ಶಿವಲಿಂಗೇಶ್ವರರ ಪಲ್ಲಕ್ಕಿ ಮಹೋತ್ಸವ
ಕಲಬುರಗಿ,ಸೆ.8-ತಾಲ್ಲೂಕಿನ ಕೊಳ್ಳುರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಜಗದ್ಗುರು ಶಿವಲಿಂಗೇಶ್ವರರ ಪಲ್ಲಕ್ಕಿ ಮಹೋತ್ಸವ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಡೊಳ್ಳು, ಭಜನೆ, ಪುರತಂತರು ಹಾಗೂ ನಾಡಿನ ಎಲ್ಲಾ ಹರಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ಹಾಗು ರಾಜಕಾರಣಿಗಳ ಸುಮ್ಮುಖದಲ್ಲಿ ಜರುಗಲಿದೆ.
ಶಿವಲಿಂಗೇಶ್ವರರ ಪಲ್ಲಕ್ಕಿ ಮಹೋತ್ಸವ ಹಾಗು ಧರ್ಮ ಸಭೆ ನಡೆಯುತ್ತಿದ್ದು, ಗ್ರಾಮಸ್ಥರು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಸಿ ಮಹಾ ಪ್ರಸಾದ ಸ್ವಿಕರಸಿ ಶಿವಲಿಂಗೇಶ್ವರರ ದರ್ಶನ ಪಡೆದು ಪುನೀತರಾಗಬೇಕೆಂದು ಮೃತ್ಯುಂಜಯ ಸ್ವಾಮಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.