ಜೀವನದಲ್ಲಿ ಒಳ್ಳೆ ಕಾರ್ಯ ಮಾಡುವುದು ಬಹಳ ಅವಶ್ಯ
ಕಲಬುರಗಿ,ಸೆ.8-“ಮನುಷ್ಯನಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಒಳ್ಳೆಯ ಕೆಲಸ ಮಾಡೋದು ಬಹಳ ಅವಶ್ಯವಾಗಿದೆ. ಅದರ ಜೊತೆಯಲ್ಲಿ ಸತ್ಸಂಗ ಕಾರ್ಯವನ್ನು ಮಾಡುತ್ತಾ ಹೋದರೆ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದು ಕಡಗಂಚಿಯ ವೀರಭದ್ರ ಶಿವಾಚಾರ್ಯರು ಹೇಳಿದರು.
ನಗರದ ಗಂಜ್ ಬ್ಯಾಂಕ್ ಕಾಲೋನಿಯ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಸಿದ್ಧಾಂತ ಶಿಖಾಮಣಿ ಜ್ಞಾನಜ್ಯೋತಿ ಕಾರ್ಯಕ್ರಮ ಮಂಗಲ ಸಮಾರೋಪ ಕಾರ್ಯಕ್ರಮದÀ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಪುಣ್ಯ ಕಾರ್ಯಗಳನ್ನು ಮಾಡಬೇಕು ಆದ್ದರಿಂದ ಮನುಷ್ಯ ಒಳ್ಳೆಯ ಮಾರ್ಗ ಹಿಡಿಯಲು ಸಾಧ್ಯವೆಂದು ಹೇಳಿದರು. ಶರಣಬಸವೇಶ್ವರ ಸಂಸ್ಥಾನದ ಡಾ.ಲಿಂಗರಾಜ ಅಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಸಿದ್ದಾಂತ ಶಿಖಾಮಣಿ ಜ್ಞಾನಜ್ಯೋತಿ ಪ್ರವಚನ ಸಂಸ್ಥೆಗೆ ಕಡಗಂಚಿ ಪೂಜ್ಯರ ಸಂಪೂರ್ಣ ಸಹಾಯ ಸಹಕಾರ ಇರುವುದರಿಂದ ಸುಧೀರ್ಘವಾಗಿ ಸುಮಾರು 18 ವರ್ಷ ನಡೆದು ಬಂದದ್ದು ನನಗೆ ಬಹಳ ಸಂತೋಷದ ವಿಷಯ ಈ ಸಂಸ್ಥೆಗೆ ನನ್ನ ಕಡೆಯಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯ ಸಹಕಾರ ಮಾಡಲು ಸಿದ್ಧ ಎಂದು ಹೇಳಿದರು. ಈ ಸಂಸ್ಥೆ ಉತ್ತಮ ಮಟ್ಟದಲ್ಲಿ ಬೆಳೆಯಲೆಂದು ಅವರು ಹಾರೈಸಿದರು . ಕಾರ್ಯಕ್ರಮದ ಅಂಗವಾಗಿ ಡಾ.ಲಿಂಗರಾಜ ಅಪ್ಪ ಅವರನ್ನು ಸನ್ಮಾನಿಸಲಾಯಿತು
ಸಿದ್ದಾನಂದ ಶಿವಯೋಗಿಗಳಿಂದ ಉಪನ್ಯಾಸ ಕಾರ್ಯಕ್ರಮ ಜರುಗಿತು. ಜೈ ಗುರುದೇವ ಶಿವಪುತ್ರಪ್ಪ ಡಿಗ್ಗಿ, ಶಿವರಾಯ ಮುಲಗೆ, ಶಿವಾನಂದ ಕಶೆಟ್ಟಿ, ಶಿವಾನಂದ ಮಾನಕರ, ವರದಾ ಶಂಕರ್ ಶೆಟ್ಟಿ, ಸಿದ್ದಮ್ಮ ಅಕ್ಕನವರು,ವಿಶ್ವನಾಥ ವಾಗಣಗೇರಿ, ಶಿವಾನಂದ ಮಠಪತಿ, ಬಸಯ್ಯ ಸ್ವಾಮಿ ಕೊಡದೂರ, ಜಗದೇವಪ್ಪ ಕಲ್ಬುರ್ಗಿ, ಮಾದೇವಪ್ಪ ಅಲಗೂಡಕರ್, ಚನ್ನಮಲ್ಲಯ್ಯ ಸ್ವಾಮಿ, ಕೇದಾರನಾಥ ಮಲ್ಕಪ್ಪಗೋಳ, ಅಂಬಾರಾಯ ಕೋಣೆ, ದತ್ತು ಜಾನಕರ್, ಮಹಾಲಿಂಗಯ್ಯ ಸ್ವಾಮಿ ಉಪಸ್ಥಿತರಿದ್ದರು. ರವಿಶಾಸ್ತ್ರಿ ಅವರಿಂದ ವೇದಘೋಷ, ಜಗದೀಶ್ ಪಸಾರ್, ಮಲ್ಲಿಕಾರ್ಜುನ ಮುಖರಂಬಿ ಅವರಿಂದ ಸಂಗೀತ ಸೇವೆ, ಶಿವರುದ್ರಯ್ಯ ಸ್ವಾಮಿ ಚಂದನಕೇರಾ ಕಾರ್ಯಕ್ರಮವನ್ನು ನಿರೂಪಿಸಿದರು ಈ ಸಮಾರೋಪ ಕಾರ್ಯಕ್ರಮದಲ್ಲಿ ಸಿದ್ದಾಂತ ಶಿಖಾಮಣಿ ಪ್ರವಚನ ವೇದಿಕೆ ಕೇಂದ್ರ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಪದಾಧಿಕಾರಿಗಳು ಹಾಗೂ ಬಸವೇಶ್ವರ ದೇವಸ್ಥಾನದ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಪದಾಧಿಕಾರಿಗಳು ಸಮಸ್ತ ಗಂಜ್ ಬ್ಯಾಂಕ್ ಕಾಲೋನಿಯ ಸದ್ಭಕ್ತರು ಉಪಸ್ಥಿತರಿದ್ದರು.