ಪಥ ಸಂಚಲನ
ಲಕ್ಷ್ಮೇಶ್ವರ,ಸೆ8: ಪಟ್ಟಣದಲ್ಲಿ ಶನಿವಾರ ಗಣೇಶ್ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಪಥಸಂಚಲನೆ ನಡೆಸಿದರು.
ಪಥ ಸಂಚಲನವು ಪೊಲೀಸ್ ಠಾಣೆಯಿಂದ ಆರಂಭಗೊಂಡು ಹೊಸ ಬಸ್ ನಿಲ್ದಾಣ ಅಂಬೇಡ್ಕರ್ ನಗರ ಸೋಮೇಶ್ವರ ದೇವಸ್ಥಾನ ಪಾದಗಟ್ಟಿ ಭಾನು ಮಾರ್ಕೆಟ್ ಹಳೆ ಪೊಲೀಸ್ ಸ್ಟೇಷನ್ ಮುಖಾಂತರ ಮತ್ತೆ ಪೊಲೀಸ್ ಠಾಣೆಗೆ ಬಂದು ಮುಕ್ತಾಯಗೊಂಡಿತು.
ನೇತೃತ್ವವನ್ನು ಹೆಚ್ಚುವರಿ ಎಸ್ಪಿ ಎಂ ಬಿ ಸಂಕದ ಗದಗ್ ಉಪ ವಿಭಾಗದ ಡಿವೈಎಸ್ಪಿ ಜೆಎಚ್ ಇನಾಮದಾರ್ ಸಿಪಿಐ ನಾಗರಾಜ್ ಮಾಡಳ್ಳಿ ಪಿಎಸ್‍ಐ ಈರಣ್ಣ ರಿತ್ತಿ ವಹಿಸಿದ್ದರು.
2 ಕೆಎಸ್‍ಆರ್ಪಿ ತುಕಡಿ 60 ಹೋಂ ಗಾಡ್ರ್ಸು ಮತ್ತು ಸ್ಥಳೀಯ ಸಿಬ್ಬಂದಿ ಹಾಗೂ 1 ಡಿ ಆರ್ ತುಕಡಿ ಪಥಸಂಚಲನದಲ್ಲಿ ಭಾಗವಹಿಸಿದ್ದರು.