ಅತಿಥಿ ಉಪನ್ಯಾಸಕರಿಂದ ಉಪನಿರ್ದೇಶಕರಿಗೆ ಮನವಿ
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.08:  ಅತಿಥಿ ಉಪನ್ಯಾಸಕರ ಸಂಘಟನೆಯಿಂದ ಉಪನ್ಯಾಸಕರ ಸಮಸ್ಯೆಗಳುಳ್ಳ ಮನವಿ ಪತ್ರವನ್ನು ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಇವರಿಗೆ ಸಲ್ಲಿಸಲಾಯಿತು. ಉಪನಿರ್ದೇಶಕರು ಮನವಿಗೆ  ಸ್ಪಂದಿಸಿ ಫೆಬ್ರವರಿ ಮಾಹೆಯ ವೇತನವನ್ನು ತಕ್ಷಣ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.
ಬೇರೆ ಎಲ್ಲ ಸಮಸ್ಯೆಗಳ ಬಗ್ಗೆ ಉನ್ನತ ಅಧಿಕಾರಿಯೊಂದಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು. ಈ ನಿಯೋಗದಲ್ಲಿ ರಾಜ್ಯ ಜಂಟಿ ಕಾರ್ಯದರ್ಶಿಯಾದ ಎಸ್‌ಜಿ ನಾಗರತ್ನ ರವರು ಮತ್ತು ಧಾರವಾಡ ಜಿಲ್ಲೆಯ ಅತಿಥಿ ಉಪನ್ಯಾಸಕರುಗಳಾದ ನವೀನ್ ಕುಮಾರ್ ಸಂಪತ್ ಕುಮಾರ್ ಕಿಚಡಿ ಸಂಜಯ್ ಗೌಡ ತಲ್ಬಾಗಿಲ್, ಚಂದ್ರಪ್ಪ  ಕಾಮ ಢಾಡ್, ಶ್ವೇತಾ ನಾಯಕ್,ಅನಿಲ್ ಕಟ್ಟಿ, ರಾಜೇಶ್ ಶೇಖರ್   ಚಂದ್ರಪ್ಪ ಮತ್ತು ಹಲವಾರು ತಾಲೂಕುಗಳಿಂದ ಭಾಗವಹಿಸಿದ್ದರು.