ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ
ಚನ್ನಮ್ಮನ ಕಿತ್ತೂರು,ಸೆ8: ಅಂಗವಿಕಲರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದದ್ದು ಅವುಗಳ ಸದ್ಭಳಕೆ ಮಾಡಿಕೊಂಡು ತಮ್ಮ ಜೀವನ ಉತ್ತಮವಾಗಿಸಿಕೊಳ್ಳಬೇಕೆಂದು ಹುಲಿಕೊತ್ತಲದ ಸಮಾಜ ಸೇವಕ ಫಕ್ಕೀರ ಹರಿಜನ ಹೇಳಿದರು.
ಸಮೀಪದ ಖಾನಾಪೂರ ತಾಲೂಕಿನ ಮಂಗೇನಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹತ್ತಿರ ಮಹಿಳಾ ಜಾಗೃತಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯ್ರಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿಕಲಾಂಗರನ್ನು ಸಮಾಜ ನೋಡುವ ದೃಷ್ಟಿಕೋನವೇ ಬೇರೆಯಿರುತ್ತದೆ. ಅದನ್ನು ಮೆಟ್ಟಿ ನಿಲ್ಲಬೇಕಾದರೆ ಅಂಗವಿಕಲರು ಅಬಲರಾಗದೇ ಸಬಲರಾಗಬೇಕು ಅಂದಾಗ ಮಾತ್ರ ನಾವು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.
ಸಂಸ್ಥೆಯ ಸಂಸ್ಥಾಪಕ ಗೋಪಾಲ ದಾಬಡೆ ಅಧ್ಯಕ್ಷಸ್ಥಾನ ವಹಿಸಿಕೊಂಡು ಮಾತನಾಡಿದರು.ಈ ವೇಳೆ ಡಾ.ಶಿವಾಜಿ ಕಾಂಬಳೆ, ಶಾರದಾ ಗೋಪಾಲ, ದಿಲಶಾದ ಸುತಾರ್, ಜಾಗೃತಿ ಸಹಾಯಕಿರುಗಳಾದ ಸುವರ್ಣಾ ಕುಟಾಳೆ, ಮಹಾದೇವಿ ಅಂಕಲಗಿ, ಬೆಂಗಳೂರಿನ ಕಲಿಪ್ ಉಪಸ್ಥಿತರಿದ್ದರು.