“ವೈಜ್ಞಾನಿಕ ಪದ್ಧತಿ ಮಾವು ಕೃಷಿ”: ರೈತರ ಕ್ಷೇತ್ರ ಪಾಠಶಾಲೆ ಉದ್ಘಾಟನೆ
ಬಾಗಲಕೋಟೆ, ಸೆ8: ಬೀಳಗಿ ತಾಲೂಕಿನ ಯಡಹಳ್ಳಿ ಗ್ರಾಮದ ಅಮಲಝರಿ ತೋಟದ ಮಾವು ಬೆಳೆಗಾರರಾದ, ಬಿ. ಎಮ್. ದೇಸಾಯಿಯವರ ಮಾವಿನ ತೋಟದಲ್ಲಿ ಮಾವು ಬೆಳೆಯ ರೈತ ಕ್ಷೇತ್ರ ಪಾಠಶಾಲೆಯ ಉದ್ಘಾಟನೆ ಹಾಗೂ ಮೊದಲನೆಯ ಅಧಿವೇಶನವನ್ನು ಜೆ. ಟಿ. ಪಾಟೀಲ ಸನ್ಮಾನ್ಯ ಶಾಸಕರು, ಬೀಳಗಿ ಹಾಗೂ ಅಧ್ಯಕ್ಷರು ಹಟ್ಟಿ ಚಿನ್ನದ ಗಣಿಯವರ ಉಪಸ್ಥಿತಿಯಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಅಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಜ್ಞಾನಿ ಡಾ. ಜೆ. ಬಿ. ಗೋಪಾಲಿಯವರು ಕಾಂಡ ಕೊರಕ ಮತ್ತು ತೊಗಟೆ ತಿನ್ನುವ ಹುಳುಗಳಿಗೆ ಸಂರಕ್ಷಣಾ ದ್ರಾವಣವನ್ನು ಲೇಪಿಸುವ ಕಾರ್ಯವಿಧಾನದ ಪಧ್ಧತಿ ಪ್ರಾತ್ಯಕ್ಷಿಕೆ ತೋರಿಸಿ ಕೊಟ್ಟರು.
ಡಾ ಆನಂದ ನಂಜಪ್ಪನವರ ಹಣ್ಣು ವಿಜ್ಞಾನ, ವಿಜ್ಞಾನಿ ಪ್ರಸ್ತುತದಿಂದ ನವಂಬರವರೆಗೆ ಅನುಸರಿಸಬೇಕಾದರೆ ಪೂರ್ವ ಸಿದ್ಧತಾ ಕ್ರಮಗಳ ಬಗ್ಗೆ ಹಾಗೂ ಡಾ. ರಮೇಶ ಸಸ್ಯ ರೋಗಶಾಸ್ತ್ರ ವಿಜ್ಞಾನಿ ಮಾವಿನ ಬೆಳೆಗೆ ಬರುವ ಪ್ರಮುಖ ರೋಗಗಳ ಬಗ್ಗೆ ತಿಳಿಸಿದರು. ಡಾ. ಎಲ್. ಬಿ. ನಾಯಕ್, ನಿವೃತ್ತ ವಿಜ್ಞಾನಿಗಳು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಾವಿನ ಕ್ಷೇತ್ರವು ವ್ಯಾಪಕವಾಗಿ ಬೆಳೆಯುತ್ತಿದ್ದು, ಮಣ್ಣಿನ ಗುಣಧರ್ಮಗಳ ಆಧಾರದ ಮೇಲೆ ಹಾಗೂ ಫಲವತ್ತತೆಯನ್ನು ಕಾಪಾಡಬೇಕೆಂದು ತಿಳಿಸಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದ ಕುಲಪತಿ ಡಾ. ವಿಷ್ಣುವರ್ಧನರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ರೈತರ ಕ್ಷೇತ್ರ ಪಾಠ ಶಾಲೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕ್ರಮಗಳ ಬಗ್ಗೆ ತಿಳಿಸುತ್ತಾ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತೋಟಗಾರಿಕಾ ಬೆಳೆಗಳ ತಂತ್ರಜ್ಞಾನ ಮಾಹಿತಿ ಹಾಗೂ ರಫ್ತು ವಹಿವಾಟಿನ ಕೇಂದ್ರವನ್ನು ಅಭಿವೃದ್ಧಿಪಡಿಸಿ ವಿಶ್ವವಿದ್ಯಾಲಯದ ಅಡಿಯಲ್ಲಿರುವ 20 ಎಕರೆ ಪ್ರದೇಶವನ್ನು ಸಂಪೂರ್ಣವಾಗಿ ಸಾವಯವ ತೋಟಗಾರಿಕೆ ಸಂಶೋಧನೆಗೆ ಒಳಪಡಿಸಿ ಅಭಿವೃದ್ಧಿ ಪಡಿಸಲಾಗುವದೆಂದು ತಿಳಿಸಿ ಸಾವಯವ ಕೃಷಿಗೆ ಒತ್ತು ಕೊಡುವ ಹಲವಾರು ಯೋಜನೆಗಳಲ್ಲಿ ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳುತ್ತೇವೆಯೆಂದು ತಿಳಿಸಿದರು.
ವಿಶ್ವವಿದ್ಯಾಲಯ ಅಧಿಕಾರಿಗಳಾದ ಡಾ. ಟಿ. ಬಿ. ಅಳ್ಳೊಳ್ಳಿ ವಿಸ್ತರಣಾ ನಿದೆರ್Éೀಶಕರು, ಡಾ. ಲಕ್ಷ್ಮೀನಾರಯಣ ಹೆಗಡೆ, ಡಾ. ಎಮ್. ಎಸ್. ಲೋಕೇಶ್, ಡಾ. ವೈ. ಕೆ. ಕೋಟಿಕಲ್, ಡಾ. ರವೀಂದ್ರ ಹಕಾಟೆ ಉಪನಿರ್ದೇಶಕರು ಸಂವಾದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು. ಡಾ. ಶಶಿಕುಮಾರ ಎಸ್. ಪ್ರಾಧ್ಯಾಪಕರು ಹಾಗೂ ವಿಸ್ತರಣಾ ಮುಂದಾಳು ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಯನ್ನು, ಸಂಸ್ಥಾಪಕ ಕೃಷಿಕ ಸಮಾಜದ ಅಧ್ಯಕ್ಷರು ಹಾಗೂ ಮಾವು ಕ್ಷೇತ್ರದ ಹಿರಿಯರಾದ ಬಿ. ಎಮ್. ದೇಸಾಯಿ ಯವರ ವಂದನೆಗಳೊಂದಿಗೆ ಮೊದಲ ಅಧಿವೇಶನ ಪೂರ್ಣಗೊಂಡಿತು. ಡಾ. ದೀಪಾ ತೇರದಾಳ ಸಹಾಯಕ ಪ್ರಾಧ್ಯಾಪಕರು, ಕಾರ್ಯಕ್ರಮವನ್ನು ನಿರ್ವಹಿಸಿದರು.