ಜೆ. ಎ. ಶಿಕ್ಷಣ ಸಂಸ್ಥೆಯಲ್ಲಿ ಪ್ರವಾಸ ಕಥನದ ಮೇಲೆ ಉಪನ್ಯಾಸ
ಅಥಣಿ :ಸೆ.8: ಜಗತ್ತಿನ ಎಲ್ಲ ಸಂಸ್ಕøತಿಗಳಲ್ಲಿ ನಮ್ಮ ಭಾರತೀಯ ಸಂಸ್ಕೃತಿಯೇ ಶ್ರೇಷ್ಠ ನಮ್ಮ ವಿದ್ಯಾರ್ಥಿಗಳಲ್ಲಿ ಇರುವ ಜ್ಞಾನ ಮತ್ತು ಕೌಶಲ್ಯ ಶ್ರೇಷ್ಠವಾದ್ದದು ಅದರ ಸದುಪಯೋಗ ಪಡಿಸಿಕೊಂಡು ಭಾರತ ಜಗತ್ತಿನಲ್ಲಿಯೇ ಇನ್ನೂ ಉನ್ನತ ಸ್ಥಾನಕ್ಕೆ ಏರಬೇಕು ಎಂದು ಜೆ ಎ ಶಿಕ್ಷಣ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಅರವಿಂದರಾವ ದೇಶಪಾಂಡೆ ಅಭಿಪ್ರಾಯಪಟ್ಟರು.
ಅವರು ಶಿಕ್ಷಕರ ದಿನಾಚರಣೆಯ ನಿಮಿತ್ತವಾಗಿ ಪಟ್ಟಣದ ಜಾಧಜಿ ಶಿಕ್ಷಣ ಸಂಸ್ಥೆಯ. ಜೆ. ಎ. ಪದವಿ ಪೂರ್ವ ಕಾಲೇಜನಲ್ಲಿ ಪ್ರವಾಸ ಕಥನ ಎಂಬ ವಿಷಯದ ಮೇಲೆ ಏರ್ಪಡಿಸಲಾಗಿದ್ದ
ವಿಶೇಷ ಉಪನ್ಯಾಸ ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ್ದ ಅವರು
ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಾತನಾಡಿದರು. ಮನುಷ್ಯನಿಗೆ ಓದುವ ಹವ್ಯಾಸ ಇರಬೇಕು. ಜ್ಞಾನಕ್ಕಾಗಿ ಅಧ್ಯಯನ ಅನುಭವಕ್ಕಾಗಿ ದೇಶ ವಿದೇಶ ಸುತ್ತಬೇಕು. ಆ ಪ್ರದೇಶವನ್ನು ಅಧ್ಯಯನ ಮಾಡುವುದರ ಜೊತೆಗೆ ಅಲ್ಲಿನ ಆಹಾರ ಪದ್ಧತಿ. ಶಿಕ್ಷಣ. ಸಂಸ್ಕೃತಿ ಉಡುಗೆ ತೊಡುಗೆ. ಅಲ್ಲಿ ಜನರು ಬದುಕುವ ರೀತಿ. ನಾಗರಿಕತೆ ನೈಸರ್ಗಿಕ ಸಂಪತ್ತಿನ ಬಗ್ಗೆ ತಿಳಿದುಕೊಂಡಾಗ ಮಾತ್ರ ಪ್ರವಾಸದ ಉದ್ದೇಶ ಈಡೇರುತ್ತದೆ. ಅಲ್ಲಿನ ಸಂಸ್ಕೃತಿ ಸಂಸ್ಕಾರಗಳನ್ನು ಅರಿತುಕೊಳ್ಳಬೇಕು ಒಳ್ಳೆಯದನ್ನು ಸ್ವೀಕರಿಸಬೇಕು ಈ ಉದ್ದೇಶಕ್ಕಾಗಿಯೇ ನಮ್ಮ ಗುರು ಹಿರಿಯರು ದೇಶ ಸುತ್ತಿ ನೋಡು ಎಂಬ ಮಾತು ಹೇಳಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಜೆ ಎ ಪದವಿಪೂರ್ವ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಅನಿಲ್ ದೇಶಪಾಂಡೆ ವಹಿಸಿದ್ದರು.
ವೇದಿಕೆಯ ಮೇಲೆ ವಿಶೇಷ ಉಪಸ್ಥಿತಿ ಸ್ಥಾನದಲ್ಲಿ ಕಾಲೇಜಿನ ಪ್ರಾಚಾರ್ಯ ಎಂ.ಪಿ. ಮೇತ್ರಿ ವಹಿಸಿದ್ದರು.
ಈ ವೇಳೆ ನಿರ್ಮಲಾ ಬೇಡರಟ್ಟಿ. ಅನಿಕೇತನ ಕಂಬಾರ ಸೇರಿದಂತೆ ಉಪನ್ಯಾಸಕರು ಉಪನ್ಯಾಸಕಿಯರು ಎಲ್ಲ ವರ್ಗಗಳ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮವನ್ನು ಅಮೃತ ಜಮಖಂಡಿ ನಿರೂಪಿಸಿದರು ಪ್ರೀತಿ ಮಾದರ ಸ್ವಾಗತಿಸಿದರು. ಶ್ರದ್ಧಾ ತೋಟಗಿ ಪರಿಚಯಿಸಿದರು ಕಾಂಚನಾ ಬಡಕಂಬಿ
ವಂದಿಸಿದರು.