ಭಕ್ತಿ ಭಾವೈಕ್ಯತೆ ಶಾಂತಿ ಸೌಹಾರ್ದತೆಯಿಂದ ಗಣೇಶ ಹಬ್ಬ ಆಚರಿಸಿ : ಶಾಸಕ ಲಕ್ಷ್ಮಣ ಸವದಿ
ಅಥಣಿ : ಸೆ.೯:ಪಟ್ಟಣದ ಬಸವ ನಗರ. ವಿಕ್ರಂಪೂರ ಬಡಾವಣೆಯಲ್ಲಿ ಅಥಣಿ ಕಾ ರಾಜಾ ಗಣೇಶ ಮಹಾಮಂಡಳದ ವತಿಯಿಂದ ಪ್ರತಿಷ್ಠಾಪನೆ ಮಾಡಿರುವ ಗಣೇಶ ವಿಗ್ರಹಕ್ಕೆ ವಿಶೇಷ ಪೂಜೆ ಹಾಗೂ ಆರತಿ ಸಲ್ಲಿಸಿದ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರು ಕ್ಷೇತ್ರದ ಜನತೆಗೆ ಶುಭಾಶಯ ಕೋರಿದರು ಪ್ರಥಮ ಪೂಜಿತ ಗಣೇಶನ ಕೃಪೆಯಿಂದ ರಾಜ್ಯದಲ್ಲಿ ಶಾಂತಿ. ಸಹನೆ. ದಯೆ. ಕರುಣೆ ಮತ್ತು ಸಹೋದರತ್ವದ ಮನೋಭಾವವು ಯಾವಾಗಲೂ ಮೇಲುಗೈ ಸಾಧಿಸಲಿ ಎಂದು ಬೇಡಿಕೊಂಡು ಭಕ್ತಿ ಪೂರ್ವಕವಾಗಿ ಪೂಜೆ ಸಲ್ಲಿಸಿದರು.
ಈ ವೇಳೆ ಶಾಸಕ ಲಕ್ಷ್ಮಣ ಸವದಿ ಅಥಣಿ ಕಾ ರಾಜಾ ಸಂಘಟನೆಯ ಮೂಲಕ ಯುವಕರು ಸಂಘಟಿತರಾಗಿ ಪ್ರತಿ ವರ್ಷ ವೈವಿಧ್ಯಮಯ ಗಣಪತಿ ಪ್ರತಿಷ್ಠಾಪನೆಗೆ ಹೆಸರುವಾಸಿಯಾಗಿದ್ದು. ಭಕ್ತಿ ಭಾವೈಕ್ಯತೆ ಸೌಹಾರ್ದತೆಯಿಂದ ಗಣೇಶ ಹಬ್ಬ ಆಚರಿಸಬೇಕು.
ಗಣೇಶ ಉತ್ಸವವು ವಿವಿಧತೆಯಲ್ಲಿ ಏಕತೆ ರೀತಿಯಲ್ಲಿ ಆಚರಿಸುತ್ತಿರುವುದು ಸಂತಸದ ಸಂಗತಿ ಯಾಗಿದೆ. ಪ್ರತಿ ವರ್ಷವೂ ಇದೇ ರೀತಿ ಯುವಕರು ಗಣೇಶ ಉತ್ಸವ ಆಚರಿಸಲಿ ಇದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ. ಸ್ವಾತಂತ್ರ‍್ಯ ಪೂರ್ವದಲ್ಲಿ ಬಾಲ ಗಂಗಾಧರ ತಿಲಕ ಅವರು ಭಕ್ತಿ ಹಾಗೂ ಭಾವೈಕ್ಯತೆಗಾಗಿ ಜಾತಿ-ಮತ ಪಂಥದ ಬೇಧವಿಲ್ಲದೆ ಸ್ವಾತಂತ್ರ‍್ಯ ಹೋರಾಟದ ಏಕತೆಗಾಗಿ ಅಂದು ಗಣೇಶ ಉತ್ಸವವನ್ನ ಆರಂಭಿಸಿದ್ದರು ಎಂದರು.
ಈ ಸಂದರ್ಭದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರ ಸುಪುತ್ರ ಚಿದಾನಂದ ಸವದಿ ಗಣೇಶ ವಿಗ್ರಹ ತರಲು ಸ್ವತಃ ಟ್ರ‍್ಯಾಕ್ಟರ್ ಚಾಲನೆ ಮಾಡುವ ಮೂಲಕ ಯುವಕರಲ್ಲಿ ಉತ್ಸಾಹ ತುಂಬಿದರು.
ಈ ವೇಳೆ ಅಥಣಿ ಕಾ ರಾಜಾ ಗಣೇಶ ಮಹಾ ಮಂಡಳದ ಎಲ್ಲ ಸದಸ್ಯರು ಬಸವ ನಗರ. ವಿಕ್ರಂ ಪೂರ ಹಾಗೂ ಶಾಂತಿನಗರ ಬಡಾವಣೆಯ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.