ಸಂಭ್ರಮದ ಗಣೇಶ ಸ್ಥಾಪನೆ
ಭಾಲ್ಕಿ :ಸೆ.8: ಗಣೇಶ ಚತುರ್ಥಿ ನಿಮಿತ್ತ ಪಟ್ಟಣದ ವೆರಿಟಾಸ್ ಹಣಕಾಸು ಸಂಸ್ಥೆಯಲ್ಲಿ ಸಿಬ್ಬಂದಿಗಳು ಸಂಭ್ರಮದಿಂದ ಗಣೇಶ ಸ್ಥಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ಸಂಕಷ್ಟಹರ ಗಣೇಶನು ಬದುಕಲ್ಲಿ ಎದುರಾಗುವ ಸಕಲ ವಿಘ್ನಗಳನ್ನು ಎದುರಿಸುವ ಆತ್ಮಬಲವನ್ನು ನಮ್ಮೆಲ್ಲರಲ್ಲೂ ತುಂಬಲಿ ಎಂದು ಪ್ರಾರ್ಥಿಸಿದರು. ಎಲ್ಲೆಡೆ ಹಬ್ಬವನ್ನು ಸಡಗರ – ಸಂಭ್ರಮದಿಂದ ಆಚರಿಸುತ್ತಿದ್ದು, ವಿಘ್ನೇಶ್ವರ ಎಲ್ಲರ ಬಾಳಲ್ಲಿ ಸುಖ ಸಮೃದ್ಧಿ ಯಶಸ್ಸು ಪಾಲಿಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಶಾಖೆ ವ್ಯವಸ್ಥಾಪಕ ವಿಠ್ಠಲ ಚವ್ಹಾಣ, ಮಲ್ಲಿಕಾರ್ಜುನ, ಯಲ್ಲಾಲಿಂಗ, ವಿಜಯ್, ಗುರುನಾಥ, ಸಚಿನ, ಅಂಬಾದಾಸ ಸೇರಿದಂತೆ ಇನ್ನಿತರರಿದ್ದರು.