ಕಲ್ಯಾಣದ ರಚನಾತ್ಮಕ ಪ್ರಗತಿ: ಸಮಾಲೋಚನಾ ಸಭೆ
ಕಲಬುರಗಿ,ಸೆ 8: ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿ ಮತ್ತು 371ನೇ(ಜೆ) ಕಲಂಪರಿಣಾಮಕಾರಿ ಅನುಷ್ಠಾನ ಸೇರಿದಂತೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಪರ ಸುಮಾರು 16 ಅಂಶಗಳ ವಿಷಯಗಳ ಕುರಿತು ಮುಖ್ಯಮಂತ್ರ್ರಿಗಳ ರಾಜಕೀಯ ಸಲಹೆಗಾರರಾದ ಬಿ.ಆರ್ ಪಾಟೀಲ ಅವರೊಂದಿಗೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ಕಲ್ಯಾಣದ ಪರಿಣಿತ ತಜ್ಞರ, ಚಿಂತಕರ ಹಾಗೂ ಪ್ರಮುಖರ ಸಮಲೋಚನಾ ಸಭೆ ಐವಾನ್-ಇ-ಶಾಹಿ ಅತಿಥಿ ಗೃಹದಲ್ಲಿ ನಡೆಯಿತು. ಸಭೆಯಲ್ಲಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಅವರು ಕಲಬುರಗಿಯಲ್ಲಿ ಒಂದು ದಶಕದ ನಂತರ ಸರಕಾರ 371ನೇ(ಜೆ) ಕಲಂ ದಶಮಾನೋತ್ಸವದ ಸಂದರ್ಭದಲ್ಲಿ ಸಂಪುಟ ಸಭೆ ನಡೆಸುತ್ತಿರುವುದಕ್ಕೆ ಸ್ವಾಗತಿಸಿ ಕಲ್ಯಾಣ ಕರ್ನಾಟಕದ 371ನೇ(ಜೆ) ಕಲಂಪರಿಣಾಮಕಾರಿ ಅನುಷ್ಠಾನ ಸೇರಿದಂತೆ, ಕಲ್ಯಾಣದ ನೀರಾವರಿ, ಕೈಗಾರಿಕೆ, ರಸ್ತೆ, ಸಾರಿಗೆ, ಶಿಕ್ಷಣರೈಲ್ವೆ, ಪ್ರವಾಸೋಧ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಂಡಿಸಿದರು. ಅದಕ್ಕೆ ಪೂರಕವಾಗಿ ಪೆÇ್ರ.ಆರ್.ಕೆ. ಹುಡಗಿ, ಪೆÇ್ರ. ಬಸವರಾಜಕುಮನೂರ, ಡಾ. ಸುರೇಶಕುಮಾರ, ರೌಫ್ ಖಾದ್ರಿ, ಪೆÇ್ರ.ಗುರುಬಸಪ್ಪ, ಡಾ. ಮಾಜಿದ್ ದಾಗಿ, ಪೆÇ್ರ. ಮಂಜೂರ ಡೆಕ್ಕನಿ
ವಿಷಯಗಳ ಬಗ್ಗೆ ವಿಶ್ಲೇಷಣೆ ಮಾಡಿ ಮನವರಿಕೆ ಮಾಡಿದರು. ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಬಗ್ಗೆ ಅಲಿಸಿದ ಶಾಸಕ ಬಿ.ಆರ್.
ಪಾಟೀಲ ಅವರು ಕಲಬುರಗಿಯಲ್ಲಿ ನಡೆಯುವ ಕ್ಯಾಬಿನೆಟ್
ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲು ತಾವು ಗಂಭೀರವಾಗಿ ಪರಿಗಣಿಸುವುದಾಗಿವಿವರಿಸುತ್ತಾ ಭರವಸೆ ನೀಡಿದರು. ಅದರಂತೆ ಕಲ್ಯಾಣದ ರಚನಾತ್ಮಕ ಪ್ರಗತಿಗೆ ಸೈದ್ಧಾಂತಿಕ ತಳಹದಿಯಮೇಲೆ ಹೋರಾಟಗಳು, ಚಿಂತನೆಗಳು, ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ನಿರಂತರವಾಗಿ
ನಡೆಯಬೇಕೆಂದು ಈ ಸಭೆಯ ಮುಖಾಂತರ ಏಳು ಜಿಲ್ಲೆಯ ಅಭಿವೃದ್ಧಿಪರ ಬುದ್ಧಿ ಜೀವಿಗಳಿಗೆ,ಪ್ರಗತಿಪರರಿಗೆ, ವಿಶೇಷ ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಗೌರವ ಅಧ್ಯಕ್ಷ ಬಸವರಾಜ ದೇಶಮುಖ ವಹಿಸಿದ್ದರು
ಸಭೆಯಲ್ಲಿ ಅಶೋಕ ಗುರೂಜಿ, ಕೈಲಾಸನಾಥ ದೀಕ್ಷಿತ, ಅಖ್ತರ ಇನಾಮದಾರ,
ಅಭಿಷೇಕ ಪಾಟೀಲ, ಆನಂದ ದೇಶಪಾಂಡೆ, ಭೀಮಶೆಟ್ಟಿ ಮುಕ್ಕಾ, ಅಸ್ಲಂ ಚೌಂಗೆ, ಶ್ರೀಧರ ಪಾಟೀಲ,ಮಹೇಶ ಬಿರಾದಾರ, ಶಿವಾನಂದ ಪಾಟೀಲ, ರವೀಂದ್ರ ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.