ಹಿರಿಯ ನಾಗರಿಕರನ್ನು ಗೌರವದಿಂದ ನೋಡಿಕೊಳ್ಳಬೇಕು:ಹನುಮಂತಪ್ಪಾ ಹಂಸಕವಿ
ಬೀದರ, ಸೆ.08: ಹಿರಿಯ ನಾಗರಿಕರಿಗೆ ಗೌರವದಿಂದ ನೋಡಿಕೊಳ್ಳಬೇಕು, ಎಲ್ಲಾ ಹಿರಿಯ ನಾಗರಿಕರು ವಿವಿಧ ಕ್ರೀಡೆ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಮುಖ್ಯ ವಾಹಿನಿಗೆ ತರಬೇಕೆಂದು ಬೀದರ ಪೆÇಲೀಸ್ ಇಲಾಖೆ ಹನುಮಂತಪ್ಪಾ ಹಂಸಕವಿ ತಿಳಿಸಿದರು.
ಅವರು ನಗರದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಜಿಲ್ಲಾ ಪೆÇೀಲಿಸ್ ಕವಾಯತ ಮೈದಾನ (ಕ್ರಿಡಾಂಗಣ) ಬೀದರ ಇಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ವರ್ಧೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ದಿನಾಂಕ: 01-10-2024ರಂದು ನಡೆಯುವ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬಹುಮಾನ ಹಾಗೂ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೀದರ ಡಾ|| ಬಿ.ಆರ್.ಅಂಬೇಡ್ಕರ ಕಲ್ಚರಲ್ ಐಂಡ್ ವೇಲ್‍ಪೆರ್ ಸೋಸೈಟಿ ಮುಖ್ಯಸ್ಥ ನವಿನ, ಔರಾದ(ಬಿ) ರಮಾಬಾಯಿ ಅಂಬೇಡ್ಕರ ವೃದ್ಧಾಶ್ರಮ ಮುಖ್ಯಸ್ಥ ಪಾರಮ್ಮ ವಾಗಮರೆ, ಬೀದರ ಮದರ ಥೇರೆಸಾ ವೃದ್ಧಾಶ್ರಮ ಮಂಗಲಪೇಟ್ ಮುಖ್ಯಸ್ಥ ರವಿ ಜೋಸೆಫ್, ಮುಖ್ಯಸ್ಥರು, ಬೀದರ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದ ಮುಖ್ಯಸ್ಥ ಸಂತೋಷ ಭಾಲ್ಕೆ, ಜೈಪಾಲ ಮುಖ್ಯಸ್ಥರು, ವಿಶ್ವಶಾಂತಿ ಫೌಂಡೆಶನ್ ಸೋಸೈಟಿ, ಭಾಲ್ಕಿ ವೀರಭದ್ರಪ್ಪಾ ಉಪ್ಪಿನ, ಎಸ್.ಬಿ. ಕುಚಬಾಳ, ಮಹಾದೇವ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳು ಬೀದರ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಛೇರಿಯ ಸಿಬ್ಬಂದಿಗಳಾದ ರಾಘವೇಂದ್ರ ನಾಯ್ಕ, ಯೋಜನಾ ಸಹಾಯಕರು, ಡ್ಯಾನಿಯಲ್ ಗುರುದಾಸ, ಸುಭಾಷ ಕಡ್ಡೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಬೀದರ ಸಿಬ್ಬಂದಿಗಳಾದ ಮಲಾಕಿ ಮೈಕಲ್ ಸಂಯೋಜರು, ಬಾಲಾಜಿ ಸಂಯೋಜಕರು, ರೇಣುಕಾ, ರೈಚಲ್ ರಾಣಿ, ಸುಭಾಷ ರೆಡ್ಡಿ, ಹಾಗೂ ಜಿಲ್ಲೆಯ ಹಿರಿಯ ನಾಗರಿಕರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ರೇಣುಕಾ ಮಾಡಿದರು.