ಸೆ.೧೧ ರಂದು ಗಣೇಶ ವಿಸರ್ಜನೆ
ಬೀದರ: ಸೆ.೯:೨೦೨೪ರ ಗಣೇಶ ಉತ್ಸವ ಉಲ್ಲಾಸದಿಂದ ಅತೀ ವಿಜೃಂಭಣೆಯಿAದ ಗಣಪನ ಸ್ವಾಗಿತಿಸಿ ಬರಮಾಡಿಕೊಂಡು ದಿ. ೦೭ ರಂದು ನಗರದ್ಲಲಿ ೧೭೫ಕ್ಕೂ ಹೆಚ್ಚು ಸಾರ್ವಜನಿಕ ಗಣೇಶಗಳು ಸ್ಥಾಪನೆಯಾಗಿವೆ.ಸೆ. ೧೧ರಂದು ವಿಸರ್ಜನೆ ನಡೆಯಲಿದೆ. ಇಂದು ಗಣೇಶ ಮೈದಾನದ ಗಣೇಶ ಮಂದಿರದಲ್ಲಿ ಗಣೇಶ ಮಹಾ ಮಂಡಳಿಯ ಸಭೆ ಜರುಗಿ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು. ಗಣೇಶ ಮಹಾ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾದ ಬಾಬು ವಾಲಿ ಮಾತನಾಡಿ ನೌಬಾದ್‌ನಿಂದ ಚೌಬಾರಾ ಹಾಗೂ ಚಿಟ್ಟಾ ವಾಡಿಯಿಂದ ಚೌಬಾರದವರೆಗೆ ಎಲ್ಲಿಯೂ ಯಾವುದೇ ಸ್ಟಾಲ್, ಸ್ವಾಗತಕ್ಕೆ ಅನುಮತಿ ಇರುವುದಿಲ್ಲ ಗಣೇಶ ಮಹಾ ಮಂಡಳಿವತಿಯಿAದ ಒಂದೇ ಕಡೆ ಅದು ಐತಿಹಾಸಿಕ ಚೌಬಾರದ ಮೇಲೆ ಗಣೇಶ ಮಹಾ ಮಂಡಳಿ ಸ್ವಾಗತ ಸಮಿತಿಯಿಂದ ಸ್ವಾಗತಿಸಲಾಗುವುದು. ಜಿಲ್ಲಾಡಳಿತದ ನಿರ್ದೇಶನಗಳು ಎಲ್ಲಾ ಸಾರ್ವಜನಿಕ ಗಣೇಶ ಮಂಡಳಿಗಳು ಪಾಲನೆ ಮಾಡಬೇಕು ಮತ್ತು ಸಾಯಂಕಾಲ ಬೇಗ ಬಸವೇಶ್ವರ ವೃತ್ತದ ನಯಕಮಾನ್ ಒಳಗೆ ಪ್ರವೇಶವಾಗುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕರು ಮೆರವಣಿಯಲ್ಲಿ ಪಾಲ್ಗೊಂಡು ಗಣಪನ ದರ್ಶನ ಪಡೆಯಲು ಅನುವು ಮಾಡಿಕೊಂಡಬೇಕೆAದರು.
ಗಣೇಶ ಮಹಾ ಮಂಡಳಿ ವತಿಯಿಂದ ನಗರದ ಗಣೇಶ ಮೈದಾನದಲ್ಲಿ ಆಯೋಜಿಸಿದ ಸಭೆಯಲ್ಲಿ ಗಣೇಶ ಮಹಾ ಮಂಡಳಿ ವತಿಯಿಂದ ಲೋಗೋ ಬಿಡುಗಡೆ ಮಾಡಲಾಯಿತು. ಗಣೇಶ ಮಹಾ ಮಂಡಳಿ ವತಿಯಿಂದ ಉತ್ತಮ ಗಣೇಶ ಮೂರ್ತಿ, ಪರಿಸರ ಗಣೇಶ, ಉತ್ತಮ ಮೆರವಣಿಗೆ ಉತ್ತಮ ಅಲಂಕಾರಗಳಿಗೆ ಸಾರ್ವಜನಿಕ ಗಣೇಶ ಮಂಡಳಿಗಳಿಗೆ ಬಹುಮಾನ ನೀಡುವುದಾಗಿ ಘೋಷಿಸಲಾಯಿತು.
ವಿಶೇಷವಾಗಿ ಪೋಲಿಸ್ ಇಲಾಖೆಯಿಂದ ಪರಿಸರ ಸ್ನೇಹಿ ಗಣೇಶ ಮತ್ತು ಸಾಂಸ್ಕೃತಿಕವಾಗಿ ವಿಸರ್ಜನೆ ಮಾಡುವ ಗಣೇಶ ಮಂಡಳಿಗೆ ಒಂದು ಬಹುಮಾನ ವಿತರಿಸುತ್ತಾರೆ ಅದು ಕಳೆದ ೪ ವರ್ಷದಿಂದ ಪಾಂಡುರAಗ ಗಣೇಶ ಮಂಡಳಿಗೆ ಪಡೆಯುತ್ತಾ ಬಂದಿರುತ್ತದೆ. ಈ ಸಾರಿಯು ಅದು ಇರುತ್ತದೆ.
ಈ ಸಲ ನಗರದಲ್ಲಿ ಉತ್ಸಾಹದಿಂದ ಬಹಳ ಗಣಪತಿ ಅತೀ ಅದ್ದೂರಿಯಾಗಿ ಆಚರಿಸುತ್ತಿರುವುದು ಮತ್ತು ಹೆಚ್ಚು ಗಣಪತಿಗಳು ದೊಡ್ಡದಾಗಿದ್ದು, ಕಣ್ಣು ಕಂಗೊಳಿಸುವ ಅಲಂಕಾರ ಸಾರ್ವಜನಿಕ ಗಣಪತಿಗಳು ಮಾಡಿವೆ. ನಗರ ಮದುಮಗಳಂತೆ ಅಲಂಕಾರಗೊAಡಿದೆ. ಮೆರವಣಿಗೆಯು ಅಷ್ಟೇ ವೈಭವ ವಿಜೃಂಭಣೆಯಿAದ ವಿಸರ್ಜನೆ ಆಚರಿಸೋಣ ಅದಕ್ಕೆ ಎಲ್ಲರೂ ಸಮಯ ಪಾಲನೆ ಕಡ್ಡಾಯ ಇದ್ದು ಎಲ್ಲರೂ ಸಮಯ ಪಾಲನೆ ಮಾಡಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಈ ಸಭೆಯಲ್ಲಿ ಗಣೇಶ ಮಹಾ ಮಂಡಳಿಯ ಉಪಾಧ್ಯಕ್ಷರಾದ ಈಶ್ವರ ಸಿಂಗ್ ಠಾಕೂರ, ಸ್ವಾಗತ ಸಮಿತಿಯ ಅಧ್ಯಕ್ಷರಾದ ನಂದಕಿಶೋರ್ ವರ್ಮಾ, ಮೆರವಣಿಗೆ ಸಮಿತಿಯ ಗೌರವಧ್ಯಕ್ಷರಾದ ಸೂರ್ಯಕಾಂತ ಶೆಟಕಾರ, ಅಧ್ಯಕ್ಷರಾದ ಸೋಮಶೇಖರ ಪಾಟೀಲ ಗಾದಗಿ, ಪದಾಧಿಕಾರಿಗಳಾದ ದೀಪಕ ವಾಲಿ, ರಜನೀಶ ವಾಲಿ, ಶೆಶಿ ಹೊಸಳ್ಳಿ, ಮಹೇಶ ಪಾಲಂ, ಹಣಮಂತ ಬುಳ್ಳಾ, ಚಂದ್ರಶೇಖರ ಗಾದಾ, ದೇವೇಂದ್ರ ಎಮ್ಮೆಕರ್, ಗಣೇಶ ಭೋಸ್ಲೆ, ಚಂದ್ರಶೇಖರ ಗಾದಾ, ಸುನೀಲ ದಳವೆ, ಗೊರಕ್ ನಾಥ್ ಗೌಳಿ, ಪ್ರಕಾಶ ನಂದಗೌಳಿ ಸೇರಿದಂತೆ ಸಾರ್ವಜನಿಕ ಗಣೇಶ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
