ಪ್ರಾಂಜಲ ಮನಸ್ಸಿನಿಂದ ದೇವರು ಪ್ರಾರ್ಥಿಸಿ : ಡಾ. ಬಸವಲಿಂಗ ಅವಧೂತರ ಸಲಹೆ
ಬೀದರ್: ಸೆ.8:ಪ್ರಾಂಜಲ ಮನಸ್ಸಿನಿಂದ ಪ್ರಾರ್ಥಿಸಿದರೆ ದೇವರು ಒಲಿಯುತ್ತಾನೆ. ನಿತ್ಯ ಭಕ್ತಿಯಿಂದ ದೇವರ ಪೂಜೆ ಮಾಡಬೇಕು. ಆಧಾತ್ಮದ ಒಲವು ಬೆಳೆಸಿಕೊಳ್ಳಬೇಕು. ಮೂಢನಂಬಿಕೆ, ಮೂಢ ಆಚರಣೆಗಳಿಂದ ದೂರ ಇರಬೇಕು ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ, ದೇಗಲಮಡಿ ಹಾಗೂ ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ನುಡಿದರು.
ಬೀದರ ತಾಲ್ಲೂಕಿನ ಸಿರಕಟನಳ್ಳಿಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಮನುಷ್ಯ ಪರಸ್ಪರರ ಭಾವನೆಗಳನ್ನು ಅರ್ಥೈಸಿಕೊಳ್ಳಬೇಕು. ಬೇರೆಯವರ ಕಷ್ಟ-ಸುಖದಲ್ಲಿ ಭಾಗಿಯಾಗಬೇಕು. ಮನೆ ಚಿಕ್ಕದಿದ್ದರೂ ಮನಸ್ಸು ದೊಡ್ಡದಿರಬೇಕು ಎಂದು ಹೇಳಿದರು.
ಜೀವನದಲ್ಲಿ ಪ್ರತಿಯೊಬ್ಬರು ಇತರರಿಗೆ ಕೈಲಾದ ಸಹಾಯ ಮಾಡಬೇಕು ಅಲ್ಲದೇ ನಾವು ಚೆನ್ನಾಗಿದರೆ ಎಲ್ಲರೂ ನಮ್ಮ ಹತ್ತಿರ ಬರುತ್ತಾರೆ ನಾವು ಕೆಟ್ಟರೆ ಯಾರು ಕೂಡಾ ನಮ್ಮ ಹತ್ತಿರ ಬರುವುದಿಲ್ಲ ಎಂದು ಕಿವಿ ಮಾತು ಹೇಳಿದರು.
ಇನ್ನೋಬರ ಬಗ್ಗೆ ದೂರಾಲೋಚನೆ ಮಾಡಬೇಡಿ ಒಂದು ವೇಳೆ ಮಾಡಿದರೆ ನಿಮ್ಮಗೆ ಕೆಟ್ಟದಾಗುತ್ತದೆ. ಜಪ ತಪ ದೇವರ ಧ್ಯಾನ ಮಾಡಿ ಮನಸ್ಸಿಗೆ ಸಮಧಾನ ತಂದು ಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದ ಮೊದಲಿಗೆ ಅಕ್ಕಮಹಾದೇವಿ ಮೂರ್ತಿಗೆ ಬಸವಲಿಂಗ ಅವಧೂತರು ಪೂಜೆ ಸಲ್ಲಿಸಿದರು.
ನಂತರ ಮುಖ್ಯ ರಸ್ತೆಯಿಂದ ಗಣೇಶ ದೇವಸ್ಥಾನದ ವರೆಗೆ ಡಾ. ಬಸವಲಿಂಗ ಅವಧೂತರ ಭವ್ಯ ಮೆರವಣಿಗೆ ನಡೆಯಿತು. ಕಳಸ ಹೊತ್ತ ಮಹಿಳೆಯರು, ಡೊಳ್ಳು ಕುಣಿತ ಮೆರವಣಿಗೆಯ ಮೆರುಗು ಹೆಚ್ಚಿಸಿದರು.
ಪ್ರಮುಖರಾದ ಜಗನ್ನಾಥ ಪೊಲೀಸ್ ಪಾಟೀಲ್, ಆನಂದ ಬಿರಾದರ, ವೀರಶೆಟ್ಟಿ ಚಟ್ನಳ್ಳಿ, ಜಗನ್ನಾಥ ಪಾಟಿಲ್, ಶಿವರಾಜ ಮಾಲಿ ಪಾಟಿಲ್, ಸಂತೋಷ ಶೋಭಾಜೀ, ಚಂದ್ರಶೇಖರ ಬಿರಾದ ಇದ್ದರು.