ಭವಿಷ್ಯ ರೂಪಿಸುವ ಗುರುಗಳ ಸೇವೆ ಬೆಲೆ ಕಟ್ಟಲಾಗದು
ಕೋಲಾರ,ಸೆ,೮:ದೇಶದ ಭವಿಷ್ಯವನ್ನು ರೊಪಿಸುವಂತ ಉತ್ತಮ ಪ್ರಜೆಗಳನ್ನು ಸೃಷ್ಟಿಸುವಂತ ಗುರುಗಳ ಸೇವೆಗೆ ಎಂದಿಗೂ ಬೆಲೆ ಕಟ್ಟಲಾಗದ ಗೌರವ ಇದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿ.ಎಲ್.ಎನ್.ಪ್ರಸಾದ್ ಅಭಿಪ್ರಾಯ ಪಟ್ಟರು,
ನಗರದ ಶ್ರೀದೇವರಾಜ ಅರಸು ವೈದ್ಯಕೀಯ ಹಾಗೂ ಸಂಶೋಧನಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದಿಂದ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದಲ್ಲಿ ಉತ್ತಮ ಸೇವೆ ಸಲ್ಲಿಸಿದ ಪ್ರೋ,ಡಾ.ನಾರಾಯಣಸ್ವಾಮಿ ಹಾಗೂ ಪ್ರೋ,ಡಾ.ಪಿ.ಎಲ್.ಎನ್.ರೆಡ್ಡಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಶಿಕ್ಷಕರು, ಉಪನ್ಯಾಸಕರು, ಅಧ್ಯಾಪಕರು ಬೋಧನೆ ಮಾಡುವಾಗ ಕೇವಲ ಪಠ್ಯಕ್ಕೆ ಮಾತ್ರ ಸಿಮೀತಗೊಳ್ಳದೆ ವಿದ್ಯಾರ್ಥಿಗಳಿಗೆ ಸಮಾಜದ ಆರೋಗ್ಯ ರಕ್ಷಣೆಯ ಜವಾಬ್ದಾರಿ ಹಾಗೂ ವೃತ್ತಿಯಲ್ಲಿ ಪ್ರಮಾಣಿಕ ಸೇವೆಯನ್ನು ಅಳವಡಿಸಿ ಕೊಳ್ಳುವಂತೆ ಹಿತನುಡಿಗಳಾಡಿ ಕಳುಹಿಸುತ್ತಾರೆ ಅದನ್ನು ಈಡೇರಿಸಿದಾಗ ಮಾತ್ರ ವಿದ್ಯೆ ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸಿದಂತಾಗುವುದು ಎಂದರು.
ಇಂಡಿಯನ್ ಮೆಡಿಕಲ್ ಅಸೋಷಿಯೇಷನ್ ಜಿಲ್ಲಾಧ್ಯಕ್ಷ ಪ್ರೋ. ಡಾ. ನಾರಾಯಣಸ್ವಾಮಿ.ಎಂ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಗುರುಗಳ ಶಿಕ್ಷಣ ಸೇವೆಯನ್ನು ಸ್ಮರಿಸಿ ಭವಿಷ್ಯದಲ್ಲಿ ಸಮಾಜದಲ್ಲಿ ಅರೋಗ್ಯ ಸುಧಾರಣೆ ಮಾಡ ಬೇಕಾಗಿರುವುದು ಪ್ರತಿಯೊಬ್ಬರ ಮೇಲಿದೆ ಎಂಬುವುದು ಮರೆಯ ಬಾರದು ಎಂದು ಕಿವಿ ಮಾತು ತಿಳಿಸಿದರು.
ಸಮಾಜದಲ್ಲಿ ಗುರುವಿಗೆ ಇರುವಂತ ಗೌರವ ಬೇರೆ ಯಾರಿಗೂ ಇಲ್ಲ ಗುಣಮಟ್ಟದ ಶಿಕ್ಷಣ ಕಲ್ಪಿಸಿದ ನಮ್ಮ ಸೇವೆಯು ಅವರ ಜೀವನದಲ್ಲಿ ಅವಿಸ್ಮರಣಿಯ ಎಂದು ತಿಳಿಸಿದರು.
ಸಮಾಜದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪ್ರೋತ್ಸಾಹ, ಮಾರ್ಗದರ್ಶನ ನೀಡಿದವರನ್ನು ಎಂದಿಗೂ ಮರೆಯಬಾರದು, ನಮ್ಮ ಭವಿಷ್ಯವನ್ನು ರೂಪಿಸಿ ಕೊಟ್ಟವರ ಸೇವೆಯನ್ನು ಸ್ಮರಿಸಬೇಕು. ನಾನು ಸಹ ವೈದ್ಯಕಿಯ, ನಸಿಂಗ್ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ್ದೇನೆ ಬೆಳಿಗ್ಗೆಯಿಂದ ಸಂಜೆಯವರೆಗೆ ಸ್ವಲ್ಪವೂ ಆಯಾಸವಿಲ್ಲ ಬೋಧಿಸುವುದು ನಮಗೆ ಅಭ್ಯಾಸವಾಗಿತ್ತು. ನೀವು ಕಲಿತಿರುವ ಜ್ಞಾನವನ್ನು ಮತ್ತಷ್ಟು ಮಂದಿಗೆ ಧಾರೆ ಎರೆಯಬೇಕು ಹಾಗೂ ಸಮಾಜಕ್ಕೆ ಅರೋಗ್ಯದ ಕೊಡುಗೆ ನೀಡಬೇಕು ಎಂದರು
ನನ್ನ ಮರಣದ ನಂತರ ನನ್ನ ದೇಹವನ್ನು ಇದೇ ವೈದ್ಯಕೀಯ ಸಂಸ್ಥೆಗೆ ದಾನವಾಗಿ ನೀಡುವ ಮೂಲಕ ವಿದ್ಯಾರ್ಥಿಗಳ ಸಂಶೋಧನೆಗೆ ಪ್ರೇರಣೆ ನೀಡುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಪ್ರೋ. ಡಾ. ಪಿ.ಎಲ್.ಎನ್.ರೆಡ್ಡಿ ಹಾಗೂ ಪ್ರೋ. ಡಾ.ನಾರಾಯಣಸ್ವಾಮಿ.ಎಂ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು,
ಕಾರ್ಯಕ್ರಮದಲ್ಲಿ ಡೀನ್ ಡಾ.ಪ್ರಭಾಕರ್, ಕುಲಸಚಿವ ಡಾ.ಸಿ.ಮುನಿನಾರಾಯಣ,,ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಡಾ.ವಿನಯ್ ಬಾಬು ಮಾತನಾಡಿದರು. ವೈದ್ಯಕಿಯ ಅಧೀಕ್ಷಕ ಡಾ.ಜೆ.ಕೃಷ್ಣಪ್ಪ ಹಾಗೂ ಉಪ ಪ್ರಾಂಶುಪಾಲ ಡಾ.ದಿನೇಶ್ ಉಪಸ್ಥಿತರಿದ್ದರು.