ವಿನೂತನ ಇತಿಹಾಸ ರಚಿಸಿದ ಸಾಮೂಹಿಕ ಲಕ್ಷ ಬಿಲ್ವಾರ್ಚನೆ: ಡಾ. ರಾಜಶೇಖರ ಶಿವಾಚಾರ್ಯರು
ಬೀದರ:ಸೆ.8:ಶ್ರಾವಣ ಶಿವ ಸಂಚಾರ ಶ್ರೀ ಸಿದ್ಧಾಂತ ಶಿಖಾಮಣಿ ಯಶಸ್ವಿ ಅಭಿಯಾನ ನಿಮಿತ್ತವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ಲಕ್ಷ ಬಿಲ್ವಾರ್ಚನೆ ವಿನೂತನ ಭಕ್ತಿಭಾವದ ಕಾರ್ಯಕ್ರಮ ಭಕ್ತರ ಮನಗೆದ್ದು ಹೊಸ ಇತಿಹಾಸ ನಿರ್ಮಿಸಿದೆ ಎಂದು ಬೇಮಳಖೇಡ, ಗೋರಟಾ ಮತ್ತು ಬೀದರಿನ ಶ್ರೀ ಡಾ|| ರಾಜಶೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು. ಅವರು ತಾಲೂಕಿನ ಧನ್ನೂರು (ಹೆಚ್) ಗ್ರಾಮದ ಶ್ರೀ ನಂದಿ ಬಸವೇಶ್ವರ ದೇವಸ್ಥಾನದಲ್ಲಿ ಶಾಂಭವಿ ಆಧ್ಯಾತ್ಮ ವೇದಿಕೆ ಮತ್ತು ವೀರಶೈವ ರಕ್ಷಣಾ ವೇದಿಕೆಗಳ ಸಹಯೋಗದಲ್ಲಿ ನಡೆದ ಸಾಮೂಹಿಕ ಲಕ್ಷ ಬಿಲ್ವಾರ್ಚನ ಕಾರಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು. ಶ್ರಾವಣ ಶಿವ ಸಂಚಾರ ಶ್ರೀ ಸಿದ್ದಾಂತ ಶಿಖಾಮಣಿ ಅಭಿಯಾನ ಅಂಗವಾಗಿ ಧಾರ್ಮಿಕ ಪೂಜಾರ್ಚನೆಗೆ ವಿಶೇಷ ಮನ್ನಣೆ ಇರುವುದರಿಂದ ಸಾಮೂಹಿಕ ಲಕ್ಷ ಬಿಲ್ವಾರ್ಚನೆ ವಿನೂತನ ಕಾರ್ಯಕ್ರಮವನ್ನು ಅಭಿಯಾನದಲ್ಲಿ ಸೇರಿಸಿಕೊಂಡು ಹೆಚ್ಚು ಒತ್ತುಕೊಡಲಾಯಿತು. ಈ ವರ್ಷ ಶ್ರಾವಣ ಮಾಸದಲ್ಲಿ ಐದು ಸೋಮವಾರ ಬಂದಿದ್ದರಿಂದ ಪ್ರಥಮ ಮತ್ತು ಕೊನೆಯ ಸೋಮವಾರ ಬಿಟ್ಟು ಮೂರು ಅಥವಾ ನಾಲ್ಕು ಕಡೆಗಳಲ್ಲಿ ಸಾಮೂಹಿಕ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮವನ್ನು ಮಾಡಿದರೆ ಸಾಕು ಎಂದು ಮೊದಲು ಅಂದುಕೊಂಡಿದ್ದೇವೂ ಆದರೆ ನಮ್ಮ ನಿರೀಕ್ಷೆಯನ್ನು ಮೀರಿ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆದು ಭಕ್ತರ ಮನಸೊರೆಗೊಂಡವು. ಅಗಷ್ಟ 11 ರಂದು ಪ್ರತಾಪುರ ದಿಂದ ಪ್ರಾರಂಭಗೊಂಡ ಸಾಮೂಹಿಕ ಲಕ್ಷ ಬಿಲ್ವಾರ್ಚನೆಯ ಉಸ್ತುರಿ ಶ್ರೀ ನಾಗನಾಥ ಸ್ವಾಮಿ ದೇವಸ್ಥಾನದ, ನೀಲಂಗಾ ವಿಶ್ವಕರ್ಮ ಕಲ್ಯಾಣ ಮಂಟಪ, ಬೇಲೂರ ಸಿದ್ದೇಶ್ವರ ದೇವಸ್ಥಾನ, ಕರನಳ್ಳಿ ಬಕ್ಕಪ್ರಭು ದೇವಸ್ಥಾನ, ಚಿಟಗುಪ್ಪ ಮಡಿವಾಳೇಶ್ವರ ಗವಿ ದೇವಸ್ಥಾನ, ಔರಾದ (ಬಿ) ಅಮರೇಶ್ವರ ದೇವಸ್ಥಾನ, ಉದಗೀರ ಕಪಾಳೇಶ್ವರ ಮಹಾದೇವ ಮಂದಿರ, ಬೊಳೆಗಾಂವ ಮಹಾದೇವ ಮಂದಿರ, ಚಾಂದೇಗಾಂವ ಸಂಗಮೇಶ್ವರ ದೇವಸ್ಥಾನ, ಘಾಟಬೋರಾಳ ಮಹಾದೇವ ಮಂದಿರ, ಪಾತರಪಳ್ಳಿ ಬಸವೇಶ್ವರ ದೇವಸ್ಥಾನ, ಶಮಶೇರನಗರ ಸಿಂಧಗೇರಿ ನಂದಿ ಬಸವೇಶ್ವರ ದೇವಸ್ಥಾನ, ಧನ್ನೂರ (ಹೆಚ್) ನಂದಿ ಬಸವೇಶ್ವರ ದೇವಸ್ಥಾನ ಮುಂತಾದ ಕಡೆಗಳಲ್ಲಿ ಅದ್ದೂರಿಯಾಗಿ ಭಕ್ತಿ ಭಾವಗಳ ಮಧ್ಯದಲ್ಲಿ ಸಾಮೂಹಿಕ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮಗಳು ಭಕ್ತರ ಮನಗೆದ್ದು ಅತ್ಯಂತ ಯಶಸ್ವಿಯಾಗಿ ನಡೆದು ಹೊಸ ಇತಿಹಾಸವನ್ನು ನಿರ್ಮಿಸಿದೆ. ಭಕ್ತರ ಉತ್ಸಾಹವನ್ನು ಕಂಡು ಮುಂದಿನ ವರ್ಷ ಶ್ರಾವಣ ಮಾಸದ ಮೂವತ್ತು ದಿನಗಳು ಒಂದೊಂದು ಕಡೆಯಲ್ಲಿ ಸಾಮೂಹಿಕ ಲಕ್ಷ ಬಿಲ್ವಾರ್ಚನ ಕಾರ್ಯಕ್ರಮಗಳನ್ನು ನಡೆಸಬೇಕೆಂದು ನಮಗೆ ಪ್ರೇರಣೆಯನ್ನು ನೀಡಿದೆ. ಸಾಮೂಹಿಕ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮವು ಆರ್ಥಿಕವಾಗಿ ಹೊರೆ ಬೀಳದೇ ಕಡಿಮೆ ಖರ್ಚಿನಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುವ ಕಾರ್ಯಕ್ರಮವಾಗಿದೆ. ತಮ್ಮ ಕೈಯಾರೆ ದೇವರಿಗೆ ಬಿಲ್ವಾರ್ಚನೆ ಮಾಡುವುದು ಸಹ ಇದರ ಜನ ಪ್ರೀಯತೆಯನ್ನು ಹೆಚ್ಚಿಸಿದೆ. ಭಕ್ತ ಸಾಮೂಹದ ಮನಸೂರೆಗೊಂಡ ಜನಪ್ರೀಯ ಕಾರ್ಯಕ್ರಮ ಇದಾಗಿದೆ. ಎಲ್ಲ ಕಡೆಗಳಿಂದ ಭಕ್ತರ ಬೇಡಿಕೆಯು ಬರುತ್ತಿವೆ. ಮುಂದಿನ ವರ್ಷ ಸಾಮೂಹಿಕ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮಗಳನ್ನು ವ್ಯಾಪಕ ಸ್ವರೂಪದಲ್ಲಿ ಯೋಜನೆಯನ್ನು ರೂಪಿಸಿ ಕಾರ್ಯಕ್ರಮಗಳನ್ನು ಮಾಡುವ ಯೋಜನೆಯನ್ನು ರೂಪಿಸಲಾಗುವುದು.
ಶ್ರೀಶೈಲದ ಅಕ್ಕ ಮಹಾದೇವಿ ಚೈತನ್ಯ ಪೀಠದ ಮಹಾತಪಸ್ವಿ ತಪೋರತ್ನ ಪೂಜ್ಯ ಶ್ರೀ ಕರುಣಾದೇವಿ ಮಾತಾರವರ ಆಶೀರ್ವಾದದಿಂದ ಕಳೆದ ಹನ್ನೆರಡು ವರ್ಷಗಳಿಂದ ಶಾಂಭವಿ ಆಧ್ಯಾತ್ಮ ವೇದಿಕೆ ತಾಯಂದಿರು ಶ್ರಾವಣ ಮಾಸದಲ್ಲಿ ನಂದಿ ಬಸವೇಶ್ವರರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ನಡೆಸುತ್ತಿದ್ದು ಜೊತೆಗೆ ವೀರಶೈವ ರಕ್ಷಣಾ ವೇದಿಕೆಯ ಯುವಕರು ಪವಾಡ ಪುರುಷ ಶ್ರೀ ಸಿದ್ಧಯ್ಯಪ್ಪ ಮಂದಿರದಲ್ಲಿ ಶಿವ ಮಾಲಾವ್ರತ ನಡೆಸಿಕೊಂಡು ಬಂದು ಮಂಗಲ ಕಾರ್ಯಕ್ರಮದಲ್ಲಿ ಸಾಮೂಹಿಕ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು.
ಯುವನಾಯಕ ಬಸವರಾಜ ಹಾಲಹಳ್ಳಿ ಎಲ್ಲರನ್ನು ಸ್ವಾಗತಿಸಿದರು. ವೈದಿಕ ರತ್ನ ಗಂಗಾಧರ ಶಾಸ್ತ್ರೀ ಪ್ರಸ್ತಾವಿಕ ನುಡಿದರು. ಶಾಂಭವಿ ಆಧ್ಯಾತ್ಮ ವೇದಿಕೆಯ ಅಧ್ಯಕ್ಷತೆ ಮಹಾದೇವಿ ಮಠಪತಿ ಅಧ್ಯಕ್ಷತೆ ವಹಿಸಿದ್ದರು ರಕ್ಷಣಾ ವೇದಿಕೆಯ ಅನೀಲ ಪಾಟೀಲ, ಉಮಾದೇವಿ ಹಾಲಹಳ್ಳಿ, ವಿದ್ಯಾವತಿ ಬಿರಾದಾರ, ಸರಸ್ವತಿ ಪಾಟೀಲ, ಸುಬ್ಬಮ್ಮ ಸ್ವಾಮಿ, ಜಯಕ್ಕ ಮೋದಿ, ಲಕ್ಷ್ಮೀ ಬಾಯಿ ಪಾಟೀಲ, ಬಸಮ್ಮಾ ಪಾಟೀಲ, ಶಶಿಕಲಾ ಪಟ್ನೆ, ಅಮರ ಮೋದಿ, ವಿಶ್ವನಾಥ ದಾನಿ, ಅನಂತ ಸ್ವಾಮಿ, ರಮೇಶ ಅರಳಿ, ದತ್ತು ದಾನಿ, ಉಮಾಕಾಂತ ಜೇಮಶೆಟ್ಟಿ, ನಾಗೇಶ ಪುಟೇದ, ಸತೀಶ ಹಾಳೆ, ರವಿ ಪಾಟೀಲ ಸಂತೋಷ ಖಂಡ್ರೆ, ಶಿವಕುಮಾರ ಸ್ವಾಮಿ, ಅವಿನಾಶ ಸ್ವಾಮಿ, ಗುರುಲಿಂಗಯ್ಯ ಸ್ವಾಮಿ, ಭೀಮರಾವ ಗುತ್ತಿ, ಶಿವರಾಜ ಹಾಲಹಳ್ಳಿ, ಬಂಡೆಪ್ಪ ಗಾದಗಿ, ಕವಿರಾಜ ಹಾಳೆ, ಶಶಿ ಸ್ವಾಮಿ ಹಿಪ್ಪಳಗಿ, ಗುರುನಾಥ ಗಾದಗೆ ಮುಂತಾದವರು ಇದ್ದರು.