18 ಮಂದಿಗೆ ಉತ್ತಮ ಶಿಕ್ಷಕ ಪ್ರಶಸ್ತಿ, 6 ಮಂದಿಗೆ ಪುರಸ್ಕಾರ
ಕೋಲಾರ.ಸೆ೮:ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ,ಜಿಪಂ, ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸಿದ ೧೮ ಶಿಕ್ಷಕರನ್ನು ನಗದು ಪುರಸ್ಕಾರದೊಂದಿಗೆ ಶಾಸಕ ಕೊತ್ತೂರು ಮಂಜುನಾಥ್ ಸನ್ಮಾನಿಸಿದರು.
ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದವರೆಂದರೆ ಕೋಲಾರ ತಾಲ್ಲೂಕಿನ ಬಾಲಕಿಯರ ಪಿಯು ಕಾಲೇಜಿನ ಎನ್.ಎಸ್.ಭಾಗ್ಯ, ಬಂಗಾರಪೇಟೆ ತಾಲ್ಲೂಕಿನ ದೊಡ್ಡಚಿನ್ನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಜಿ.ಟಿ.ರಾಮಚಂದ್ರಪ್ಪ, ಕೆಜಿಎಫ್ ತಾಲ್ಲೂಕು ಸುಂದರಪಾಳ್ಯ ಸರ್ಕಾರಿ ಪ್ರೌಢಶಾಲೆಯ ಎನ್.ವಿ.ಪರಮೇಶ್, ಮಾಲೂರು ತಾಲ್ಲೂಕು ಕುಡಿಯನೂರು ಪ್ರೌಢಶಾಲೆಯ ಹೇಮಾವತಿ, ಮುಳಬಾಗಿಲು ತಾಲ್ಲೂಕು ತಾಯಲೂರು ಸರ್ಕಾರಿ ಮಾದರಿ ಹಿರಯ ಪ್ರಾಥಮಿಕ ಶಾಲೆಯ ಡಾ.ಮುಜೀಬ್‌ಖಾನ್, ಶ್ರೀನಿವಾಸಪುರ ತಾಲ್ಲೂಕಿನ ಪಾತಪಲ್ಲಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಆರ್.ಲಕ್ಷ್ಮಯ್ಯ ಭಾಜನರಾಗಿದ್ದು, ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಬಂಗಾರಪೇಟೆ ತಾಲ್ಲೂಕು ದೋಣಿಮಡಗು ಶಾಲೆಯ ಬಡ್ತಿ ಮುಖ್ಯಶಿಕ್ಷಕ ಜಿ.ಮುನಿಸ್ವಾಮಿ, ಕೆಜಿಎಫ್ ತಾಲ್ಲೂಕಿನ ದೊಡ್ಡಕಾರಿ ಗ್ರಾಮದಸರ್ಕಾರಿ ವರಲಕ್ಷ್ಮಮ್ಮ, ಕೋಲಾರ ತಾಲ್ಲೂಕಿನ ಅಂಕತಟ್ಟಿ ಶಾಲೆಯ ಶಿಕ್ಷಕ ಎಸ್.ರಮೇಶಬಾಬು, ಮಾಲೂರು ತಾಲ್ಲೂಕಿನ ಸಂತೇಹಳ್ಳಿ ಶಾಲೆ ಬಡ್ತಿ ಮುಖ್ಯಶಿಕ್ಷಕಿ ಹೆಚ್.ಆರ್.ಜ್ಯೋತಿಪ್ರಭಾ, ಮುಳಬಾಗಿಲು ತಾಲ್ಲೂಕು ಕೊಲದೇವಿ ಶಾಲೆಯ ಶಿಕ್ಷಕ ಸಿ.ಎನ್.ರಮೇಶ್, ಶ್ರೀನಿವಾಸಪುರ ತಾಲ್ಲೂಕು ಯದರೂರು ಶಾಲೆ ಸಹಶಿಕ್ಷಕ ವಿ.ಮುನಿಸ್ವಾಮಿ ಭಾಜನರಾಗಿದ್ದು, ಅವರನ್ನು ಸನ್ಮಾನಿಸಲಾಯಿತು.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಬಂಗಾರಪೇಟೆ ತಾಲ್ಲೂಕು ರಾಮಸಂದ್ರ ಶಾಲೆಯ ಆನಂದ್, ಕೆಜಿಎಫ್ ತಾಲ್ಲೂಕಿನ ಮರವೂರು ಶಾಲೆ ಪ್ರಭಾರಿ ಮುಖ್ಯಶಿಕ್ಷಕ ಬಿ.ನಾರಾಯಣಪ್ಪ, ಕೋಲಾರ ತಾಲ್ಲೂಕಿನ ಕೊಳಗಂಜನಹಳ್ಳಿ ಶಾಲೆಯ ಶಿಕ್ಷಕಿ ಸಿ.ಮುನಿಯಪ್ಪ, ಮಾಲೂರು ತಾಲ್ಲೂಕು ಚಿಕ್ಕಶಿವಾರ ಶಾಲೆಯ ಕೆ.ವಿ.ಪ್ರಮೀಳಾ, ಮುಳಬಾಗಿಲು ತಾಲ್ಲೂಕಿನ ಗೊಟ್ಟುಕುಂಟೆ ಶಾಲೆಯ ವಿ.ಉಮಾ, ಶ್ರೀನಿವಾಪುರ ತಾಲ್ಲೂಕು ಕೆಂಪರೆಡ್ಡಿವಾರಿಪಲ್ಲಿ ಶಾಲೆಯ ಶಿಕ್ಷಕ ವೈ.ಆರ್.ಲಕ್ಷ್ಮೀನಾರಾಯಣ ಅವರನ್ನು ಸನ್ಮಾನಿಸಲಾಯಿತು.