ಗುವಿವಿ : ಸೆ. 10 ರಂದು 45ನೇ ಸಂಸ್ಥಾಪನ ದಿನಾಚರಣೆ
ಕಲಬುರಗಿ :ಸೆ.8: ಗುಲಬರ್ಗಾ ವಿಶ್ವವಿದ್ಯಾಲಯದ 45ನೇ ಸಂಸ್ಥಾಪನ ದಿನಾಚರಣೆಯನ್ನು ಜ್ಞಾನಗಂಗಾ ಅವರಣದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಸೆ. 10 2024ರಂದು ಬೆ. 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪೆÇ್ರ. ಜಿ. ಆರ್. ನಾಯಕ್ ಮುಖ್ಯ ಅತಿಥಿಯಾಗಿ ಆಗಮಿಸುವರು.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ದಯಾನಂದ ಅಗಸರ ಅಧ್ಯಕ್ಷತೆ ವಹಿಸುವರು. ಸಿಂಡಿಕೇಟ್ ಸದಸ್ಯ ಪೆÇ್ರ. ಜಿ. ಶ್ರೀರಾಮುಲು ಹಾಗೂ ವಿದ್ಯಾ ವಿಷಯಕ ಪರಿಷತ್ ಸದಸ್ಯ ಪೆÇ್ರ. ಕೆ. ಸಿದ್ದಪ್ಪ ಗೌರವ ಉಪಸ್ಥಿತಿ ವಹಿಸುವರು.
ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಪೆÇ್ರ. ಮೇಧಾವಿನಿ ಕಟ್ಟಿ ಹಾಗೂ ವಿತ್ತಾಧಿಕಾರಿ ಕು. ಗಾಯತ್ರಿ ಉಸ್ಥಿತರಿರುವರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಮತ್ತು ವಿದ್ಯಾವಿಷೇಯಕ ಪರಿಷತ್ ಸದಸ್ಯರು ಪಾಲ್ಗೊಳ್ಳುವರು ಎಂದು ಕುಲಸಚಿವ ಪೆÇ್ರ. ರಾಜನಾಳ್ಕರ್ ಲಕ್ಷ್ಮಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.