ಜೂಜಾಟ: 8 ಜನರ ಬಂಧನ
ಕಲಬುರಗಿ,ಅ.3-ನಗರದ ಕುಸನೂರ ರಸ್ತೆಯ ವಿಶ್ವವಿದ್ಯಾಲಯ ಹಿಂದಿನ ಗೇಟ್ ಹತ್ತಿರ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಎ.ಎಸ್.ಐ.ಸುಭಾಶ್ಚಂದ್ರ, ಸಿಬ್ಬಂದಿಗಳಾದ ಜೈಭೀಮ, ವಿಶಾಲಸಿಂಗ್ ಠಾಕೂರ, ಭೋಗೇಶ್ ಅವರು ದಾಳಿ ನಡೆಸಿ 8 ಜನರನ್ನು ಬಂಧಿಸಿದ್ದಾರೆ.
ಕಿರಣಕುಮಾರ ಬುಳ್ಳಾ, ಅರುಣಕುಮಾರ ಮಡಿವಾಳ, ಕಲ್ಯಾಣಿ ಗೌಡಗಾಂವ, ಚಂದ್ರಕಾಂತ ಭಜಂತ್ರಿ, ಅರುಣಕುಮಾರ ಭಾಗಲಮನಿ, ಕೃಷ್ಣ ಮತ್ತಿಮೂಡ, ವಿನೋದ ಬೋರುಟಿ ಅವರನ್ನು ಬಂಧಿಸಿ 8250 ರೂ.ನಗದು ಮತ್ತು ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.