ಸೆ. 10ರಿಂದ ಬೀದರ್‍ನ ಖಾಜಾ ಅಬುಲ್‍ಫೈಜ್ ದರ್ಗಾ ಉರ್ಸ್
ಬೀದರ್ ಸೆ. 8:ಬೀದರ್‍ನ ಐತಿಹಾಸಿಕ ಹಜರತ್ ಖಾಜಾ ಅಬುಲ್ ಫೈಜ್ ದರ್ಗಾದ 567ನೇ ಉರ್ಸ್ ಸಮಾರಂಭವು ಸೆಪ್ಟೆಂಬರ್ 10 ರಿಂದ ಮೂರು ದಿನಗಳ ವರೆಗೆ ವಿಜ್ರಂಭಣೆಯಿಂದ ನಡೆಯಲಿದೆ ಎಂದು ದರ್ಗಾದ ಸಜ್ಜಾದೆ ಸೈಯದ್ ಅಸದುಲ್ಲಾ ಹುಸೇನಿ (ಸಾಖೇಬ್ ಹುಸೇನಿ) ತಿಳಿಸಿದ್ದಾರೆ.
ಸೆಪ್ಟೆಂಬರ್ 10ರಂದು ಸಂಜೆ 4 ಕ್ಕೆ ಬೀದರ್‍ನ ಹಳೆ ಭಾಗದ ನೂರ್‍ಖಾನ್ ತಾಲೀಮ್‍ನಲ್ಲಿರುವ ಖಾನಖ್ವಾಹ್‍ದಲ್ಲಿ ಖವ್ವಾಲಿ, ಸಂಜೆ 5 ಕ್ಕೆ ಖಾನಖ್ವಾಹ್‍ದಿಂದ ದರ್ಗಾ ವರೆಗೆ ಸಂದಲ್ ಮೆರವಣಿಗೆ ನಡೆಯಲಿದೆ. ಸಂದಲ್ (ಗಂಧ) ಲೇಪನ್‍ದ ನಂತರ ಸಾಮೂಹಿಕ ಪ್ರಾರ್ಥನೆ ಜರುಗಲಿದೆ.
ಅಂದು ರಾತ್ರಿ 9.30 ಗಂಟೆಗೆ ದರ್ಗಾದಲ್ಲಿ ನಡೆಯುವ ಸಮಾರಂಭದಲ್ಲಿ 6ನೇ ಖಾಜಾ ಅಬುಲ್ ಫೈಜ್ ಅವಾರ್ಡನ್ನು ಬೀದರ್ನಲ್ಲಿ ಅನಾಥ ಶವಗಳ ಸಂಸ್ಕಾರ ಮಾಡುತ್ತಿರುವ ಹುಮಾನಿಟಿ ಫಸ್ಟ ಫೌಂಡೇಷನ್ ಅಧ್ಯಕ್ಷ ಎಂಡಿ ಮಾಜೀದ್ ಬಿಲಾಲ್ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ರಾತ್ರಿ 11 ಗಂಟೆಗೆ ಖವ್ವಾಲಿ ಜರುಗಲಿದೆ.
ಸೆ. 11ರಂದು ರಾತ್ರಿ 10 ಗಂಟೆಗೆ ದರ್ಗಾದಲ್ಲಿ ಖವ್ವಾಲಿ ಜರುಗಲಿದೆ. ಸೆಪ್ಟಂಬರ್ 12? ಬೆಳಿಗ್ಗೆ 6ಕ್ಕೆ ಖತ್ಮೆ ಕುರಾನ್, ಸಂಜೆ 4 ಗಂಟೆಗೆ ದರ್ಗಾದಿಂದ ಖಾನ್‍ಖ್ವಾಹ ವರೆಗೆ ಮೆರವಣಿಗೆ ನಡೆಸಿ ಸಮಾರೋಪಗೊಳ್ಳಲಿದೆ. ಇಲ್ಲಿ ಯಾವುದೇ ಜಾತಿ, ವರ್ಗಕ್ಕೆ ನಿರ್ಭಂಧವಿಲ್ಲ. ಹೀಗಾಗಿ ಜಿಲ್ಲೆಯ ಎಲ್ಲ ಪಕ್ಷದ ಜನಪ್ರತಿನಿಧಿಗಳಿಗೆ ಆಮಂತ್ರಿಸಲಾಗಿದೆ.
ಮೂರು ದಿನಗಳ ವರೆಗೆ ನಡೆಯಲಿರುವ ಉಸ್ರ್À ಸಮಾರಂಭದಲ್ಲಿ ರಾಜ್ಯ ಅಲ್ಲದೇ ಪಕ್ಕದ ತೆಲಂಗಾಣಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸಲಿದ್ದಾರೆ ಎಂದು ದರ್ಗಾದ ಹಿರಿಯರಾದ ಮತೀನೋದ್ದಿನ್ ಹುಸೇನಿ ತಿಳಿಸಿದ್ದಾರೆ.