ಕರ್ನಾಟಕ ಕೇಂದ್ರೀಯ ವಿವಿ ಸಂಶೋಧನಾ ಯೋಜನೆ ಅನುದಾನಕ್ಕೆ ಆಯ್ಕೆ
ಕಲಬುರಗಿ:ಸೆ.8:ದಕ್ಷಿಣ ಭಾರತದ ಬುಡಕಟ್ಟು ಸಮುದಾಯಗಳ ಸಬಲೀಕರಣ ಹಾಗೂ ವಿಕಸಿತ ಭಾರತದಲ್ಲಿ ಇವರ ಪಾತ್ರ ದ ಕುರಿತು ಸಂಶೋಧನೆ ನಡೆಸಲು ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರ ತಂಡವು ಭಾರತದ ಪ್ರತಿಷ್ಠಿತ ಇಂಡಿಯನ್ ಕೌನ್ಸಿಲ್ ಫಾರ್ ಸೋಷಿಯಲ್ ಸೈನ್ಸ್ ರೀಸರ್ಚ್ (IಅSSಖ) ಗೆ ಸಲ್ಲಿಸಲಾದ ಪ್ರಸ್ತಾವನೆಯು ಸಂಶೋಧನಾ ಅನುದಾನಕ್ಕೆ ಆಯ್ಕೆ ಆಗಿದೆ.
ಈ ಸಂಶೋಧನೆಯು, ಬುಡಕಟ್ಟು ಜನ ಸಮುದಾಯದಲ್ಲಿನ ಪ್ರಾಚೀನ ಸಾಂಪ್ರದಾಯಿಕ ಜ್ಞಾನ ಕೌಶಲ್ಯ, ಸಂಸ್ಕøತಿ ಹಾಗೂ ಬುಡಕಟ್ಟು ಜನರ ಉದ್ಯಮಶೀಲ ಸಾಮಥ್ರ್ಯ ಗಳ ಬಗ್ಗೆ ಆಳವಾದ ಅಧ್ಯಯನ ನಡೆಸಲಿದೆ. ಈ ಸಂಶೋಧನಾ ಅಧ್ಯಯನ ದಿಂದ ಬುಡಕಟ್ಟು ಕಲ್ಯಾಣಕ್ಕಾಗಿ ಮುಂದಿನ ಕಾರ್ಯ ಯೋಜನೆಗಳನ್ನು ರೂಪಿಸಲು , ಸಾಂಪ್ರದಾಯಿಕ ಜ್ಞಾನ ದ ಸಂರಕ್ಷಣೆ ಹಾಗೂ ಪ್ರಸರಣದ ಕಾರ್ಯದಲ್ಲಿ ಹೆಚ್ಚಿನ ಸಹಾಯ ಆಗಲಿದೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ದ ವ್ಯವಹಾರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಶಿವಕುಮಾರ ಎಂ.ಬೆಳ್ಳಿ, ಜಾನಪದ ಶಾಸ್ತ್ರ ಮತ್ತು ಬುಡಕಟ್ಟು ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರೋಹಿಣಾಕ್ಷ, ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕರಾದ ಪೆÇ್ರ. ಪವಿತ್ರ ಆಲೂರು, ಕಾನೂನು ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಬಸವರಾಜ ಕುಬಕಡ್ಡಿ ಅವರಗಳ ಸಂಶೋಧಕರ ತಂಡ ಈ ಸಂಶೋಧನಾ ಕಾರ್ಯಯೋಜನೆಯಲ್ಲಿ ಭಾಗಿಯಾಗಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳಲ್ಲಿರುವ ವಿವಿಧ ಬುಡಕಟ್ಟು ಸಮುದಾಯಗಳ ಪಾರಂಪರಿಕ ಜ್ಞಾನವನ್ನು ಉದ್ಯಮಶೀಲತೆಯಲ್ಲಿ ಬಳಸಿಕೊಂಡು ಸಮುದಾಯಗಳ ಸಬಲೀಕರಣಗೊಳಿಸಿ ಪ್ರಧಾನ ಮಂತ್ರಿಗಳ ಕನಸಿನ ವಿಕಸಿತ ಭಾರತವನ್ನು ಸಾಧಿಸುವಲ್ಲಿ ಹೇಗೆ ಬಳಸಿಕೊಳ್ಳಬಹುದು ಎನ್ನುವ ಸಂಶೋಧನೆ ಇದಾಗಲಿದೆ ಎಂದು ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ ಐಸಿಎಸ್‍ಎಸ್‍ಆರ್ ಸಂಶೋಧನಾ ಅನುದಾನ ದೊರೆತಿರುವುದಕ್ಕೆ ಮಾನ್ಯ ಕುಲಪತಿಗಳಾದ ಪೆÇ್ರ. ಬಟ್ಟು ಸತ್ಯನಾರಾಯಣ, ಕುಲಸಚಿವ ಪೆÇ್ರ. ಆರ್ ಆರ್ ಬಿರಾದಾರ ಹರ್ಷ ವ್ಯಕ್ತಪಡಿಸಿದ್ದಾರೆ ಅಲ್ಲದೆ ಪ್ರಾಧ್ಯಾಪಕರಿಗೆ ಅಭಿನಂದಿಸಿದ್ದಾರೆ.