿಲು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ,ಜಿಲ್ಲಾ ಉತ್ತಮ ಪತ್ರಕರ್ತ ಪ್ರಶಸ್ತಿ ಪಡೆದ ಬಸವರಾಜ ಉಳ್ಳಾಗಡ್ಡಿ ಅರುಣ ಔರಸಂಗ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಎಸ್ ಎಮ್ ಡಾಂಗೆ ವಾಯ್ ಜಿ ಶಿರೋಳ ಸಿ ಎಚ್ ಗೌಡರ ಎಸ್ ಎಮ್ ಕೋರಿ ಎಸ್ ಪಿ ಹತ್ತಿರಕಾಳ ಸಿ ಸಿ ಸೌದಿ ಎಸ್ ಎಸ್ ಬಿರಾದಾರ ಎನ್ ಬಿ ಬಿರಾದಾರ ಎಸ್ ಆರ್ ಬಡಿಗೇರ ರಾಜಪ್ಪ ಇಂಡಿ ಸನ್ಮಾನ ಮಾಡಲಾಯಿತು.
ವೇದಿಕೆಯ ಮೇಲೆ ದಿಗಂಬರೇಶ್ವ ಸಂಸ್ಥಾನ ಮಠ ಕಲ್ಲಿನಾಥ ದೇವರು, ಚಂದ್ರಶೇಖರಯ್ಯ ಹಿರೇಮಠ, ಶೀಲವಂತ ಹಿರೇಮಠದ ಘ.ಮ.ಪೂ ಡಾ.ಕೈಲಾಸನಾಥ ಶ್ರೀಗಳು, ಮುಖಂಡರಾದ ಉಮೇಶ ಕಾರಜೋಳ, ಶೆಂಕ್ರೆಪ್ಪ ದೇಸಾಯಿ, ಸಿ.ಎಮ್ ಗಣಕುಮಾರ, ವಿನೀತ ದೇಸಾಯಿ, ಶಶಿಧರ ದೇಸಾಯಿ, ಕೆ.ಎಸ್ ಸೊನ್ನದ, ವಿರೂಪಾಕ್ಷ ಕೋಲಕಾರ, ಬಾಬು ಭಜಂತ್ರಿ, ಶ್ರೀಶೈಲ ಅಥಣಿ, ಅಪ್ಪಾಸಿ ಮಟ್ಟಿಹಾಳ, ಮಲ್ಲಪ್ಪ ಗಣಿ, ಬಸಪ್ಪ ಕೊಠಾರಿ, ಶರಣಪ್ಪ ಕೌಲಗಿ, ಹಣಮಂತ ಪತಂಗಿ, ದ್ಯಾವಪ್ಪ ತುಂಬರಮಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.