ನೊಂದ ಕುಟುಂಬಕ್ಕೆ ಟೋಕರೆ ಕೋಳಿ, ಕೋಲಿ-ಕಬ್ಬಲಿಗ ಎಸ್.ಟಿ. ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ್ ಭೇಟಿ ಸಾಂತ್ವನ
ಬೀದರ್ ಸೆ. 08ಃ ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಗ್ರಾಮದಲ್ಲಿ ಇತ್ತಿಚೆಗೆ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಟೋಕರೆ ಕೋಳಿ ಸಮುದಾಯದ ಯುವತಿ ಕು. ಭಾಗ್ಯಶ್ರೀ ಕುಟುಂಬಸ್ಥರನ್ನು ರಾಜ್ಯ ಟೋಕರೆ ಕೋಳಿ, ಕೋಲಿ-ಕಬ್ಬಲಿಗ ಎಸ್.ಟಿ. ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಎಸ್. ಜಮಾದಾರ್ ಹಾಗೂ ಅಂಬಿಗರ ಚೌಡಯ್ಯ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ ಭೇಟಿಯಾಗಿ ಸಾಂತ್ವನ ಹೇಳಿ, ವೈಯಕ್ತಿಕವಾಗಿ ಧನ ಸಹಾಯ ನೀಡಿ ಮಾನವೀಯತೆ ಮೇರೆದರು.
ಈ ಸಂದರ್ಭದಲ್ಲಿ ರಾಜ್ಯ ಟೋಕರೆ ಕೋಳಿ, ಕೋಲಿ-ಕಬ್ಬಲಿಗ ಎಸ್.ಟಿ. ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಎಸ್. ಜಮಾದಾರ್ ಮಾತನಾಡಿ, ಅತ್ಯಾಚಾರ ನಡೆಸಿ ಕೊಲೆಗೈದ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು, ನಿಮ್ಮೋಂದಿಗೆ ಎಲ್ಲಾ ಸಮಾಜದ ಮುಖಂಡರುಗಳು ಇದ್ದೇವೆ ನೀವು ಹೇದರುವ ಅವಶ್ಯಕತೆ ಇಲ್ಲ ಎಂದು ದೈರ್ಯ ತುಂಬಿದರು. ಇದೆ ಸೆಪ್ಟೆಂಬರ್ 17 ರಂದು ಕಲಬುರಗಿಗೆ ಆಗಮಿಸುತ್ತಿರುವ ರಾಜ್ಯದ ಮುಖ್ಯಮಂತ್ರಿಗಳಾದ ಎಸ್. ಸಿದ್ಧರಾಮಯ್ಯನವರು ಮೃತಳ ಕುಟುಂಬಕ್ಕೆ ಭೇಟಿಯಾಗಿ ಸಾಂತ್ವನ ಹೇಳಿ, 1 ಕೋಟಿ ರೂ. ಪರಿಹಾರ ಧನ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಸುನೀಲ ಭಾವಿಕಟ್ಟಿ, ನಾಗಭೂಷಣ ಸಂಗಮ್, ಅಶೋಕ ಹಣಕುಣಿ, ದಯಾನಂದ ಮೇತ್ರಿ, ಅವಿನಾಶ ಪೋಲದಾಸ್, ಹಣಮಂತ ಸಂಕನೂರ್, ಚಂದ್ರಕಾಂತ ಹಳ್ಳಿಖೇಡಕರ್, ಅಮೃತ್ ಜಮಾದಾರ್, ಜಗದೀಶ ಮಾನಕೇರಿ, ಅರವಿಂದ ಜಮಾದಾರ್, ಸಂತೋಷ ನಾಟಿಕಾರ್, ಸಿದ್ದಲಿಂಗ್ ಮಳಕೇರಾ, ನರಸಪ್ಪಾ ನರನಾಳ್, ರಾಮಲಿಂಗ್ ನಾಟೀಕರ್, ಅಂಬಾರಾಯ್ ಜವಳಗಾ, ರಮೇಶ ಜಮಾದಾರ್, ಶಿವೂ ದಣಿ, ಪಿಂಟು ಜಮಾದಾರ್, ಮಲ್ಲಿಕಾರ್ಜುನ್ ಗುಡಬಾ, ಶಿವಕುಮಾರ ಭಾವಿಕಟ್ಟಿ, ಸೇರಿದಂತೆ ಇತರರು ಇದ್ದರು.