ಡಾ. ಪೂರ್ಣಿಮಾ ಜಾರ್ಜಗೆ ಕರ್ನಾಟಕ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಪ್ರದಾನ
ಬೀದರಃ ಸೆ.8:ಪೂಜ್ಯ ಡಾ. ಚನ್ನಬಸವ ಪಟ್ಟದೇವರು, ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜನೆ ಮಾಡಿರುವ ಶೈಕ್ಷಣಿಕ ಸಾಹಿತ್ಯ ಸಮ್ಮೇಳನ ಶುಕ್ರವಾರ ಅದ್ದೂರಿಯಾಗಿ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೇಟ್ಟಿರವರ ನೇತ್ರತ್ವದಲ್ಲಿ ಜರುಗಿತ್ತು. ಬೀದರ ಜಿಲ್ಲಾ ಪ್ರಥಮ ಶೈಕ್ಷಣಿಕ ಸಾಹಿತ್ಯ ಸಮ್ಮೇಳನಾದ ಸರ್ವಾಧ್ಯಕ್ಷರಾದ ಡಾ. ಪೂರ್ಣಿಮಾ ಜಾರ್ಜ್ ರವರಿಗೆ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶೈಕ್ಷಣಿಕ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ, ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ, ಅಧ್ಯಕ್ಷ ಡಾ. ಸುಬ್ಬಣ್ಣ ಕರಕನಳ್ಳಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ರವರು ಕರ್ನಾಟಕ ಶಿಕ್ಷಣ ಸೇವಾ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಪ್ರಗತಿಗೆ ಶಿಕ್ಷಣ ಮೂಲಃ ಸಮಾಜದ ಸಮಸ್ಯೆಗಳು ಹೋಗಲಾಡಿಸಲು ಶಿಕ್ಷಣವೇ ಔಷದವಾಗಿದೆ. ಮನುಷ್ಯ ಜೀವಿಸಲು ಆಹಾರ, ನೀರು, ಗಾಳಿ, ಎಷ್ಟು ಅಗತ್ಯವು ಶಿಕ್ಷಣವು ಅಷ್ಟೆ ಅಗತ್ಯವಾಗಿದೆ. ಶಿಕ್ಷಣ ಪಡೆಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಜ್ಞಾನ ಸುಧಾ ಶಿಕ್ಷಣ ವಿದ್ಯಾಲಯದ ಅಧ್ಯಕ್ಷರಾಗಿರುವ ಡಾ. ಪೂರ್ಣಮಾ ಜಾರ್ಜ ರವರಿಗೆ ಬೀದರ ಜಿಲ್ಲಾ ಪ್ರಥಮ ಶೈಕ್ಷಣಿಕ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾಡಿರುವುದು ಕರ್ನಾಟಕದ ಬೀದರ ಜಿಲ್ಲೆ ರಾಜ್ಯಕ್ಕೆ ರಾಷ್ಟ್ರಕ್ಕೆ ಮಾದರಿಯಾದ ಜಿಲ್ಲೆಯಾಗಿದೆ.
ಜಿಲ್ಲೆಯ ಶೈಕ್ಷಣಿಕ ಸಮಸ್ಯೆಗಳು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಾಡಬೇಕು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮಾಡಬೇಕು. ಬಹುಗಡಿಗಳಿಂದ ಆವೃತ್ತಗೊಂಡಿರುವ ಬಹುಭಾಷೆ ಆಡುವ, ಬಹುಧರ್ಮಿಯರು, ಬಹು ಸಾಮಾಜಿಕರಣದಲ್ಲಿ ಒಂದಾತ್ಮವಾಗಿ ಜೀವನ ನಡೆಸುವ ಬೀದರ ಜಿಲ್ಲೆಯ ಜನರು ಮಾತೃಭಾಷೆಯ ಕಟ್ಟಾಳುಗಳಾಗಿದ್ದಾರೆ. ಗಡಿಭಾಗದಲ್ಲಿನ ಕನ್ನಡ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳು, ಒದಗಿಸಬೇಕ್ಕಾಗಿದೆ ಎಂಬೂವ ಬೇಡಿಕೆಳು ಉಸ್ತುವಾರಿ ಸಚಿವರ ಮುಂದೆ ಇಡಲಾಯಿತು. ಬೀದರ ಜಿಲ್ಲಾ ಉಸ್ತುವಾರಿ, ಅರಣ್ಯ ಜೀವಶಾಸ್ತ್ರ, ಪರಿಸರ ಸಚಿವರಾದ ಶ್ರೀ ಈಶ್ವರ ಖಂಡ್ರೆ ರವರು ಸ್ಪಂಧನೆ ಮಾಡಿ ಶೈಕ್ಷಣಿಕ ಕ್ಷೇತ್ರದ ಪ್ರಗತಿಗಾಗಿ ಹೆಚ್ಚಿನ ಹಣವನ್ನು ಮೀಸಲಾಗಿಡಲಾಗುವುದೆಂದು ಭರವಸೆ ನೀಡಿದರು.