ಬಾಕಿಯಿರುವ ನೀರಿನ ಕರವನ್ನು ಪಾವತಿಸಲು ಗ್ರಾಹಕರಿಗೆ ಸೂಚನೆ
ಕಲಬುರಗಿ:ಅ.3:ಕಲಬುರಗಿ ಮಹಾನಗರದಲ್ಲಿ ಬಾಕಿ ಉಳಿಸಿಕೊಂಡಿರುವ ಗೃಹ, ಗೃಹೇತರ ಹಾಗೂ ವಾಣಿಜ್ಯ ನಳದ ಸಂಪರ್ಕದಾರರು ನೀರಿನ ಕರವನ್ನು ಕೊಡಲೇ ಪಾವತಿಸಬೇಕೆಂದು ಕಲಬುರಗಿ ಕೆಯುಡಬ್ಲ್ಯೂಎಸ್‍ಎಂಪಿ- ಕೆಯುಐಡಿಎಫ್‍ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಗ್ರಾಹಕರು ಬಾಳಿ ಉಳಿಸಿಕೊಂಡಿರುವ ನೀರಿನ ಕರವನ್ನು ಕರ್ನಾಟಕ ಒನ್, ಮಹಾನಗರ ಪಾಲಿಕೆಯ ಆನ್‍ಲೈನ್‍ನಲ್ಲಿ ನೀರಿನ ಬಿಲ್ ವಿತರಕರ ಹತ್ತಿರ ಇರುವ ಕ್ಯೂಆರ್ ಕೋಡ್ ಮೂಲಕ ಹಾಗೂ ಕಲಬುರಗಿಯಲ್ಲಿ ಮೆ|| ಎಲ್ ಆಂಡ್ ಟಿ ಕಂಪನಿಯವರು ಸ್ಥಾಪಿಸಿರುವ ಕ್ಯಾಶ್ ಕೌಂಟರ್‍ಗಳಲ್ಲಿ ನೀರಿನ ಕರ ತುಂಬಿ ರಸೀದಿ ಪಡೆಯಬೇಕು. ಇದಲ್ಲದೇ ತಮ್ಮ ಹತ್ತಿರದ ಪ್ರದೇಶದಲ್ಲಿ ನೀರಿನ ಕರ ವಸೂಲಿ ಶಿಬಿರ (ಕ್ಯಾಂಪ್) ಆಯೋಜಿಸಲಾಗುತ್ತಿದ್ದು, ಅಲ್ಲಿಯೂ ಸಹ ತಮ್ಮ ನೀರಿನ ಬಾಕಿ ಕರವನ್ನು ಪಾವತಿಸಬಹುದಾಗಿದೆ.
ಒಂದು ವೇಳೆ ಗ್ರಾಹಕರು ನೀರಿನ ಕರ ಪಾವತಿಸದೇ ಇದ್ದಲ್ಲಿ ಹಾಗೂ ಅನಧೀಕೃತ ನಳದ ಸಂಪರ್ಕ ಹೊಂದಿರುವ ಗ್ರಾಹಕರು ಅಧೀಕೃತಗೊಳಿಸದಿದ್ದಲ್ಲಿ ಅಂತಹ ಗ್ರಾಹಕರಿಗೆ ಯಾವುದೇ ಮುನ್ಸೂಚನೆ ನೀಡದೆ ತಂಡಗಳನ್ನು ರಚಿಸಿ, ನಳದ ಸಂಪರ್ಕಗಳನ್ನು ಕಡಿತಗೊಳಿಸಲು ಕಾರ್ಯ ಪ್ರವೃತರಾಗಬೇಕೆಂದು ಕಲಬುರಗಿ ಮಹಾನಗರಪಾಲಿಕೆ ಆಯುಕ್ತರು ಯೋಜನಾ ಅನುಷ್ಠಾನ ಘಟಕದ ಅಧೀಕ್ಷಕ ಅಭಿಯಂತರರಿಗೆ ಸೂಚಿಸಿದ್ದಾರೆ.
ಸಾರ್ವಜನಿಕರ ಅನುಕೂಲಕ್ಕಾಗಿ ಕೇಂದ್ರೀಕೃತ ಗ್ರಾಹಕರ ಸೇವಾ ಕೇಂದ್ರವನ್ನು ಸುಪರ್ ಮಾರ್ಕೆಟ್‍ನಿಂದ ಮನೆ ಸಂಖ್ಯೆ 1024/4ಎ ಅತ್ತರ ಕಂಪೌಂಡ ಸಿದ್ದೇಶ್ವರ ನಗರ ಕಲಬುರಗಿ-585101 ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನೀರು ಸರಬರಾಜು ಸಹಾಯವಾಣಿ ಸಂಖ್ಯೆ +91 1800 425 8247 (ccc) ಗೆ ಸಂಪರ್ಕಿಸಲು ಕೋರಲಾಗಿದೆ.