36 ಕೋಟಿ ದೇವತೆಗಳಲ್ಲಿಯೇ ಗಣಪನಿಗೆ ವಿಶೇಷ ಸ್ಥಾನ : ಎಂ.ಎಸ್. ಹಿರೇಮಠ
ಕಮಲನಗರ: ಸೆ.8:ಹಿಂದೂ ಧರ್ಮದಲ್ಲಿ ಗಣಪನಿಗೆ ವಿಶೇಷ ಸ್ಥಾನವಿದೆ ಎಂದು ಮುಖ್ಯಶಿಕ್ಷಕ ಎಮ್.ಎಸ್.ಹಿರೇಮಠ ಹೇಳಿದರು.
ಪಟ್ಟಣದ ಶಾಸ್ತ್ರೀ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಭಗಿರಥಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಗಣೇಶ ಚರ್ತುಥಿ ದಿನದಂದು ಮೂರ್ತಿ ಪ್ರತಿಷ್ಠಾಪನೆ ನಂತರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಥಮ ಪೂಜೆಯ ಅಧಿದೇವತೆ ಎಂದೆನಿಸಿರುವ ವಿಘ್ನ ವಿನಾಶಕ ಯಾವುದೇ ಶುಭ ಸಮಾರಂಭದಲ್ಲಿ ಪ್ರಥಮ ಪೂಜೆಗೆ ಅರ್ಹನಾಗಿರುತ್ತಾರೆ. ನಾವು ಮಾಡುವ ಯಾವುದೇ ಕೆಲಸದಲ್ಲಿ ತೊಂದರೆಗಳು ಉಂಟಾಗದಂತೆ ಕಾಪಾಡು ಎಂಬ ಕಾರಣಕ್ಕಾಗಿಯೇ ಗಣನಾಯಕನಿಗೆ ಮೊದಲು ಪೂಜೆಯನ್ನು ನೆರವೇರಿಸಲಾಗುತ್ತದೆ ಎಂದರು.
ಶಾಸ್ತ್ರಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ಡಾ. ಅಜೀತಕುಮಾರ ಶಾಸ್ತ್ರೀ ಮಾತನಾಡಿ, ಜ್ಞಾನ ಮತ್ತು ಬುದ್ಧಿವಂತಿಕೆಯ ದೇವತೆ ಎಂಬ ಹೆಸರೂ ಈ ದೇವರಿಗಿದೆ. ಗಣೇಶನ ಆನೆಯ ತಲೆ ಬುದ್ಧಿವಂತಿಕೆಯ ಸೂಚನೆಯಾಗಿದ್ದರೆ ಉದ್ದ ಕಿವಿಗಳು ಅವರ ಮಹತ್ವವನ್ನು ಸಾರುತ್ತವೆ ಎಂಬುದು ವೇದ-ಉಪನಿಷತ್ತುಗಳಿಂದ ತಿಳಿದು ಬಂದಿರುವ ವಿಷಯವಾಗಿದೆ ಎಂದು ತಿಳಿಸಿದರು.
ಸಿಬ್ಬಂದಿ ಶೇಖ ಇಜಾಜ, ಶ್ರೀದೇವಿ ಸೋನಕಾಂಬಳೆ, ಉಷಾ ವಿದ್ಯಾಸಾಗರ, ದೀಪಮಾಲಾ ಸೂರ್ಯವಂಶಿ, ಶೀತಲ ಹಂಗರಗೆ, ಅಂಜಲಿ ಸ್ವಾಮಿ, ರಾಜೇಶ್ವರಿ ಶಿರಗಿರೆ, ಬಳಿರಾಮ ಲಾಂಚಕರ, ಸಂತೋಷ ಡೊಂಗ್ರೆ, ಅಪರ್ಣಾ, ಪ್ರಗ್ಞಾ ಕಾಲೇಕರ್, ಅಮಿತ, ರೋಷನಿ ಡೊಂಗ್ರೆ, ಅರಹಾನ, ಪಂಚಫುಲಾ ಚವಾಣ್, ಅಶ್ವೀನಿ ಮನೋಜಕುಮಾರ ಹಾಗೂ ಮಕ್ಕಳು ಇದ್ದರು.