ರೈಲು ಬೀದರ್ ವರೆಗೆ ವಿಸ್ತರಿಸಿ
ಬೀದರ್:ಸೆ.8: ಬೆಂಗಳೂರು ಹಾಗೂ ಮುಂಬೈಗೆ ಹೊರಡುವ ರೈಲುಗಳನ್ನು ಬೀದರವರೆಗೆ ವಿಸ್ತರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಈ ಕುರಿತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಬೀದರನಿಂದ ರಾಜ್ಯ ರಾಜಧಾನಿ 750 ಕಿ.ಮೀ, ಮುಂಬೈ 600 ಕಿ.ಮೀ. ದೂರದಲ್ಲಿವೆ. ಎರಡೂ ನಗರಗಳಿಗೆ ತೆರಳುವ ಜಿಲ್ಲೆಯ ಪ್ರಯಾಣಿಕರಿಗೆ ಹೆಚ್ಚಿನ ರೈಲುಗಳ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
ಕಲಬುರಗಿಯಿಂದ ಬೆಂಗಳೂರಿಗೆ ಹೊಸದಾಗಿ ಆರಂಭಿಸಿರುವ ವಂದೇ ಭಾರತ್ ಎಕ್ಸಪ್ರೆಸ್ ರೈಲನ್ನು ಬೀದರವರೆಗೆ ವಿಸ್ತರಿಸಿ, ಬೀದರನಿಂದ ಹೊರಡುವಂತೆ ಕ್ರಮ ಕೈಗೊಳ್ಳಬೇಕು. ಹೈದರಾಬಾದನಿಂದ ವಿಕಾರಾಬಾದ, ವಾಡಿ ಜಂಕ್ಷನ್, ಕಲಬುರಗಿ ಮಾರ್ಗವಾಗಿ ಮುಂಬೈಗೆ ಹೋಗುವ 12702 ಸಂಖ್ಯೆಯ ಹುಸೇನ್ ಸಾಗರ್ ಸೂಪರ್ ಫಾಸ್ಟ್ ಎಕ್ಸಪ್ರೆಸ್, 22731 ಸಂಖ್ಯೆಯ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್ ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್ ಅಥವಾ ಸಿಕಂದಾಬಾದ್, ವಿಕಾರಾಬಾದ್, ವಾಡಿ ಜಂಕ್ಷನ್, ಕಲಬುರಗಿ ಮಾರ್ಗವಾಗಿ ಮುಂಬೈಗೆ ತೆರಳುವ 18519 ಸಂಖ್ಯೆಯ ಮುಂಬೈ ಲೋಕಮಾನ್ಯ ತಿಲಕ್À್ಸ ಎಕ್ಸ್‍ಪ್ರೆಸ್ ಈ ಮೂರಲ್ಲಿ ಒಂದನ್ನು ಸಿಕಂದಾರಾಬಾದ್, ವಿಕಾರಾಬಾದ್, ಜಹೀರಾಬಾದ್, ಬೀದರ್, ಹುಮನಾಬಾದ್, ಕಮಲಾಪುರ, ಕಲಬುರಗಿ ಮಾರ್ಗವಾಗಿ ಮುಂಬೈಗೆ ಓಡಿಸಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.
ಬೀದರನಿಂದ ವಾರದಲ್ಲಿ ಮೂರು ದಿನ ಛತ್ರಪತಿ ಶಿವಾಜಿ ಟರ್ಮಿನಲಗೆ ತೆರಳುವ 22144 ಸಂಖ್ಯೆಯ ಮುಂಬೈ ಸಿ.ಎಸ್.ಟಿ.ಎಂ. ಎಕ್ಸಪ್ರೆಸ್ ರೈಲು ಪ್ರತಿ ದಿನ ಓಡಿಸಬೇಕು. ವಾರಕ್ಕೊಮ್ಮೆ ಸಂಚರಿಸುವ ಬೀದರ್-ಯಶವಂತಪುರ ವಯಾ ಕಲಬುರಗಿ ರೈಲು ನಿತ್ಯ ಓಡಿಸಬೇಕು. ಬೀದರನಿಂದ ಹುಬ್ಬಳ್ಳಿಗೆ ಹೊಸ ರೈಲು ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.